More

    ಒಂದು ವರ್ಷ ಎಲ್ಲರನ್ನೂ ಪಾಸ್ ಮಾಡಿದ್ರೆ ಜಗತ್ತೇನೂ ಪ್ರಳಯ ಆಗಲ್ಲ!

    ತುಮಕೂರು: ಒಂದು ವರ್ಷ ಎಲ್ಲರನ್ನೂ ಪಾಸ್ ಮಾಡಿದರೆ ಜಗತ್ತು ಏನೂ ಪ್ರಳಯ ಆಗಲ್ಲ. ಸಿಎಂ ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್, ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್​ಗೆ ಹೇಳ್ತೀನಿ. ಆತೂರದ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

    ನ.17ರಂದು ಪದವಿ ಕಾಲೇಜು ಆರಂಭಿಸಲು ಸರ್ಕಾರದ ನಿರ್ಧರಿಸಿದ ಬೆನ್ನಲ್ಲೇ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ಒಂದು ವರ್ಷ ಶಾಲೆ-ಕಾಲೇಜು ಮುಂದಕ್ಕೆ ಹಾಕಿದ್ರೆ ಆಕಾಶ ಬೀಳಲ್ಲ. ಯಾವುದೇ ಕಾರಣಕ್ಕೂ ಶಾಲಾ- ಕಾಲೇಜು ತೆಗೆಯಬೇಡಿ. ಜನರ ಜೀವನದ ಜತೆ ಚೆಲ್ಲಾಟವಾಡುವ ಮೂರ್ಖತನದ ನಿರ್ಧಾರ ಇದಾಗಲಿದೆ ಎಂದು ಎಚ್ಚರಿಸಿದರು.

    ಒಂದು ವರ್ಷ ಎಲ್ಲರನ್ನೂ ಪಾಸ್ ಮಾಡಿದ್ರೆ ಜಗತ್ತೇನೂ ಪ್ರಳಯ ಆಗಲ್ಲ!ನಾನು ಮುಖ್ಯಮಂತ್ರಿ ಆಗುವುದು ಬಿಡುವುದು ಕೇಂದ್ರ ಹೈಕಮಾಂಡ್​ಗೆ ಬಿಟ್ಟಿದ್ದು. ಜಮೀರ್ ಖಾನ್​ದು ಅವರ ವೈಯಕ್ತಿಕ ಅಭಿಪ್ರಾಯ. ಅಭಿಮಾನದಿಂದ ಎಲ್ಲಾರು ಹೇಳುತ್ತಾರೆ. ಅದು ಪಕ್ಷದ ನಿರ್ಧಾರವಲ್ಲ ಎಂದು ಸಿದ್ದು ಸ್ಪಷ್ಟಪಡಿಸಿದರು.

    ಇನ್ನು ನನ್ನನ್ನು ಡಿಸಿಎಂ ಮಾಡಿದ್ದು ಅವರಲ್ಲ, ಆಗಲೇ ಸಿಎಂ ಆಗಬೇಕಿತ್ತು. ಇವರೇನು ಮಾಡಿದ್ರು. ನಾನು 1983 ಪಕ್ಷೇತರನಾಗಿ ಗೆದ್ದಿದ್ದೆ. ಆಗ ದೇವೇಗೌಡರು ಬೆಂಬಲಿಸಿದ್ದರಾ? ಎಂದು ದೇವೇಗೌಡರಿಗೆ ಸಿದ್ದು ತಿರುಗೇಟು ನೀಡಿದರು. ಕಟೀಲ್​ಗೆ ರಾಜಕೀಯ ಪ್ರೌಢಿಮೆ ಬಂದಿಲ್ಲ ಎಂದು ಹರಿಹಾಯ್ದರು.

    ನ.17ಕ್ಕೆ ಕಾಲೇಜು ಆರಂಭ, ತರಗತಿಗೆ ಬರೋದು-ಬಿಡೋದು ವಿದ್ಯಾರ್ಥಿಗಳಿಗೆ ಬಿಟ್ಟದ್ದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts