More

    ಯೂಟ್ಯೂಬ್​ ಬಳಕೆದಾರರಿಗೆ ಶಾಕ್​: ಈ ಫೀಚರ್​​ನ್ನು ಬಂದ್​ ಮಾಡಲು ಮುಂದಾದ ಕಂಪನಿ

    ದೆಹಲಿ: ವಿಶ್ವದ ಜನಪ್ರಿಯ ಆನ್​ಲೈನ್​ ವಿಡಿಯೋ ಪ್ಲಾಟ್​ಫಾರ್ಮ್ ಯೂಟ್ಯೂಬ್​ ಕಂಪನಿಯು ತನ್ನ ಬಳಕೆದಾರರಿಗೆ ಶಾಕ್​ ನೀಡಿದೆ. ವಿಶ್ವದಾದ್ಯಂತ ಮಿಲಿಯನ್​ಗಟ್ಟಲೇ ಬಳಕೆದಾರರನ್ನು ಹೊಂದಿರುವ ಯೂಟ್ಯೂಬ್​ ​​ತನ್ನ ಪ್ರಸಿದ್ಧ ಫೀಚರ್​​ವೊಂದನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ.

    ಇದನ್ನೂ ಓದಿ: LIVE| ನೂತನ ಸಚಿವರ ಪ್ರಮಾಣವಚನ ಸಮಾರಂಭದ ನೇರಪ್ರಸಾರ

    ಸ್ಟೋರೀಸ್ ಫೀಚರ್​ಗೆ ವಿದಾಯ ಹೇಳಲಿರುವ ಯೂಟ್ಯೂಬ್​, ಜೂನ್‌ 26ರಿಂದ ಇದನ್ನು ಬಂದ್​ ಮಾಡಲಿದೆ. ಸ್ಟೋರಿಸ್ ಫೀಚರ್​ ಎಂಬುದು ತಾತ್ಕಾಲಿಕ ಪೋಸ್ಟ್ ಫಾರ್ಮ್ಯಾಟ್ ಆಗಿದ್ದು, ಬಳಕೆದಾರರು ಆ ದಿನದಿಂದ ಯಾವುದೇ ಹೊಸ ಸ್ಟೋರಿಸ್ ಪೋಸ್ಟ್ ಮಾಡಲು ಸಾಧ್ಯವಿಲ್ಲ ಮತ್ತು ಈಗಾಗಲೇ ಮಾಡಿರುವ ಪೋಸ್ಟ್‌ಗಳು ಕೂಡ ಏಳು ದಿನಗಳ ನಂತರ ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತವೆ.

    ಇನ್​ಸ್ಟಾಗ್ರಾಮ್​ ಮತ್ತು ಫೇಸ್​ಬುಕ್​ ಹೊರತುಪಡಿಸಿ, ಇತರ ಸಾಮಾಜಿಕ ಜಾಲತಾಣಗಳು ಸ್ಟೋರಿಸ್ ಎಂಬ ವೈಶಿಷ್ಟ್ಯದೊಂದಿಗೆ ಯಶಸ್ಸನ್ನು ಕಂಡಿಲ್ಲ. ಈ ಹಿಂದೆ ಟ್ವಿಟ್ಟರ್​ 2021ರಲ್ಲಿ ಫ್ಲೀಟ್ಸ್ ಎಂಬ ಇದೇ ರೀತಿಯ ವೈಶಿಷ್ಟ್ಯವನ್ನು ಪ್ರಾರಂಭಿಸಿ ಅದೇ ವರ್ಷ ಮತ್ತೆ ಹಿಂತೆಗೆದುಕೊಂಡಿತ್ತು.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts