ಚಳಿಗಾಲದಲ್ಲಿ ಪಪ್ಪಾಯಿ ತಿಂದರೆ ಏನಾಗುತ್ತದೆ ಗೊತ್ತಾ? ಇಲ್ಲಿದೆ ನೋಡಿ ಬಹಳ ಉಪಯುಕ್ತ ಮಾಹಿತಿ... Papaya in Winter

Papaya in Winter
Published on

Papaya in Winter : ದೇಶದೆಲ್ಲೆಡೆ ಕೊರೆಯುವ ಚಳಿ ಇದೆ. ಬೆಳಗ್ಗೆ ಎದ್ದೇಳುವುದಕ್ಕೂ ತುಂಬಾ ಕಷ್ಟವಾಗುತ್ತಿದೆ. ಇಡೀ ದಿನ ಚಳಿಯ ಎಫೆಕ್ಟ್​ ಇದ್ದು, ತಣ್ಣೀರು ಮುಟ್ಟುವುದಕ್ಕೂ ಚಿಂತಿಸುವಂತಾಗಿದೆ. ಇನ್ನು ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ಏಕೆಂದರೆ, ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ರೋಗನಿರೋಧಕ ಶಕ್ತಿ ವೇಗವಾಗಿ ದುರ್ಬಲಗೊಳ್ಳುವುದರಿಂದ ವಿವಿಧ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುವುದನ್ನು ತಡೆಯಲು, ನೀವು ಉತ್ತಮ ಆಹಾರವನ್ನು ಸೇವಿಸಬೇಕು. ಅಲ್ಲದೆ, ನಿಮ್ಮ ಜೀವನಶೈಲಿಯನ್ನೂ ಬದಲಾಯಿಸಿಕೊಳ್ಳಬೇಕು ಮತ್ತು ಶೀತ ವಾತಾವರಣದಿಂದ ದೂರವಿರಬೇಕು.

ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ, ಶೀತ ಮತ್ತು ಜ್ವರದಂತಹ ಋತುಮಾನದ ಕಾಯಿಲೆಗಳು ಬಹಳಷ್ಟು ತೊಂದರೆಗಳನ್ನು ಉಂಟುಮಾಡಬಹುದು. ಅದೇನೇ ಇರಲಿ, ತಣ್ಣನೆಯ ವಾತಾವರಣದಲ್ಲಿ ನಿಮ್ಮ ದೇಹವನ್ನು ಆರೋಗ್ಯವಾಗಿರಿಸಿಕೊಳ್ಳಬೇಕೆಂದರೆ ಪ್ರತಿದಿನ ಪಪ್ಪಾಯಿಯನ್ನು ಸೇವಿಸಿ. ಇದು ದೇಹವನ್ನು ಹೈಡ್ರೇಟ್ ಮಾಡುವ ಸೂಪರ್ ಫುಡ್ ಆಗಿದೆ. ತಣ್ಣನೆಯ ವಾತಾವರಣದಲ್ಲಿ ಇದನ್ನು ತಿನ್ನುವುದರಿಂದ ದೇಹದಲ್ಲಿನ ನೀರಿನ ಕೊರತೆಯನ್ನು ಸರಿಪಡಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತದೆ.

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 200 ಗ್ರಾಂ ಪಪ್ಪಾಯಿಯನ್ನು ತಿಂದರೆ ದೇಹಕ್ಕೆ ಸಂಪೂರ್ಣ ಪೋಷಣೆ ದೊರೆಯುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಹಣ್ಣು ಪೋಷಕಾಂಶಗಳ ಕೊರತೆಯನ್ನು ಸರಿಪಡಿಸುತ್ತದೆ ಮತ್ತು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಪ್ರತಿದಿನ ಪಪ್ಪಾಯಿ ತಿನ್ನುವುದರಿಂದ ಏನೆಲ್ಲಾ ಆರೋಗ್ಯ ಲಾಭಗಳು ಸಿಗುತ್ತವೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ರೋಗನಿರೋಧಕ ಶಕ್ತಿ ಹೆಚ್ಚಳ

ಪಪ್ಪಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಶೀತ ಮತ್ತು ಜ್ವರದಂತಹ ಸೀಸನಲ್​ ಕಾಯಿಲೆಗಳನ್ನು ತಡೆಯುತ್ತದೆ. ಪ್ರತಿದಿನ ಈ ಹಣ್ಣನ್ನು ತಿನ್ನುವುದರಿಂದ ಯಾವುದೇ ಸೋಂಕುಗಳು ಬರುವುದಿಲ್ಲ. ಪಪ್ಪಾಯಿಯನ್ನು ತಿನ್ನುವುದರಿಂದ ನೀವು ಆರೋಗ್ಯವಾಗಿರುತ್ತೀರಿ ಮತ್ತು ನಿಮ್ಮನ್ನು ರೋಗಗಳಿಂದ ದೂರವಿಡುತ್ತದೆ.

ಉತ್ತಮ ಜೀರ್ಣಕ್ರಿಯೆ

ಚಳಿಗಾಲದಲ್ಲಿ ಮಲಬದ್ಧತೆ, ಗ್ಯಾಸ್ ಮತ್ತು ಅಸಿಡಿಟಿಯಂತಹ ಜೀರ್ಣಕಾರಿ ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ಪ್ರತಿನಿತ್ಯ ಪಪ್ಪಾಯಿಯನ್ನು ತಿಂದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ಪಪ್ಪಾಯಿಯಲ್ಲಿರುವ ಪಪೈನ್ ಕಿಣ್ವ ಮತ್ತು ಫೈಬರ್ ಅಂಶ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನಿತ್ಯ 200 ಗ್ರಾಂ ಪಪ್ಪಾಯಿಯನ್ನು ತಿಂದರೆ ಗಂಟೆಗಟ್ಟಲೆ ಟಾಯ್ಲೆಟ್​ನಲ್ಲಿ ಕುಳಿತುಕೊಳ್ಳುವ ಅಗತ್ಯ ಬೀಳುವುದಿಲ್ಲ.

ತೂಕ ನಿಯಂತ್ರಣ ( Papaya in Winter )

ಪಪ್ಪಾಯಿ ತೂಕ ಇಳಿಸಲು ಸಹಾಯ ಮಾಡುತ್ತದೆ. ಈ ಹಣ್ಣು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಹೊಂದಿದೆ. ಹಾಗಾಗಿ ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಶೀತ ವಾತಾವರಣದಲ್ಲಿ, ವ್ಯಾಯಾಮದ ಕೊರತೆ ಮತ್ತು ಅತಿಯಾಗಿ ತಿನ್ನುವುದರಿಂದ ತೂಕ ಹೆಚ್ಚಾಗುವ ಅಪಾಯವಿದೆ. ಅಂತಹ ಸಂದರ್ಭಗಳಲ್ಲಿ, ಪಪ್ಪಾಯಿಯನ್ನು ಪ್ರತಿದಿನ ತಿನ್ನುವುದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಚರ್ಮ ತೇವಾಂಶದಿಂದ ಕೂಡಿರುತ್ತದೆ

ಚಳಿಗಾಲದಲ್ಲಿ ಕಡಿಮೆ ನೀರು ಸೇವನೆಯಿಂದ ತ್ವಚೆ ಒಣಗುತ್ತದೆ. ಅಂತಹ ಸಂದರ್ಭಗಳಲ್ಲಿ, ತ್ವಚೆಯನ್ನು ಹೈಡ್ರೇಟ್ ಮಾಡಲು ಪಪ್ಪಾಯಿಯನ್ನು ಪ್ರತಿದಿನ ತಿನ್ನುವುದು ಉತ್ತಮ. ಇದು ಚರ್ಮವನ್ನು ಆರೋಗ್ಯಕರವಾಗಿಡಲು ಪೋಷಿಸುತ್ತದೆ. ವಿಟಮಿನ್ ಎ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳಿಂದ ಸಮೃದ್ಧವಾಗಿರುವ ಪಪ್ಪಾಯಿಯು ಚರ್ಮದಲ್ಲಿ ತೇವಾಂಶವನ್ನು ಕಾಪಾಡುತ್ತದೆ.

ಹೃದಯದ ಆರೋಗ್ಯ

ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್‌ನಲ್ಲಿ ಸಮೃದ್ಧವಾಗಿರುವ ಪಪ್ಪಾಯಿಯನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ. ಒಂದು ಪ್ಲೇಟ್ ಪಪ್ಪಾಯಿ ತಿನ್ನುವುದರಿಂದ ಎಲ್​ಡಿಎಲ್ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ.

papaya

ಮಧುಮೇಹಿಗಳಿಗೆ ಪಪ್ಪಾಯಿ ಉತ್ತಮ

ಪಪ್ಪಾಯಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಹಣ್ಣು. ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರವನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುವ ಅಪಾಯ ಇರುವುದಿಲ್ಲ. ಮಧುಮೇಹಿಗಳು ಇದನ್ನು ಪ್ರತಿದಿನ ಸೇವಿಸಿದರೆ ಆರೋಗ್ಯಕರ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವು ಸಹ ಸಾಮಾನ್ಯವಾಗಿರುತ್ತದೆ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್​ ನೆಟ್​” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net