ನೀವು ಆಗಾಗ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಇಲ್ಲಿದೆ ನೋಡಿ ಸುಲಭ ಪರಿಹಾರ... Constipation

Constipation
Published on

Constipation : ಇಂದು ಅನೇಕ ಜನರನ್ನು ಕಾಡುತ್ತಿರುವ ಸಾಮಾನ್ಯ ಕಾಯಿಲೆಗಳಲ್ಲಿ ಮಲಬದ್ಧತೆಯು ಕೂಡ ಒಂದು. ಚಿಕ್ಕವರಿಂದ ಹಿಡಿದು ದೊಡ್ಡವರೆಗೂ ಮಲಬದ್ಧತೆ ಸಮಸ್ಯೆ ಸಾಮಾನ್ಯವಾಗಿದೆ. ಬೆಳಿಗ್ಗೆ ನಿತ್ಯಕರ್ಮಗಳನ್ನು ಮುಗಿಸುವಾಗ ತಮ್ಮ ಹೊಟ್ಟೆಯನ್ನು ಸರಿಯಾಗಿ ಖಾಲಿ ಮಾಡಲು ಹೆಣಗಾಡುತ್ತಾರೆ. ಇದರಿಂದ ಸಾಕಷ್ಟು ಕಿರಿಕಿರಿ ಸಹ ಅನುಭವಿಸುತ್ತಾರೆ.

ಇನ್ನು ಮಲಬದ್ಧತೆ ಸಮಸ್ಯೆ ಹೋಗಲಾಡಿಸಲು ಅನೇಕರು ನಾನಾ ರೀತಿಯ ಪ್ರಯತ್ನಗಳನ್ನು ಮಾಡಿ, ಸಾಧ್ಯವಾಗದೇ ಸುಸ್ತಾಗುತ್ತಾರೆ. ಇನ್ನು ಕೆಲವರು ಮಲಬದ್ಧತೆ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಕಷ್ಟ ಅನುಭವಿಸುತ್ತಾರೆ. ಈ ಸಮಸ್ಯೆಯನ್ನು ಹೋಗಲಾಡಿಸಲು ನಾರಿನಂಶ ಅಧಿಕವಾಗಿರುವ ಆಹಾರಗಳನ್ನು ಸೇವಿಸಬೇಕು. ವಯಸ್ಕರು ದಿನಕ್ಕೆ ಕನಿಷ್ಠ 25 ಗ್ರಾಂ ಫೈಬರ್ ಅನ್ನು ಸೇವಿಸಬೇಕು. ಕಡಿಮೆ ಪ್ರಮಾಣದ ಫೈಬರ್ ಸೇವನೆಯು ಮಲಬದ್ಧತೆಯ ಅಪಾಯವನ್ನು ಹೆಚ್ಚಿಸುತ್ತದೆ.

ಅಂದಹಾಗೆ ಫೈಬರ್ ಹೊಂದಿರುವ ಅನೇಕ ಆಹಾರಗಳಿವೆ. ಅವುಗಳಲ್ಲಿ ನೀವು ಯಾವುದನ್ನು ಆರಿಸುತ್ತೀರಿ ಎಂಬುದು ಮುಖ್ಯ. ಮಲಬದ್ಧತೆಯ ಸಮಸ್ಯೆ ತೀವ್ರವಾಗಿದ್ದರೆ ನಾರಿನಂಶವಿರುವ ಹಣ್ಣುಗಳೊಂದಿಗೆ ಜ್ಯೂಸ್ ಮಾಡಿ ಕುಡಿಯುವುದರಿಂದ ಬೇಗನೆ ಪರಿಹಾರ ದೊರೆಯುತ್ತದೆ.

ಜ್ಯೂಸ್ ಮಾಡುವುದು ಹೇಗೆ?

ಸೇಬು, ಬೆರ್ರಿ, ಆವಕಾಡೋ, ಪಾಲಕ್​ ಮತ್ತು ಚಿಯಾ ಬೀಜಗಳನ್ನು ತೆಗೆದುಕೊಳ್ಳಿ. ಜ್ಯೂಸ್​ ತಯಾರಿಸಲು ಅವುಗಳನ್ನು ಒಂದು ಕಪ್ ನೀರಿನೊಂದಿಗೆ ಸಮಾನ ಪ್ರಮಾಣದಲ್ಲಿ ರುಬ್ಬಿಕೊಳ್ಳಿ. ಬಳಿಕ ಒಂದು ಲೋಟಕ್ಕೆ ಹಾಕಿಕೊಂಡು ಸೇವಿಸಿ. ಬೆಳಗಿನ ಸಮಯದಲ್ಲಿ ಇದನ್ನು ಸೇವಿಸುವುದರಿಂದ ಕರುಳಿನ ಚಲನೆಯನ್ನು ಉತ್ತೇಜಿಸಲು ಮತ್ತು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ.

ನಿಮ್ಮ ದೈನಂದಿನ ಆಹಾರದಲ್ಲಿ ಫೈಬರ್ ಭರಿತ ಆಹಾರಗಳನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ. ಅಲ್ಲದೆ, ಸಾಕಷ್ಟು ನೀರು ಕುಡಿಯುವುದನ್ನು ಮರೆಯಬೇಡಿ. ದಿನಕ್ಕೆ ಕನಿಷ್ಠ 2 ರಿಂದ 2.5 ಲೀಟರ್​ ನೀರು ಕುಡಿಯಿರಿ. ಬಹುಮುಖ್ಯವಾಗಿ ಸಮಯಕ್ಕೆ ಸರಿಯಾಗಿ ತಿನ್ನಿರಿ. ಇವೆಲ್ಲವನ್ನೂ ನಿತ್ಯವೂ ಅನುಸರಿಸಿದರೆ ಮಲಬದ್ಧತೆಯಿಂದ ನೀವು ಸುಲಭವಾಗಿ ಪರಿಹಾರ ಪಡೆಯಬಹುದು.

ಗಮನಿಸಿ: ಈ ಮೇಲಿನ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ. ಇದನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದ್ದು, ವಿಜಯವಾಣಿ ಡಾಟ್​ ನೆಟ್​ ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net