

ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion) ಎಂದು ಕರೆಯುತ್ತೇವೆ.
ಈ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಸವಾಲುಗಳನ್ನು ಸಾಕಷ್ಟು ಜನರು ಸ್ವೀಕರಿಸಿ, ಅದರಲ್ಲಿ ತೊಡಗುತ್ತಾರೆ. ನೆಟಿಗ್ಗವರು ಹೊಸ ಹೊಸ ಆಪ್ಟಿಕಲ್ ಇಲ್ಯೂಷನ್ ಸವಾಲುಗಳನ್ನು ಸ್ವೀಕರಿಸುವುದನ್ನು ಆನಂದಿಸುತ್ತಾರೆ. ತಮ್ಮನ್ನು ಮನರಂಜಿಸುವ ಮೋಜಿನ ಮಾರ್ಗವಾಗಿದೆ ಮತ್ತು ಸ್ನೇಹಿತರೊಂದಿಗೆ ತಮ್ಮ ಬುದ್ಧಿವಂತಿಕೆಯನ್ನು ಸಾಬೀತುಪಡಿಸುವ ಮಾರ್ಗವಾಗಿದೆ ಎಂದು ಭಾವಿಸುತ್ತಾರೆ. ಇದರ ಹೊರತಾಗಿ, ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಆಪ್ಟಿಕಲ್ ಇಲ್ಯೂಷನ್ಗಳು ಸಹ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.
ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ಮರದ ತುಂಡಿನ ಮೇಲೆ ನೀವು ಮಕಾವ್ (ಅಮೆರಿಕದ ಒಂದು ಜಾತಿಯ ಗಿಣಿ) ಪಕ್ಷಿಯನ್ನು ನೋಡುತ್ತಿರುವಂತೆ ಕಾಣುತ್ತದೆ. ಆದರೆ, ನೀವು ಅಂದುಕೊಂಡಂತೆ ಅದು ಪಕ್ಷಿಯಲ್ಲ. ಹಾಗಾದರೆ ಅದು ಏನು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಸಾಧ್ಯವಾದರೆ ಅದು ಏನು ಅಂತ ಕೇವಲ 10 ಸೆಕೆಂಡ್ನಲ್ಲಿ ಗುರುತಿಸಿ. ನಿಮ್ಮ ಸಮಯ ಈಗ ಶುರು.
1
2
3
4
5
6
7
8
9
10
ನಿಮ್ಮ ಸಮಯ ಮುಗಿಯಿತು. 10 ಸೆಕೆಂಡ್ ಸಮಯದಲ್ಲಿ ನೀವು ಫೋಟೋದಲ್ಲಿರುವುದು ಏನು ಎಂಬುದನ್ನು ಪತ್ತೆಹಚ್ಚಿದ್ದರೆ, ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಬುದ್ಧಿಮತ್ತೆಗೆ ನೀವೇ ಫುಲ್ ಮಾರ್ಕ್ಸ್ ಕೊಟ್ಟುಬಿಡಿ. ಒಂದು ವೇಳೆ ಗುರುತಿಸಲು ಸಾಧ್ಯವಾಗದೇ ಅದು ಏನು ಅಂತ ಯೋಚಿಸುತ್ತಿದ್ದರೆ, ನಾವು ಹೇಳುತ್ತೇವೆ ಮುಂದೆ ಓದಿ. ನೀವು ಅಂದುಕೊಂಡಂತೆ ಅದು ಪಕ್ಷಿಯಲ್ಲ. ಅದು ಓರ್ವ ಮನುಷ್ಯ. ವ್ಯಕ್ತಿಯೊಬ್ಬ ತನ್ನ ಮೈಮೇಲೆ ಬಣ್ಣ ಬಳಿದುಕೊಂಡು ಪಕ್ಷಿಯ ಆಕಾರದಲ್ಲಿ ಕ್ಯಾಮೆರಾ ಮುಂದೆ ಪೋಸ್ ನೀಡಿದ್ದಾರೆ, ಇದೊಂದು ಕಲೆಯಾಗಿದೆ. (ಏಜೆನ್ಸೀಸ್)