More

    ಬುಲ್‌ಬುಲ್‌ಗಳ ಲೋಕದಲ್ಲಿ; ಮಳೆಗೆ ಬಿದ್ದ ಮರ, ಮರಿಗಳ ಆರೈಕೆಯಲ್ಲಿ ರಚನಾ

    | ಹರ್ಷವರ್ಧನ್ ಬ್ಯಾಡನೂರು

    ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಹಲವೆಡೆ ಹಲವು ರೀತಿಯ ಸಮಸ್ಯೆಗಳು ಎದುರಾಗಿವೆ. ಜೋರು ಗಾಳಿ, ಮಳೆಗೆ ಮರ, ಕೊಂಬೆ, ರೆಂಬೆಗಳು ಉರುಳಿ ಪ್ರಾಣಿ, ಪಕ್ಷಿಗಳು ಜನರಿಗಿಂತಲೂ ಹೆಚ್ಚು ತೊಂದರೆಗೆ ಒಳಗಾಗಿವೆ. ಹೀಗೆ ಬುಲ್‌ಬುಲ್ ಹಕ್ಕಿಯ ಗೂಡೊಂದು ಗಾಳಿಯ ಹೊಡೆತಕ್ಕೆ ಬಿದ್ದಿದ್ದು, ಅದರ ಮೂರು ಮರಿಗಳು ಸಾವು ಬದುಕಿನ ನಡುವೆ ಹೋರಾಡುತ್ತಿದ್ದವು. ಆಗ ಅವುಗಳನ್ನು ರಕ್ಷಿಸಿರುವ ನಟಿ ರಚನಾ ಇಂದರ್ ಮತ್ತು ಕುಟುಂಬದ, ಕಳೆದ ಐದು ದಿನಗಳಿಂದ ಆರೈಕೆ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಅಶೋಕಪುರಂ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಪ್ರತಾಪ್ ಸಿಂಹ

    ‘ಅಮ್ಮನಿಗೆ ಮೊದಲಿನಿಂದಲೂ ಮನೆ ಮೇಲೆ ಪಕ್ಷಿಗಳಿಗೆ ಹೊರಗೆ ನೀಡು ಇಡುವ ರೂಢಿ. ಹೀಗಾಗಿಯೇ ಸಾಕಷ್ಟು ಹಕ್ಕಿಗಳು ಮನೆ ಸುತ್ತಮುತ್ತ ಇವೆ. ಜತೆಗೆ ಮನೆಯಲ್ಲೂ ನಾಯಿ, ಮೀನು, ಆಮೆಗಳನ್ನು ಸಾಕಿದ್ದೇವೆ. ಮನೆಯವರೆಲ್ಲರಿಗೂ ಪ್ರಾಣಿ ಪಕ್ಷಿಗಳೆಂದರೆ ಪ್ರೀತಿ. ಮನೆ ಮುಂದೆ ನಾವು ಬೆಳೆಸಿದ್ದ ಬಾಳೆಗಿಡದ ಮಧ್ಯದಲ್ಲಿ ಬುಲ್‌ಬುಲ್ ಪಕ್ಷಿ ಗೂಡು ಕಟ್ಟಿಕೊಂಡಿತ್ತು. ಭಾನುವಾರ (ಮೇ 21) ಬಿದ್ದ ಜೋರು ಮಳೆಗೆ ಗಿಡ ವಾಲಿಕೊಂಡಿತ್ತು. ಹತ್ತಿರ ಹೋಗಿ ನೋಡಿದರೆ ಬುಲ್‌ಬುಲ್ ಮರಿಗಳ ಸದ್ದು. ಕೆಳಗೆ ಬಿದ್ದಿದ್ದ ಗೂಡಿನಲ್ಲಿ ಮೂರು ಮರಿಗಳಿದ್ದವು. ಅದು ಹೇಗೆ ಅಷ್ಟು ಜೋರು ಮಳೆಯಲ್ಲಿ ಬದುಕಿದ್ದವೋ ಗೊತ್ತಿಲ್ಲ. ತಕ್ಷಣ ಗೂಡು ಸಮೇತ ಅವುಗಳನ್ನು ಮನೆಯೊಳಗೆ ತಂದು ಆರೈಕೆ ಮಾಡುತ್ತಿದ್ದೇವೆ. ಅದರ ಅಮ್ಮ ಬಂದಾಗ ಗೂಡನ್ನು ಹೊರಗಿಡುತ್ತಿದ್ದೇವೆ. ಆದರೆ ಅದು ಹತ್ತಿರ ಬರುತ್ತಿಲ್ಲ. ಪಶುವೈದ್ಯರ ಬಳಿಗೂ ಹೋಗಿದ್ದೆವು. ಅವರು ಪುಡಿ ಕೊಟ್ಟಿದ್ದಾರೆ. ಪ್ರತಿದಿನ ಆಹಾರ ನೀಡುತ್ತಿದ್ದೇವೆ.

    ಬುಲ್‌ಬುಲ್‌ಗಳ ಲೋಕದಲ್ಲಿ; ಮಳೆಗೆ ಬಿದ್ದ ಮರ, ಮರಿಗಳ ಆರೈಕೆಯಲ್ಲಿ ರಚನಾ

    ನಾನು ಶೂಟಿಂಗ್‌ಗೆ ಹೋಗುವ ಕಾರಣ, ಅಮ್ಮ ಫುಲ್ ಟೈಮ್ ಆರೈಕೆ ಮಾಡುತ್ತಿದ್ದಾರೆ. ಪ್ರಾಣಿ, ಪಕ್ಷಿಗಳನ್ನು ರಕ್ಷಿಸಿ, ಆರೈಕೆ ಮಾಡಿ, ಪೋಷಿಸುವ ಸ್ವಯಂ ಸೇವಕರನ್ನು ಸಂಪರ್ಕಿಸಿದ್ದೇನೆ. ಮುಂದೆ ಏನು ಮಾಡಬೇಕು ಎಂಬುದನ್ನು ಅವರೊಂದಿಗೆ ಚರ್ಚಿಸಿ ನಿರ್ಧರಿಸುತ್ತೇನೆ’ ಎಂದು ಹೇಳಿಕೊಳ್ಳುತ್ತಾರೆ ರಚನಾ ಇಂದರ್.

    ಇದನ್ನೂ ಓದಿ: ಅಧಿಕಾರಿಗಳದು ಬ್ರಿಟಿಷರ ಮನಸ್ಥಿತಿ – ಮಾಜಿ ಸಚಿವ ಆನಂದಸಿಂಗ್ ಕಿಡಿ

    ನಾಲ್ಕನೇ ಆಯಾಮದಲ್ಲಿ ನಾಟ್ ಔಟ್

    ‘ಲವ್ ಮಾಕ್ಟೇಲ್’, ‘ತ್ರಿಬಲ್ ರೈಡಿಂಗ್’ ಖ್ಯಾತಿಯ ರಚನಾ ಇಂದರ್ ನಟಿಸಿರುವ ಮೂರು ಚಿತ್ರಗಳು ರಿಲೀಸ್‌ಗೆ ರೆಡಿಯಿವೆ. ‘‘ನಾಟ್ ಔಟ್’ ರಿಲೀಸ್ ದಿನಾಂಕ ಘೋಷಣೆಯಾಗಬೇಕಿದೆ. ಸಸ್ಪೆನ್ಸ್ ಹಾರರ್ ಚಿತ್ರ ‘ನಾಲ್ಕನೇ ಆಯಾಮ’ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಫರ್ ಎನ್ ಸಿಕ್ಸ್’ ಚಿತ್ರದಲ್ಲಿ ನಾನು ನಯೀಶಾ ಫೊರೆನ್ಸಿಕ್ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಸದ್ಯ ಮತ್ತೊಂದು ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಿದ್ದೇನೆ’ ಎಂದು ಮಾಹಿತಿ ನೀಡುತ್ತಾರೆ ರಚನಾ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts