ನೀವು ಬೈಕ್​​ ರೈಡ್​ ಮಾಡುವಾಗ ನಾಯಿಗಳು ಬೆನ್ನಟ್ಟಿವೆಯೇ? ಇಲ್ಲಿದೆ ನೋಡಿ ಅಚ್ಚರಿ ಕಾರಣ... Dogs Chasing

Dogs Chasing
Published on

Dogs Chasing : ದ್ವಿಚಕ್ರ ವಾಹನಗಳಲ್ಲಿ ಅಥವಾ ಕಾರುಗಳಲ್ಲಿ ಸವಾರಿ ಮಾಡುವಾಗ ಕೆಲ ನಾಯಿಗಳು ಬೊಗಳುತ್ತಾ ವಾಹನಗಳನ್ನು ಬೆನ್ನಟ್ಟಿ ಬರುತ್ತವೆ. ವಿಚಿತ್ರ ಸಂಗತಿ ಏನೆಂದರೆ ಈ ನಾಯಿಗಳು ಸಾಮಾನ್ಯವಾಗಿ ರಸ್ತೆಯಲ್ಲಿ ನಡೆದಾಡುವವರಿಗೆ ಏನು ಮಾಡುವುದಿಲ್ಲ. ಆದರೆ, ಚಲಿಸುವ ವಾಹನದ ಹಿಂದೆ ಕಿಲೋಮೀಟರ್​ವರೆಗೆ ಓಡಿ ಬರುತ್ತವೆ. ಈ ಪರಿಸ್ಥಿತಿ ನಿಮ್ಮ ಜೀವನದಲ್ಲೂ ಸಂಭವಿಸಿರಬೇಕು.

ಕೆಲವೊಮ್ಮೆ ನಾಯಿಗಳು ನಿಮ್ಮ ಹಿಂದೆ ತುಂಬಾ ಕೋಪದಿಂದ ಬರುವಾಗ ಹೆದರಿ ವಾಹನದ ಸಮತೋಲನ ಕಳೆದುಕೊಳ್ಳುವ ಸಂದರ್ಭಗಳಿವೆ. ಕೆಲವರು ವಾಹನದಿಂದ ಕೆಳಗೆ ಸಹ ಬಿದ್ದಿದ್ದಾರೆ. ಅದೇನೇ ಇರಲಿ, ನಾಯಿಗಳು ಹೀಗೆ ಬೆನ್ನತ್ತಿ ಬರುವುದರ ಹಿಂದಿನ ಕಾರಣ ನಿಮಗೆ ಗೊತ್ತಿದೆಯೇ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ನಾಯಿಯ ಮೂಗುಗಳು ಮಾನವ ಮೂಗುಗಳಿಗಿಂತ ಬಹಳ ಭಿನ್ನವಾಗಿವೆ. ಇವು ದೂರದಿಂದಲೂ ಯಾವುದೇ ವಾಸನೆಯನ್ನು ಗ್ರಹಿಸುತ್ತವೆ. ನಿಮ್ಮ ಕಾರು ಅಥವಾ ಬೈಕ್​​ ವಿವಿಧ ಸ್ಥಳಗಳಲ್ಲಿ ಚಲಿಸಿದಾಗ, ಇತರ ನಾಯಿಗಳು ನಿಮ್ಮ ವಾಹನಗಳ ಮೇಲೆ ಮೂತ್ರ ವಿಸರ್ಜನೆ ಮಾಡಿರಬಹುದು. ಅದರ ವಾಸನೆ ಕಾರಿನಲ್ಲಿ ಹಾಗೇ ಇರುತ್ತದೆ. ನಾಯಿಗಳು ಆ ವಾಸನೆಯನ್ನು ಗುರುತಿಸುತ್ತವೆ ಮತ್ತು ಮತ್ತೊಂದು ನಾಯಿ ತಮ್ಮ ಪ್ರದೇಶವನ್ನು ಪ್ರವೇಶಿಸಿದೆ ಎಂದು ಅರ್ಥಮಾಡಿಕೊಳ್ಳುತ್ತದೆ. ಅದಕ್ಕಾಗಿಯೇ ನಿಮ್ಮ ಕಾರನ್ನು ಬೆನ್ನತ್ತಿ ಬೊಗಳುತ್ತವೆ.

ವಾಹನಗಳ ಟೈರ್ ಮೇಲೆ ನಾಯಿಗಳು ಮೂತ್ರ ವಿಸರ್ಜನೆ ಮಾಡುವುದನ್ನು ನೀವು ಆಗಾಗ ನೋಡುತ್ತಿರುತ್ತೀರಿ. ಆ ಸ್ಥಳ ತಮ್ಮದು ಎಂದು ಇತರ ನಾಯಿಗಳಿಗೆ ತಿಳಿಸಲು ಮೂತ್ರ ವಿಸರ್ಜನೆ ಮಾಡುತ್ತವೆ. ನಿಮ್ಮ ಕಾರು ಒಂದು ಪ್ರದೇಶಕ್ಕೆ ಚಲಿಸಿದಾಗ ಇತರ ನಾಯಿಗಳು ಟೈರ್‌ನಲ್ಲಿನ ಮೂತ್ರದ ವಾಸನೆ ಗ್ರಹಿಸುತ್ತವೆ. ಈ ಕಾರಣದಿಂದಾಗಿ, ಬೇರೆ ನಾಯಿಗಳು ತಮ್ಮ ಪ್ರದೇಶವನ್ನು ಪ್ರವೇಶಿಸಿವೆ ಎಂದು ಭಾವಿಸುತ್ತವೆ.

ನಾಯಿಗಳು ತುಂಬಾ ಭಾವನಾತ್ಮಕ ಪ್ರಾಣಿಗಳು. ಅವರು ತಮ್ಮ ಸಹಚರರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತಾರೆ. ಯಾವುದಾದರೂ ಒಂದು ವಾಹನ ತಮ್ಮ ಸಹಚರರನ್ನು ಗಾಯಗೊಳಿಸಿದರೆ ಅಥವಾ ಹಾನಿಗೊಳಿಸಿದರೆ ನಾಯಿಗಳು ಆ ವಾಹನವನ್ನು ಶಾಶ್ವತವಾಗಿ ನೆನಪಿಸಿಕೊಳ್ಳುತ್ತವೆ. ಅಂತಹ ಸಂದರ್ಭದಲ್ಲೂ ನಾಯಿಗಳು ವಾಹನವನ್ನು ಕಂಡರೆ ಬೊಗಳುತ್ತಾ ಓಡುತ್ತವೆ. ಇದು ನಾಯಿಗಳಿಗೆ ಒಂದು ರೀತಿಯ ಪ್ರತೀಕಾರದಂತೆ. ನಾಯಿಗಳು ತಮ್ಮ ಸಂಗಾತಿಯ ಸಾವಿಗೆ ಸೇಡು ತೀರಿಸಿಕೊಳ್ಳಲು ಬಯಸುತ್ತವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net