ಡಿಜಿಟಲ್​ ಇಂಡಿಯಾ ಕಾನೂನು ವಿಳಂಬ ಸಂಭವ; ಸಚಿವ ರಾಜೀವ್​ ಚಂದ್ರಶೇಖರ್​ ಮಾಹಿತಿ

Rajeev Chandrasekhar
Published on

ನವದೆಹಲಿ: ಮಾಹಿತಿ ತಂತ್ರಜ್ಞಾನ ಕಾನೂನನ್ನು ಬದಲಾಯಿಸುವ ಡಿಜಿಟಲ್​ ಇಂಡಿಯಾ ಕಾನೂನನ್ನು ಮುಂದಿನ ವರ್ಷದ ಲೋಕಸಭೆ ಚುನಾವಣೆಗೂ ಮುನ್ನ ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗುವ ಸಂಭವ ಇಲ್ಲ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್​ ಚಂದ್ರಶೇಖರ್​ ಹೇಳಿದ್ದಾರೆ.

ಸಮಾಲೋಚನೆಗೆ ಇನ್ನೂ ಸಾಕಷ್ಟು ಸಮಯ ಇರುವುದರಿಂದ ವಿಳಂಬಗೊಳ್ಳಬಹುದು ಎಂದು ಜಾಗತಿಕ ತಂತ್ರಜ್ಞಾನ ಶೃಂಗಸಭೆಯಲ್ಲಿ ಅವರು ಅಭಿಪ್ರಾಯಪಟ್ಟರು. ಆದರೆ, ಡಿಜಿಟಲ್​ ವೈಯಕ್ತಿಕ ಡೇಟಾ ರಕ್ಷಣಾ ಕಾನೂನಿನ ನಿಯಮಗಳು ಈ ತಿಂಗಳ ಕೊನೆಯಲ್ಲಿ ಹೊರಬೀಳಬಹುದು.

ಮಾಸಾಂತ್ಯ ಅಥವಾ ಜನವರಿ ಆರಂಭದಲ್ಲಿ ಆ ಕುರಿತು ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ. ಈಗ ಜಾರಿಯಲ್ಲಿರುವ ಐಟಿ ಕಾನೂನಿನಲ್ಲಿ ಇಂಟರ್​ನೆಟ್​ ಎಂಬ ಪದವೇ ಇಲ್ಲ. ಅದನ್ನು ಸುಲಭವಾಗಿ ಬದಲಾಯಿಸಿ ಬೇರೆ ಕಾನೂನು ತರುವ ಬಗ್ಗೆ ಸಹಮತ ಇದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net