ಪಿಜ್ಜಾ ಸವಿದವರಿಗೆ ಬಿಗ್​ ಶಾಕ್​! ನಿಮ್ಮೆಲ್ಲರ ಡೇಟಾ ಸೋರಿಕೆಯಾಗಿದೆಯಂತೆ ನೋಡಿ...

pizza
Published on

ನವದೆಹಲಿ: ನೀವು ಇತ್ತೀಚೆಗೆ ಡೊಮಿನೋಸ್​ ಪಿಜ್ಜಾದಲ್ಲಿ ಆನ್​ಲೈನ್​ ಆರ್ಡರ್​ ಮಾಡಿ ಪಿಜ್ಜಾ ತಿಂದಿದ್ದೀರಾ? ಹಾಗಾದರೆ ಯಾವುದಕ್ಕೂ ಹುಷಾರಾಗಿರಿ. ಏಕೆಂದರೆ ಡೊಮಿನೋಸ್​ ಪಿಜ್ಜಾದಲ್ಲಿ ಆನ್​ಲೈನ್​ ಪಾವತಿ ಮಾಡಿದ ಲಕ್ಷಾಂತರ ಜನರ ಡೇಟಾ ಸೋರಿಕೆಯಾಗಿದೆ ಎಂದು ಸೈಬರ್​ ಸೆಕ್ಯುರಿಟಿ ತಂಡವೊಂದು ಮಾಹಿತಿ ನೀಡಿದೆ.

ಹಡ್ಸನ್​ ರಾಕ್​ ಸೈಬರ್​ ಸೆಕ್ಯುರಿಟಿ ಸಂಸ್ಥೆಯ ಮುಖ್ಯಸ್ಥ ಎಲಾನ್​ ಗಲ್​ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಡೊಮಿನೋಸ್​ನಲ್ಲಿ ಆನ್​ಲೈನ್​ ಪಾವತಿ ಭಾರತೀಯರಲ್ಲಿ ಸುಮಾರು 10 ಲಕ್ಷ ಮಂದಿಯ ಪಾವತಿ ವಿವರ ಸೋರಿಕೆಯಾಗಿದೆಯಂತೆ. ಅಷ್ಟೇ ಅಲ್ಲದೆ 18 ಕೋಟಿ ಗ್ರಾಹಕರ ಹೆಸರು, ಫೋನ್​ ನಂಬರ್​, ಇಮೇಲ್​, ಅಡ್ರೆಸ್​ ಸೋರಿಕೆಯಾಗಿದೆ ಎಂದು ಹೇಳಲಾಗಿದೆ. ಇದೆಲ್ಲ ಮಾಹಿತಿಯನ್ನಿಟ್ಟುಕೊಂಡು ಹ್ಯಾಕರ್​ 4 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾನೆ ಎಂದು ಹಡ್ಸನ್​ ಅವರು ತಿಳಿಸಿದ್ದಾರೆ.

ಭಾರತದಲ್ಲಿ ಕರೊನಾ ವೈರಸ್​ ದಾಳಿ ಆರಂಭವಾದಾಗಿನಿಂದ ಸೈಬರ್​ ಕ್ರೈಂ ಪ್ರಕರಣಗಳೂ ಹೆಚ್ಚಾಗುತ್ತಲೇ ಸಾಗಿವೆ. ಅನೇಕ ಪ್ರಸಿದ್ಧ ಆನ್​ಲೈನ್​ ಮಾರ್ಕೆಟಿಂಗ್​ ಸಂಸ್ಥೆಗಳ ಗ್ರಾಹಕರ ಮಾಹಿತಿ ಸೋರಿಕೆಯಾಗುತ್ತಿರುವ ಸುದ್ದಿಗಳು ಆಗಾಗ ಹರಿದಾಡುತ್ತಲೇ ಇದೆ. ಆದರೆ ಈ ಕುರಿತಾಗಿ ಡೊಮಿನೋಸ್​ ಇನ್ನೂ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. (ಏಜೆನ್ಸೀಸ್​)

Domino's data leaked

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net