

ಮೇಷ: ವಸ್ತ್ರ ವ್ಯಾಪಾರಿಗಳಿಗೆ ಆದಾಯವಿದೆ. ಲೇವಾದೇವಿಗಾರರು ಎಚ್ಚರದಿಂದಿರಿ. ಸಾರ್ವಜನಿಕವಾಗಿ ಮಾತಿನಿಂದ ಕಲಹವಾದೀತು. ಶುಭಸಂಖ್ಯೆ: 5
ವೃಷಭ: ಹೊಸ ವ್ಯಕ್ತಿಗಳ ಪರಿಚಯವಾಗುವುದು. ಕಲಾವಿದರಿಗೆ ಸಾರ್ವಜನಿಕವಾಗಿ ಗೌರವ. ಅನಿರೀಕ್ಷಿತ ಧನಾಗಮನವಾಗಿ ಸಂತಸ. ಶುಭಸಂಖ್ಯೆ:8
ಮಿಥುನ: ಸಾಮಾಜಿಕ ಸೇವೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಕುಟುಂಬದಲ್ಲಿ ಸಂತೋಷದ ಕ್ಷಣಗಳು. ಆಸ್ತಿ ವಿವಾದದಲ್ಲಿ ಜಯ.ಶುಭಸಂಖ್ಯೆ:1
ಕಟಕ: ಗೃಹನಿರ್ಮಾಣ ಕಾರ್ಯ ಮಂದಗತಿಯಲ್ಲಿ ಸಾಗಲಿದೆ. ಮಿತ್ರರಿಂದ ಸಹಕಾರ ದೊರೆಯುವುದು. ಮಕ್ಕಳಿಂದ ಶುಭವಾರ್ತೆ. ಶುಭಸಂಖ್ಯೆ:3
ಸಿಂಹ: ಬಂಧುಗಳ ಜತೆಗಿದ್ದ ಭಿನ್ನಾಭಿಪ್ರಾಯ ದೂರ. ಭೂ ವ್ಯವಹಾರದಲ್ಲಿ ಆದಾಯ. ಲೇವಾದೇವಿ ವ್ಯವಹಾರದಲ್ಲಿ ನಷ್ಟವಾಗುವುದು. ಶುಭಸಂಖ್ಯೆ:9
ಕನ್ಯಾ: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವಿರಿ. ಮಹಿಳಾ ಪ್ರತಿಭೆಗಳಿಗೆ ಯಶ. ಉದ್ಯಮಿಗಳಿಗೆ ಧನಸಹಾಯ. ಶುಭಸಂಖ್ಯೆ:6
ತುಲಾ: ಉದ್ಯೋಗಾಕಾಂಕ್ಷಿಗಳಿಗೆ ಶುಭದಿನ. ಪ್ರಮುಖ ನಿರ್ಧಾರಗಳಲ್ಲಿ ಎಡವಲಿದ್ದೀರಿ. ಆಮದು-ರಫ್ತು ವ್ಯಾಪಾರಸ್ಥರಿಗೆ ಅಶುಭ. ಶುಭಸಂಖ್ಯೆ:3
ವೃಶ್ಚಿಕ: ಕೃಷಿಕರಿಗೆ ಬೆಳೆಯಲ್ಲಿ ಲಾಭ ಬರಲಿದೆ. ಉದ್ಯೋಗ ಕ್ಷೇತ್ರದವರಿಗೆ ಶುಭದಾಯಕ ದಿನ. ಹಣಕಾಸಿನ ವ್ಯವಹಾರಸ್ಥರಿಗೆ ಹಿನ್ನಡೆ. ಶುಭಸಂಖ್ಯೆ:8
ಧನಸ್ಸು: ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ. ಉದ್ಯೋಗಸ್ಥ ಮಹಿಳೆಯರಿಗೆ ಯಶಸ್ಸು. ಸಾಮಾಜಿಕ ಕ್ಷೇತ್ರದಲ್ಲಿ ಗೌರವ. ಶುಭಸಂಖ್ಯೆ: 7
ಮಕರ: ಸೇವಾ ಕಾರ್ಯಗಳಿಂದ ಸಮಾಜದಲ್ಲಿ ಕೀರ್ತಿ ಗಳಿಸುವಿರಿ. ವಕೀಲರಿಗೆ ವೈಫಲ್ಯ ಕಾಡಲಿದೆ. ಐಟಿ ಉದ್ಯೋಗ ನಷ್ಟವಾಗುವುದು. ಶುಭಸಂಖ್ಯೆ:5
ಕುಂಭ: ಕಮಿಷನ್ ಏಜೆಂಟ್ಗಳಿಗೆ ಆದಾಯ. ಮನರಂಜನಾ ಕಲಾವಿದರಿಗೆ ಬೇಡಿಕೆ. ಕೃಷಿಯಲ್ಲಿ ಆದಾಯ. ಇಷ್ಟದೇವರನ್ನು ಭಜಿಸಿ. ಶುಭಸಂಖ್ಯೆ:2
ಮೀನ: ವೈಜ್ಞಾನಿಕ ಸಂಶೋಧಕರಿಗೆ ವಿಶೇಷ ಯಶಸ್ಸು ಸಿಗಲಿದೆ. ಶ್ರಮಕ್ಕೆ ತಕ್ಕ ಫಲ. ವರ್ಗಾವಣೆಯನ್ನು ನಿರೀಕ್ಷಿಸಬಹುದಾದ ದಿನ. ಶುಭಸಂಖ್ಯೆ: 2