

Winter Health : ದೇಶದೆಲ್ಲೆಡೆ ಕೊರೆಯುವ ಚಳಿ ಇದೆ. ಬೆಳಗ್ಗೆ ಎದ್ದೇಳುವುದಕ್ಕೂ ತುಂಬಾ ಕಷ್ಟವಾಗುತ್ತಿದೆ. ಇಡೀ ದಿನ ಚಳಿಯ ಎಫೆಕ್ಟ್ ಇದ್ದು, ತಣ್ಣೀರು ಮುಟ್ಟುವುದಕ್ಕೂ ಚಿಂತಿಸುವಂತಾಗಿದೆ. ಇನ್ನು ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ಏಕೆಂದರೆ, ಚಳಿಗಾಲದಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಉತ್ತಮ ಆಹಾರ ಸೇವಿಸುವುದು ತುಂಬಾನೇ ಮುಖ್ಯ. ಅದರಲ್ಲೂ ಹಣ್ಣುಗಳನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಮುಖ್ಯವಾಗಿ ಸೀಸನಲ್ ಹಣ್ಣುಗಳನ್ನು ತಿನ್ನುವುದರಿಂದ ಹೆಚ್ಚು ಲಾಭ ಸಿಗುತ್ತದೆ.
ಚಳಿಗಾಲದಲ್ಲಿ ಹೆಚ್ಚು ಸಿಗುವ ಹಣ್ಣುಗಳಲ್ಲಿ ಸೀಬೆ ಹಣ್ಣು ಅಥವಾ ಪೇರಲೆ ಹಣ್ಣು ಕೂಡ ಒಂದು. ಇದನ್ನು ಸಾಮಾನ್ಯವಾಗಿ ಅನೇಕ ಜನರು ತಿನ್ನುತ್ತಾರೆ. ಆದರೆ, ಚಳಿಗಾಲದಲ್ಲಿ ಪೇರಲೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಆ ಪ್ರಯೋಜನಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.
ಚಳಿಗಾಲದಲ್ಲಿ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಪೇರಲೆ ಹಣ್ಣು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಪೇರಲೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹೀಗಾಗಿ ಚಳಿಗಾಲದಲ್ಲಿ ಪೇರಲೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ದೇಹವು ಯಾವುದೇ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ನೀವು ಮಲಬದ್ಧತೆ ಸಮಸ್ಯೆ ಎದುರಿಸುತ್ತಿದ್ದರ, ಚಳಿಗಾಲದಲ್ಲಿ ಮೊದಲು ಪೇರಲೆ ಜ್ಯೂಸ್ ಅನ್ನು ಕುಡಿಯಿರಿ. ಪೇರಲೆಯು ಸಾಕಷ್ಟು ಪ್ರಮಾಣದ ಫೈಬರ್ ಅಂಶವನ್ನು ಹೊಂದಿದ್ದು, ಉತ್ತಮ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಪೇರಲೆ ಜ್ಯೂಸ್ ಕುಡಿಯುವುದರಿಂದ ಹೊಟ್ಟೆ ನೋವು, ಉಬ್ಬರ ಮತ್ತು ಗ್ಯಾಸ್‌ನಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
ಈ ಚಳಿಗಾಲದಲ್ಲಿ ನಮ್ಮ ಚರ್ಮವು ಶುಷ್ಕವಾಗಿರುತ್ತದೆ ಮತ್ತು ನಿರ್ಜೀವವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಪೇರಲೆ ಹಣ್ಣಿನ ಜ್ಯೂಸ್ ನಮ್ಮ ಚರ್ಮಕ್ಕೆ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತದೆ. ಇದು ತ್ವಚೆಯ ತೇವಾಂಶವನ್ನು ಕಾಪಾಡಿಕೊಳ್ಳಲು ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಪೇರಲೆ ಜ್ಯೂಸ್ ಅನ್ನು ಪ್ರತಿದಿನ ಕುಡಿಯುವುದರಿಂದ ಮುಖಕ್ಕೆ ನೈಸರ್ಗಿಕ ಹೊಳಪು ಸಿಗುತ್ತದೆ.
ಸಾಮಾನ್ಯವಾಗಿ ಚಳಿಗಾಲದಲ್ಲಿ ತೂಕ ಹೆಚ್ಚಾಗುವ ಸಮಸ್ಯೆ ಇರುತ್ತದೆ. ಹೀಗಾಗಿ ಪೇರಲೆ ಜ್ಯೂಸ್ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದು ಕಡಿಮೆ ಕ್ಯಾಲೋರಿಯನ್ನು ಹೊಂದಿದ್ದು, ಇದರಿಂದ ತುಂಬಾ ಹೊತ್ತು ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಅಲ್ಲದೆ, ಪೇರಲೆ ಜ್ಯೂಸ್ ದೇಹದ ಚಯಾಪಚಯವನ್ನು ವೇಗಗೊಳಿಸುತ್ತದೆ. ಇದರಿಂದ ತೂಕ ಇಳಿಸಲು ಸಹಾಯ ಮಾಡುತ್ತದೆ.
ಪೇರಲೆ ಜ್ಯೂಸ್ ತಯಾರಿಸಲು, ತಾಜಾ, ಮಾಗಿದ ಪೇರಲೆ ಹಣ್ಣನ್ನು ತೆಗೆದುಕೊಳ್ಳಿ. ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಬಳಿಕ ಮಿಕ್ಸಿ ಜಾರಿಗೆ ಹಾಕಿ, ಅದಕ್ಕೆ ಬೇಕಾದಷ್ಟು ನೀರು, ಜೇನುತುಪ್ಪ ಮತ್ತು ರುಚಿಗೆ ತಕ್ಕಷ್ಟು ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಬಳಿಕ ಅದನ್ನು ಫಿಲ್ಟರ್ ಮಾಡಿ, ಪುದೀನಾ ಸೇರಿಸಿ ಸವಿಯಿರಿ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.