More

  ಪದವೀಧರರು, ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಿದ್ಧತೆ

  ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮಾಹಿತಿ — ಜೂ.3ರಂದು ಮತದಾನ

  ವಿಜಯವಾಣಿ ಸುದ್ದಿಜಾಲ ಉಡುಪಿ
  ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನ ಪರಿಷತ್​ನ ನೈಋತ್ಯ ಪದವೀಧರರ ಕ್ಷೇತ್ರಕ್ಕೆ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಕಾರ್ಯಸೂಚಿ ಹೊರಡಿಸಿದ್ದು, ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಸಿದ್ಧತೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾಹಿತಿ ನೀಡಿದರು.

  ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇ 9ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಕೆಗೆ ಮೇ 16 ಕೊನೆಯ ದಿನವಾಗಿದೆ. ಮೇ 17ರಂದು ನಾಮಪತ್ರಗಳ ಪರಿಶೀಲನೆ, ಮೇ 20 ಉಮೇದುವಾರಿಕೆ ಹಿಂಪಡೆಯುವ ಕೊನೆಯ ದಿನವಾಗಿದ್ದು, ಜೂ.3ರಂದು ಬೆಳಗ್ಗೆ 8ರಿಂದ 4ರ ವರೆಗೆ ಮತದಾನ, ಜೂ. 6ರಂದು ಮತ ಎಣಿಕೆ ನಡೆಯಲಿದೆ. ಜೂ.12ರಂದು ಚುನಾವಣಾ ಪ್ರಕ್ರಿಯ ಮುಕ್ತಾಯದ ದಿನವಾಗಿದೆ ಎಂದು ತಿಳಿಸಿದರು.

  ಮತದಾರರ ಮಾಹಿತಿ

  ನೈಋತ್ಯ ಪದವೀಧರ ಕ್ಷೇತ್ರದಲ್ಲಿ 6,787 ಪುರುಷ ಮತದಾರರು, 7,976 ಮಹಿಳಾ ಮತದಾರರು ಸೇರಿ ಒಟ್ಟು 14,763 ಮತದಾರರಿದ್ದಾರೆ. ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ 1,292 ಪುರುಷ, 1,645 ಮಹಿಳೆಯರು ಸೇರಿ ಒಟ್ಟು 2,937 ಮತದಾರರಿದ್ದಾರೆ ಎಂದು ತಿಳಿಸಿದರು.

  ಮತಗಟ್ಟೆ ವಿವರ

  ನೈಋತ್ಯ ಪದವೀಧರ ಕ್ಷೇತ್ರಕ್ಕೆ 10 ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ತಲಾ 10 ಮತಗಟ್ಟೆಯನ್ನು ಒಂದೇಕಡೆ ತೆರೆಯಲಾಗುತ್ತಿದೆ. ಒಂದೇ ಕೊಠಡಿಯೊಳಗೆ ಪ್ರತ್ಯೇಕವಾಗಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಸರ್ಕಾರಿ ಪ.ಪೂ. ಕಾಲೇಜು ಬೈಂದೂರಿನಲ್ಲಿ ಮಧ್ಯ ಭಾಗದಲ್ಲಿ ನೈಋತ್ಯ ಪದವೀಧರರಿಗೆ ಹಾಗೂ ಉತ್ತರ ಭಾಗದಲ್ಲಿ ಶಿಕ್ಷಕರಿಗೆ ಮತದಾನಕ್ಕೆ ಅವಕಾಶ ಮಾಡಲಾಗಿದೆ. ಅದರಂತೆ ಸ.ಪ.ಪೂ. ಕಾಲೇಜು ಶಂಕರನಾರಾಯಣ (ಪೂರ್ವಭಾಗ-ಪಶ್ಚಿಮಭಾಗ), ಸ.ಪ.ಪೂ. ಕಾಲೇಜು ಕುಂದಾಪುರ (ಉತ್ತರಭಾಗ- ದಕ್ಷಿಣಭಾಗ), ಸ.ಪ.ಪೂ. ಕಾಲೇಜು ಬ್ರಹ್ಮಾವರ (ಪೂರ್ವಭಾಗ-ಪಶ್ಚಿಮಭಾಗ), ಮಣಿಪಾಲ್​ ಜ್ಯೂ.ಕಾ. ಮಣಿಪಾಲ್​ (ಪೂರ್ವಭಾಗ- ಪಶ್ಚಿಮಭಾಗ), ಬಾಲಕಿಯರ ಸ.ಪ.ಪೂ. ಕಾಲೇಜು ಉಡುಪಿ (ಎರಡೂ ಕ್ಷೇತ್ರ), ಸ.ಮಾ.ಹಿ.ಪ್ರಾ. ಶಾಲೆ ಕಾಪು (ಉತ್ತರಭಾಗದಲ್ಲಿ ಪದವೀಧರರು), ಸ.ಪ್ರ.ದ. ಕಾಲೇಜು ಕಾಪು (ಶಿಕ್ಷಕರು) ಸ.ಹಿ.ಪ್ರಾ.ಶಾಲೆ ಅಜೆಕಾರು (ಪಶ್ಚಿಮಭಾಗ-ಪೂರ್ವಭಾಗ), ಸ.ಪ.ಪೂ. ಕಾಲೇಜು ಕಾರ್ಕಳ (ಉತ್ತರಭಾಗ- ದಕ್ಷಿಣಭಾಗ), ತಾಲೂಕು ಆಡಳಿತ ಸೌಧ ಹೆಬ್ರಿಯಲ್ಲಿ ಎರಡೂ ಕ್ಷೇತ್ರದ ಮತದಾರರಿಗೆ ಹಕ್ಕು ಚಲಾಯಿಸಲು ಅವಕಾಶವಿರುತ್ತದೆ ಎಂದರು.

  ನೈಋತ್ಯ ಪದವೀಧರ ಕ್ಷೇತ್ರದ ಮತದಾರರ ಮಾಹಿತಿ

  ತಾಲೂಕುಗಂಡುಹೆಣ್ಣು ಒಟ್ಟು
  ಬೈಂದೂರು
  – 335 – 235 – 570
  ಕುಂದಾಪುರ – 965 – 824 – 1,789
  ಬ್ರಹ್ಮಾವರ – 1,295 – 1,453 – 2,748
  ಉಡುಪಿ – 2,716 – 3,502 – 6,218
  ಕಾಪು – 551 – 850 – 1,401
  ಕಾರ್ಕಳ – 733 – 944 – 1,677
  ಹೆಬ್ರಿ – 192 – 168 – 360
  ಒಟ್ಟು – 6,787 – 7,976 – 14,763

  ನೈಋತ್ಯ ಶಿಕ್ಷಕರ ಕ್ಷೇತ್ರದ ಮತದಾರರ ಮಾಹಿತಿ

  ತಾಲೂಕುಗಂಡುಹೆಣ್ಣು ಒಟ್ಟು
  ಬೈಂದೂರು – 113 -57 -170
  ಕುಂದಾಪುರ – 270 – 264 – 534
  ಬ್ರಹ್ಮಾವರ – 255 – 314 – 569
  ಉಡುಪಿ– 338 – 569 – 907
  ಕಾಪು– 76 – 139 – 215
  ಕಾರ್ಕಳ – 196 – 265 – 461
  ಹೆಬ್ರಿ – 44 – 37 – 81
  ಒಟ್ಟು – 1,292 -1,645 – 2,937

  ಎರಡೂ ಕ್ಷೇತ್ರದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮೇ 6ರ ವರೆಗೆ ಮಾತ್ರ ಕಾಲಾವಕಾಶ ಇದೆ. ನಂತರ ಬಂದ ಯಾವುದೇ ಅರ್ಜಿಯನ್ನು ಸ್ವೀಕರಿಸುವುದಿಲ್ಲ. ಎರಡೂ ಕ್ಷೇತ್ರಕ್ಕೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಚುನಾವಣಾ ಅಧಿಕಾರಿಗಳಾಗಿದ್ದು, ಉಡುಪಿ ಜಿಲ್ಲಾಧಿಕಾರಿ ಸಹಾಯಕ ಚುನಾವಣಾ ಅಧಿಕಾರಿಗಳಾಗಿರುತ್ತಾರೆ. ನಾಮಪತ್ರಗಳ ನಮೂನೆಗಳನ್ನು ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯಿಂದಲೇ ಪಡೆದು, ಭರ್ತಿ ಮಾಡಿ ಅಲ್ಲಿಯೇ ನೀಡಬೇಕು.

  ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ, ಉಡುಪಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts