More

    ಕರೊನಾ ಬೆನ್ನಲ್ಲೇ ರಾಜ್ಯಕ್ಕೆ ಮತ್ತೊಂದು ಮಹಾಮಾರಿ ಎಂಟ್ರಿ! ನೇರ ಸಂಪರ್ಕದಿಂದಲೇ ಈ ರೋಗ ಹರಡುತ್ತೆ

    ಶಿವಮೊಗ್ಗ: ಕರೊನಾ ಸೋಂಕಿನ ಬೆನ್ನಲ್ಲೇ ರಾಜ್ಯಕ್ಕೆ ಮತ್ತೊಂದು ಮಹಾಮಾರಿ ಎಂಟ್ರಿ ಕೊಟ್ಟಿದೆ. ಕರೋನಾದಂತೆ ಈ ರೋಗ ನೇರ ಸಂಪರ್ಕದಿಂದಲೇ ಹರಡುತ್ತೆ!
    ಹೌದು, ಮಲೆನಾಡಿನ ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಈ ಕಾಯಿಲೆ ಹೆಸರು ಲುಂಪಿ ಸ್ಕಿನ್ ಡಿಸೀಸ್(ಚರ್ಮಗಂಟು ರೋಗ). ಪಾಕ್ಸ್ ವಿರಿಡೆ ಎಂಬ ವೈರಸ್​ನಿಂದ ಹರಡುವ ಚರ್ಮಗಂಟು ರೋಗ ಮಲೆನಾಡಿನ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪತ್ತೆಯಾಗಿದೆ.

    ಆಫ್ರಿಕಾ, ರಷ್ಯಾ, ಯೂರೋಪ್ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದ್ದ ಚರ್ಮಗಂಟು ರೋಗ ಭಾರತದ ಕೇರಳ ಹಾಗೂ ಒರಿಶಾದಲ್ಲೂ ಪತ್ತೆಯಾಗಿತ್ತು. ಬಳಿಕ ಮಲೆನಾಡಿನ ಗ್ರಾಮಗಳ ಜಾನುವಾರುಗಳಲ್ಲಿ ಕಾಣಿಸಿಕೊಂಡಿದೆ. ಈ ರೋಗವುಳ್ಳ ಜಾನುವಾರುಗಳ ನೇರ ಸಂಪರ್ಕ, ಮೇವು, ನೀರಿನಿಂದಲೂ ಹರಡುವ ಚರ್ಮಗಂಟು ರೋಗ ಶಿವಮೊಗ್ಗದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

    ರೋಗಗ್ರಸ್ತ ಜಾನುವಾರುಗಳನ್ನು ಗುಂಪಿನಿಂದ ಪ್ರತ್ಯೇಕವಾಗಿರಿಸಲು ಪಶುಪಾಲನಾ ಇಲಾಖೆ ಜಾಗೃತಿ ಮೂಡಿಸುತ್ತಿದೆ. ಗುಂಪಿನಲ್ಲಿ ಶೇ.‌20 ಜಾನುವಾರುಗಳಿಗೆ ರೋಗ ತಗುಲುತ್ತೆ. ರೋಗಗ್ರಸ್ತ ಜಾನುವಾರುಗಳಲ್ಲಿ ಶೇ.1 ರಿಂದ 5 ರಷ್ಟು ಜಾನುವಾರುಗಳು ಸಾವನ್ನಪ್ಪಲಿವೆ ಎಂದು ಎಚ್ಚರಿಸಿರುವ ಇಲಾಖೆ, ಜಾನುವಾರುಗಳಿಗೂ ಐಸೋಲೇಶನ್ ಮಾಡಲಾಗುತ್ತಿದೆ. ರೋಗ ಪತ್ತೆಯಾದ ಜಾಗದಲ್ಲಿ ಜಾತ್ರೆ, ಪಶು ಸಾಗಾಣಿಕೆ, ಪಶುಮೇಳ ನಿಷೇಧಿಸಲು ಇಲಾಖೆ ಸೂಚನೆ ನೀಡಿದೆ.

    ಕರೊನಾ ಸೋಂಕಿಗೆ ಜನ ಹೈರಾಣಾಗಿದ್ದಾರೆ. ಈಗಲೂ ಕೋವಿಡ್​ ಭೀತಿಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ಇಂತಹದ್ದೇ ಸಮಸ್ಯೆಗೆ ಇದೀಗ ಜಾನುವಾರುಗಳು ಸಿಲುಕಿವೆ.

    ಮಗಳನ್ನೇ ಮರ್ಯಾದಾ ಹತ್ಯೆ ಮಾಡಿದ ಅಪ್ಪ-ಮಕ್ಕಳು! ಈ ನಡುವೆ ಗ್ಯಾಂಗ್​ ರೇಪ್​ ವದಂತಿ ಹಬ್ಬಿಸಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts