ಅಪ್ಪ-ಅಮ್ಮ ಹೇಳಿದ್ದ ಸುಳ್ಳನ್ನು ಬಿಚ್ಚಿಟ್ಟ ಕಂಗನಾ! ಬಸ್​ ಸ್ಟ್ಯಾಂಡ್​ನಲ್ಲಿ ಕಾಯುತ್ತಿದ್ದರಂತೆ ಅವರು..!

kangana
Published on

ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರ ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವವಿಂದು. ಈ ಶುಭ ದಿನದಂದು ಕಂಗನಾ ತನ್ನ ತಂದೆ ತಾಯಿ ಹೇಳಿದ್ದ ಒಂದು ಸುಳ್ಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಅವರ ತಂದೆ ತಾಯಿಯದು ಪ್ರೇಮ ವಿವಾಹವಾಗಿತ್ತಂತೆ. ಅಮ್ಮ ಕಾಲೇಜು ಮುಗಿಸಿ ಹೋಗುವಾ ಬಸ್​ ಸ್ಟ್ಯಾಂಡ್​ನಲ್ಲಿ ನಿಂತಿದ್ದನ್ನು ನೋಡಿದ್ದ ಅಪ್ಪ ಮೊದಲ ನೋಟಕ್ಕೆ ಪ್ರೇಮದ ಬಲೆಗೆ ಸಿಕ್ಕಿದ್ದರಂತೆ. ಅದಾದ ಮೇಲೆ ಪ್ರತಿದಿನ ಅವರಿಗಾಗಿ ಆ ಬಸ್​ ಸ್ಟ್ಯಾಂಡ್​ಗೆ ಹೋಗುತ್ತಿದ್ದರಂತೆ. ಅವರ ಪ್ರೇಮ ನಿವೇದನೆಯನ್ನು ಕಂಗನಾ ಅವರ ಅಜ್ಜನ ಬಳಿ ಹೋಗಿ ಹೇಳಿದ್ದರಂತೆ. ಆದರೆ ಸಮಾಜದಲ್ಲಿ ಅವರಿಗೆ ಕೆಟ್ಟ ಹೆಸರಿತ್ತು ಎನ್ನುವ ಕಾರಣಕ್ಕೆ ನಿವೇದನೆಯನ್ನು ಮೊದಲಿಗೆ ನಿರಾಕರಿಸಲಾಗಿತ್ತಂತೆ. ಅದಾದ ಮೇಲೆ ಕಂಗನಾ ಅವರ ತಾಯಿಯೇ ಕುಟುಂಬದ ಮನವೊಲಿಸಿ ಪ್ರೇಮ ವಿವಾಹವಾಗಿದ್ದರಂತೆ.

ಆದರೆ ಈ ಯಾವುದೇ ವಿಚಾರವನ್ನು ಅವರು ಮಕ್ಕಳಾದ ಕಂಗನಾ ಅಥವಾ ರಂಗೋಲಿ ಬಳಿ ಹಂಚಿಕೊಂಡಿರಲಿಲ್ಲ. ತಮ್ಮದು ಅರೆಂಜ್​ ಮ್ಯಾರೇಜ್​ ಎಂದು ಹೇಳಿಕೊಂಡಿದ್ದರಂತೆ. ಈ ರೀತಿ ಅಪ್ಪ ಅಮ್ಮ ನಮ್ಮ ಬಳಿ ಸುಳ್ಳು ಹೇಳಿದ್ದರು. ಆದರೆ ನಮ್ಮ ಅಜ್ಜಿ ನಮಗೆ ನಿಜ ವಿಚಾರವನ್ನು ತಿಳಿಸಿಕೊಟ್ಟರು ಎಂದು ಕಂಗನಾ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

Kangana Ranawat parents lie

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net