ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಭೂಮಿಯ ಮೇಲೆ ಹೂಡಿಕೆಗೆ ಸುಸಮಯ

Nitya Bhavisya Vijayavani
Published on

ಮೇಷ: ಅಡಕೆ ವ್ಯಾಪಾರಿಗಳಿಗೆ ಶುಭ. ದಾಂಪತ್ಯ ಜೀವನದಲ್ಲಿ ಸಹನೆಯಿರಲಿ. ಸೂಕ್ತ ಚಿಕಿತ್ಸೆಯಿಂದ ಕಾಯಿಲೆ ವಾಸಿಯಾಗುವುದು. ಶುಭಸಂಖ್ಯೆ: 9

ವೃಷಭ: ಕೋರ್ಟ್ ವಿಷಯಗಳಲ್ಲಿ ಗೆಲುವು. ಕ್ರೀಡಾಪಟುಗಳಿಗೆ ಸರ್ಕಾರದಿಂದ ಸವಲತ್ತು ಸಿಗಲಿದೆ. ವಾಹನ ಮಾಲೀಕರಿಗೆ ಲಾಭ. ಶುಭಸಂಖ್ಯೆ:1

ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಗೌರವ. ಮಕ್ಕಳಿಂದ ಪ್ರತಿಷ್ಠೆ ಹೆಚ್ಚುವುದು. ಮಿತ್ರರಿಂದ ನೂತನ ಗೃಹ ನಿರ್ವಣಕ್ಕೆ ಮಾರ್ಗದರ್ಶನ. ಶುಭಸಂಖ್ಯೆ: 3

ಕಟಕ: ವಿವಾಹಾಕಾಂಕ್ಷಿಗಳಿಗೆ ಶುಭ. ಭೂಮಿಯ ಮೇಲೆ ಹೂಡಿಕೆಗೆ ಸುಸಮಯ. ಕುಟುಂಬ ಸಮೇತ ತೀರ್ಥಯಾತ್ರೆಗೆ ನಿರ್ಧಾರ. ಶುಭಸಂಖ್ಯೆ: 7

ಸಿಂಹ: ಸಹೋದರರಿಂದ ಸಾಲ ತೀರಿಸಲು ಸಹಕಾರ. ಆರ್ಥಿಕ ಒಪ್ಪಂದಗಳಲ್ಲಿ ಎಚ್ಚರ ವಹಿಸಿ. ರಾಸಾಯನಿಕ ವಸ್ತು ಮಾರಾಟಸ್ಥರಿಗೆ ಶುಭ. ಶುಭಸಂಖ್ಯೆ: 3

ಕನ್ಯಾ: ರಫ್ತು ವ್ಯಾಪಾರದಲ್ಲಿ ಹೊಸ ಹೂಡಿಕೆದಾರರ ಆಗಮನ ಸಾಧ್ಯತೆ. ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಶುಭ. ಬಂಧುಮಿತ್ರರ ಆಗಮನ. ಶುಭಸಂಖ್ಯೆ: 3

ತುಲಾ: ಮೆಕ್ಯಾನಿಕ್​ಗಳಿಗೆ ಹೆಚ್ಚು ಆದಾಯ ಬರಲಿದೆ. ಆಹಾರ ಸೇವನೆಯಲ್ಲಿ ಎಚ್ಚರ ವಹಿಸುವುದು ಸೂಕ್ತ. ಗೃಹ ಕೈಗಾರಿಕೆಯಲ್ಲಿ ಲಾಭ. ಶುಭಸಂಖ್ಯೆ: 8

ವೃಶ್ಚಿಕ: ಉನ್ನತ ಶಿಕ್ಷಣದಲ್ಲಿ ಪ್ರಗತಿಯಾಗಲಿದೆ. ಆರಕ್ಷಕ ಅಧಿಕಾರಿಗಳಿಗೆ ಒತ್ತಡ ಹೆಚ್ಚಬಹುದು. ಸಾಂಸ್ಕೃತಿಕ ಕ್ಷೇತ್ರದಲ್ಲಿ ಔನ್ನತ್ಯದ ಸಾಧನೆ. ಶುಭಸಂಖ್ಯೆ:7

ಧನಸ್ಸು: ಕ್ಯಾಂಟೀನ್, ಬೇಕರಿ ವ್ಯಾಪಾರದಲ್ಲಿ ಲಾಭ. ಪುಸ್ತಕ ವ್ಯಾಪಾರಿಗಳಿಗೆ ಉತ್ತಮ ಆದಾಯ. ಲೇವಾದೇವಿ ವ್ಯವಹಾರದಲ್ಲಿ ವಿವಾದ. ಶುಭಸಂಖ್ಯೆ: 7

ಮಕರ: ಮಾಧ್ಯಮದ ಉದ್ಯೋಗಿಗಳಿಗೆ ಶುಭ ಸುದ್ದಿ. ರಾಜಕೀಯ ಪ್ರವೇಶಕ್ಕೆ ಸುಸಮಯ. ಅನಿರೀಕ್ಷಿತ ಘಟನೆಯಿಂದ ಆತ್ಮವಿಶ್ವಾಸ ವೃದ್ಧಿ. ಶುಭಸಂಖ್ಯೆ:3

ಕುಂಭ: ಹೊಸ ಜನರ ಭೇಟಿಯಿಂದ ವ್ಯವಹಾರಕ್ಕೆ ಉತ್ತೇಜನ. ಸರ್ಕಾರಿ ಕೆಲಸಗಳಲ್ಲಿ ಮುನ್ನಡೆಯಾಗಲಿದೆ. ಕೃಷಿಕರ ಆದಾಯದಲ್ಲಿ ಹೆಚ್ಚಳ. ಶುಭಸಂಖ್ಯೆ: 8

ಮೀನ: ದುಡುಕದೆ ನಿರ್ಣಯ ತೆಗೆದುಕೊಳ್ಳಿ. ಮಗನ ವಿವಾಹದಲ್ಲಿ ಅಡೆತಡೆಗಳ ನಿವಾರಣೆ. ಆಡಳಿತ ವರ್ಗದವರಿಗೆ ಸ್ಥಳ ಬದಲಾವಣೆ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net