

Millionaire Yoga : ನಾವೀಗ ವರ್ಷದ ಕೊನೆಯ ತಿಂಗಳು ಡಿಸೆಂಬರ್ನಲ್ಲಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ 2024 ಮುಗಿದು 2025ರ ಹೊಸ ವರ್ಷ ಬರಲಿದೆ. ಈ ಹೊಸ ವರ್ಷದಲ್ಲಾದರೂ ತಮ್ಮ ಅದೃಷ್ಟ ಬದಲಾಗುತ್ತಾ ಎಂದು ಯೋಚನೆ ಮಾಡುವವರಿದ್ದಾರೆ. ಅದಕ್ಕಾಗಿ ತಮ್ಮ ರಾಶಿಭವಿಷ್ಯ ತಿಳಿದುಕೊಳ್ಳಲು ಕೆಲವು ತೀವ್ರ ಕುತೂಹಲವನ್ನು ಹೊಂದಿರುತ್ತಾರೆ.
ಮುಂಬರುವ ಹೊಸ ವರ್ಷ-2025 ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಬದಲಾವಣೆಗಳನ್ನು ಹೊತ್ತು ತರಲಿದೆ. ಮಂಗಳ ಗ್ರಹವು ಈ ವರ್ಷ ಅತ್ಯಂತ ಪ್ರಮುಖವಾಗಿ ಆಳ್ವಿಕೆ ನಡೆಸಲಿದೆ. ಇದಕ್ಕೆ ಕಾರಣ 2025 (2+0+2+5=9) ರ ಮೊತ್ತವು 9 ಆಗಿದೆ. ಸಂಖ್ಯಾಶಾಸ್ತ್ರದ ಪ್ರಕಾರ, ಸಂಖ್ಯೆ 9ರ ಅಧಿಪತಿ ಮಂಗಳ. ಮಂಗಳನನ್ನು ಯುದ್ಧದ ದೇವರು ಮತ್ತು ಗ್ರಹಗಳ ಕಮಾಂಡರ್ ಎಂದೂ ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ ಮಂಗಳನ ಆಳ್ವಿಕೆಯು 2025ರಲ್ಲಿ ಉತ್ತಮವಾಗಿರುತ್ತದೆ.
ಇತರ ಗ್ರಹಗಳ ಅಧಿಪತಿಗಳಿದ್ದರೂ ಸಹ, ಕೆಲವು ರಾಶಿಚಕ್ರ ಚಿಹ್ನೆಗಳು ಮಂಗಳನ ಆಳ್ವಿಕೆಯಲ್ಲಿ ಅದೃಷ್ಟವನ್ನು ಹೊಂದಿರುತ್ತಾರೆ. 2025ರಲ್ಲಿ ಈ ಐದು ರಾಶಿಯವರಿಗೆ ಮಂಗಳನ ಕೃಪೆಯಿಂದ ಮಿಲಿಯನೇರ್ ಆಗುವ ಅದೃಷ್ಟವಿದೆ. ಆ ಐದು ರಾಶಿಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.
ರಾಶಿಚಕ್ರ ಚಿಹ್ನೆಗಳಲ್ಲಿ ಕುಂಭರಾಶಿಯ ಜನರು ತುಂಬಾ ವಿಶಿಷ್ಟರಾಗಿದ್ದಾರೆ. 2025ರಲ್ಲಿ ಈ ರಾಶಿಯವರು ಯಾವುದೇ ಸಂಘರ್ಷಗಳಿಲ್ಲದೆ ಶಾಂತಿಯುತವಾಗಿ ಬದುಕು ನಡೆಸುತ್ತಾರೆ. ತಮ್ಮ ಪ್ರೀತಿಪಾತ್ರರ ಜೊತೆ ಹೆಚ್ಚು ಸಮಯ ಕಳೆಯುವ ಅವಕಾಶ ಇವರಿಗೆ ಸಿಗಲಿದೆ. ಅಲ್ಲದೆ, ಕುಟುಂಬ ಮತ್ತು ಹಿರಿಯರಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಮಂಗಳನ ಕೃಪೆಯಿಂದಾಗಿ ಆರ್ಥಿಕತೆಯಲ್ಲಿ ಉತ್ತಮ ಲಾಭದ ಸಾಧ್ಯತೆ ಇದೆ.
ಹೊಸ ವರ್ಷದಲ್ಲಿ ಹೊಳೆಯುವ ಮೊದಲ ರಾಶಿಚಕ್ರದ ಚಿಹ್ನೆ ಅಂದರೆ ಅದು ಮೇಷ. ಮಂಗಳನ ಕೃಪೆಯಿಂದ ಎಲ್ಲ ಕ್ಷೇತ್ರಗಳಲ್ಲಿಯೂ ಯಶಸ್ಸನ್ನು ಸಾಧಿಸುವ ರಾಶಿ ಇದು. 2025ರಲ್ಲಿ ಈ ರಾಶಿಯವರ ಆತ್ಮವಿಶ್ವಾಸ ಮತ್ತು ಧೈರ್ಯವು ವೇಗವಾಗಿ ಹೆಚ್ಚಾಗುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಣೆಯತ್ತ ಸಾಗುತ್ತದೆ. ಆರ್ಥಿಕತೆ ಸುಧಾರಿಸಿದಷ್ಟು ಉಳಿತಾಯವೂ ಹೆಚ್ಚುತ್ತದೆ. ಇದರಿಂದಾಗಿ ಎಲ್ಲ ಹಣಕಾಸು ಸಮಸ್ಯೆಗಳು ದೂರವಾಗಿ ಮಿಲಿಯನೇರ್ ಆಗುವ ಅವಕಾಶವಿದೆ.
ಮಂಗಳನ ಅನುಗ್ರಹದಿಂದ 2025ರಲ್ಲಿ ಹೆಚ್ಚು ಸಂತೋಷವನ್ನು ಕಂಡುಕೊಳ್ಳುವ ರಾಶಿಚಕ್ರದ ಚಿಹ್ನೆ ಅಂದರೆ ಸಿಂಹ. ಜೀವನದಲ್ಲಿ ಮುನ್ನಡೆಯಲು ಇವರಿಗೆ ಅನೇಕ ಅವಕಾಶಗಳು ದೊರೆಯುತ್ತವೆ. ಅದರಲ್ಲೂ ವ್ಯಾಪಾರ ಅಥವಾ ವೃತ್ತಿಗೆ ಸಂಬಂಧಿಸಿದವರಿಗೆ ಸಾಕಷ್ಟು ಲಾಭದೊಂದಿಗೆ ಮುನ್ನಡೆಯುವ ದಾರಿಗಳು ತೆರೆದುಕೊಳ್ಳಲಿವೆ. ಹಣದ ಸಂಪಾದನೆಯ ಜತೆಗೆ ಉಳಿತಾಯ ಹೆಚ್ಚಾಗಲಿದ್ದು, ಆರ್ಥಿಕವಾಗಿ ಉತ್ತಮ ಸ್ಥಿತಿಗೆ ತಲುಪಲಿದ್ದಾರೆ.
2025ರ ಹೊಸ ವರ್ಷವು ಕರ್ಕಾಟಕ ರಾಶಿಯವರಿಗೆ ತುಂಬಾ ಒಳ್ಳೆಯದು ಎಂದು ನಿರೀಕ್ಷಿಸಲಾಗಿದೆ. ವರ್ಷದ ಆರಂಭದಲ್ಲೇ ಈ ರಾಶಿಯಲ್ಲಿ ಮಂಗಳ ಸಂಚಾರ ಮಾಡುವುದರಿಂದ ಅನೇಕ ಅನುಕೂಲಗಳನ್ನು ಅನುಭವಿಸಲಿದ್ದಾರೆ. ವೃತ್ತಿಪರ ಕ್ಷೇತ್ರದಲ್ಲಿಯೂ ಸಾಕಷ್ಟು ಪ್ರಯೋಜನಗಳನ್ನು ಪಡೆಯಲಿದ್ದಾರೆ. ಅಲ್ಲದೆ, ಹೊಸ ಹೊಸ ಅವಕಾಶಗಳು ಇವರನ್ನು ಹುಡುಕಿ ಬರಲಿದ್ದು, ಸಂಪತ್ತು ಹೆಚ್ಚಾಗುವ ನಿರೀಕ್ಷೆ ಇದೆ.
ಮಂಗಳ ಪ್ರಭಾವವು ಮೀನ ರಾಶಿಯ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ 2025ರ ಹೊಸ ವರ್ಷದಲ್ಲಿ ಈ ರಾಶಿಚಕ್ರ ಚಿಹ್ನೆಯಡಿ ಜನಿಸಿದವರಿಗೆ ಒಳ್ಳೆಯದು ಸಂಭವಿಸಲಿದೆ. ಸಂವಹನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಅವಕಾಶವಿದೆ. ಇದು ನಿಮ್ಮ ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿಯನ್ನು ತರುತ್ತದೆ. ಆರ್ಥಿಕ ಸ್ಥಿತಿಯೂ ಉತ್ತಮವಾಗಿರುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್ ನೆಟ್ ಸೈಟ್ ಜವಾಬ್ದಾರರಾಗಿರುವುದಿಲ್ಲ.