More

    ರಾಜಧಾನಿಗೆ ಲಾಕ್​ಡೌನ್​ ಶಾಕ್​! ಏನಿರತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ​ ಮಾಹಿತಿ

    ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿ ಸೇರಿ ದೇಶದ ಹಲವು ಭಾಗಗಳಲ್ಲಿ ಕರೊನಾ ಸೋಂಕು ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣಲಾರಂಭಿಸಿದೆ. ಆ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಒಂದು ವಾರದ ಕಾಲ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಇಂದು ರಾತ್ರಿಯಿಂದ ಏಪ್ರಿಲ್​ 26ರವರೆಗೆ ಲಾಕ್​ಡೌನ್ ಇರಲಿದ್ದು, ಈ ಸಮಯದಲ್ಲಿ ಏನೆಲ್ಲ ಸೌಲಭ್ಯ ಲಭ್ಯವಿರುತ್ತದೆ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ..

    ನಿರ್ಬಂಧ ಯಾವುದಕ್ಕೆ?
    * ದೇವಸ್ಥಾನಗಳು, ಧಾರ್ಮಿಕ ಸ್ಥಳಗಳನ್ನು ತೆರೆಯಲು ಅನುಮತಿ ನೀಡಲಾಗಿದೆಯಾದರೂ ಭಕ್ತಾದಿಳಿಗೆ ಅನುಮತಿ ಇರುವುದಿಲ್ಲ
    * ಎಲ್ಲ ಖಾಸಗಿ ಸಂಸ್ಥೆಗಳು ಕಡ್ಡಾಯವಾಗಿ ವರ್ಕ್​ ಫ್ರಂ ಹೋಂ ಮಾಡಿಸಬೇಕು
    * ಅಗತ್ಯ ಸೇವೆ, ವೈದ್ಯಕೀಯ ವಲಯಕ್ಕೆ ಸಂಬಂಧಪಟ್ಟ ರಾಜ್ಯ ಕಚೇರಿಗಳನ್ನು ಹೊರೆತುಪಡಿಸಿ ಬೇರೆಲ್ಲ ರಾಜ್ಯ ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗುವುದು
    * ಮದುವೆ ಸಮಾರಂಭಗಳಿಗೆ 50 ಜನರು ಹಾಗೂ ಅಂತ್ಯಕ್ರಿಯೆಗಳಲ್ಲಿ 20 ಜನರಿಗೆ ಮಾತ್ರ ಅವಕಾಶ
    * ಮಾಲ್​ಗಳು, ಸಿನಿಮಾ ಹಾಲ್​ಗಳು, ಶಾಪಿಂಗ್​ ಕಾಂಪ್ಲೆಕ್ಸ್​ಗಳು, ಸ್ವಿಮ್ಮಿಂಗ್​ ಪೂಲ್​ಗಳು, ರೆಸ್ಟೋರೆಂಟ್ಸ್​, ಸೆಲೂನ್​, ಜಿಮ್​ಗಳು ಮತ್ತು ಸ್ಪಾಗಳನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ
    * ಸಾಮಾಜಿಕ, ರಾಜಕೀಯ, ಕ್ರೀಡಾ ಕಾರ್ಯಕ್ರಮಗಳಿಗೆ ಅನುಮತಿಯಿಲ್ಲ
    * ರಾಷ್ಟ್ರೀಯ ಕ್ರೀಡೆಗಳನ್ನು ವೀಕ್ಷಕರಿಲ್ಲದೆ ನಡೆಸತಕ್ಕದ್ದು

    ಇವರಿಗಿಲ್ಲ ನಿರ್ಬಂಧ:
    * ಆಹಾರ, ದಿನಸಿ, ಹಣ್ಣು ತರಕಾರಿ ಅಂಗಡಿ, ಡೇರಿ, ಹಾಲಿನ ಬೂತ್​ಗಳು, ಮೀನು ಮತ್ತು ಮಾಂಸ, ಮೆಡಿಕಲ್​ಗಳು, ಪತ್ರಿಕೆ ವಿತರಣಾ ಕೇಂದ್ರಗಳು
    * ಬ್ಯಾಂಕ್​, ಇನ್ಶುರೆನ್ಸ್​ ಆಫೀಸ್​, ಎಟಿಎಂಗಳು
    * ಟೆಲಿಕಮ್ಯುನಿಕೇಷನ್​, ಇಂಟರ್​ನೆಟ್​ ಸರ್ವೀಸ್​, ಕೇಬಲ್​ ಸರ್ವೀಸ್​ ಮತ್ತು ಐಟಿ ಸಂಬಂಧಪಟ್ಟ ಸೇವೆಗಳು
    * ಪೆಟ್ರೋಲ್​ ಬಂಕ್​ಗಳು, ಎಲ್​ಪಿಜಿ, ಸಿಎನ್​ಸಿ, ಪೆಟ್ರೋಲಿಯಂ ಮತ್ತು ಗ್ಯಾಸ್​ ರೀಟೆಲ್​ ಮತ್ತು ಸ್ಟೋರೇಜ್​ ಕೇಂದ್ರಗಳು
    * ನೀರಿನ ಸೌಲಭ್ಯ, ಪವರ್​ ಜನರೇಷನ್​, ಕೋಲ್ಡ್​ ಸ್ಟೋರೇಜ್​ ಮತ್ತು ವಾಟರ್​ಹೌಸ್​ ಸೇವೆ
    * ಖಾಸಗಿ ಸೆಕ್ಯುರಿಟಿ ಸವೀರ್ಸ್​
    * ಅಗತ್ಯ ವಸ್ತುಗಳ ಉತ್ಪಾದನಾ ಘಟಕಗಳು

    ಬಿಸಿನೆಸ್ ರಾಜಕಾರಣದಿಂದ ಇಷ್ಟೆಲ್ಲ ಆಗುತ್ತಿದೆ: ನಟ ಉಪೇಂದ್ರ

    ಸಾವಿನ ದವಡೆಗೆ ನೂಕುವ ಕ್ರಿಮಿ…. ಮತ್ತೆ ಸುದ್ದಿಯಲ್ಲಿ ಬಿಗ್​ಬಾಸ್​ ಸ್ಪರ್ಧಿ ಚೈತ್ರಾ ಕೋಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts