More

    6 ಲಕ್ಷ ವಿದ್ಯಾರ್ಥಿಗಳಿಗೆ ಯುಎಸ್​ ವೀಸಾ; ಅಮೆರಿಕ ರಾಯಭಾರಿ ಕಚೇರಿಯಿಂದ ಮಾಹಿತಿ ಬಿಡುಗಡೆ

    ನವದೆಹಲಿ: ಭಾರತೀಯ ವಿದ್ಯಾರ್ಥಿಗಳಿಗೆ ನೀಡಲಾದ ವೀಸಾಗಳ ಕುರಿತು ಅಮೆರಿಕದ ರಾಯಭಾರಿ ಕಚೇರಿ ಮಾಹಿತಿ ಬಿಡುಗಡೆ ಮಾಡಿದ್ದು, ಕಳೆದ ಐದು ವರ್ಷಗಳಲ್ಲಿ 6 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ವೀಸಾ ನೀಡಲಾಗಿದೆ. ಈ ಪೈಕಿ 2022ರಲ್ಲಿಯೇ ಬರೋಬ್ಬರಿ 1.40 ಲಕ್ಷ ವಿದ್ಯಾರ್ಥಿಗಳಿಗೆ ವೀಸಾ ನೀಡಲಾಗಿದೆ ಎಂದು ತಿಳಿಸಿದೆ.

    2016ರ ಬಳಿಕ ಅಮೆರಿಕ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಸಂಖ್ಯೆಯ ಭಾರತೀಯ ವಿದ್ಯಾರ್ಥಿಗಳಿಗೆ ಅಧ್ಯಯನ ವೀಸಾ ನೀಡಿದೆ. ಇದರ ಜತೆಗೆ ವ್ಯವಾಹಾರ ಹಾಗೂ ಪ್ರವಾಸೋದ್ಯಮಕ್ಕಾಗಿ ಸುಮಾರು 80 ಲಕ್ಷಕ್ಕೂ ಅಧಿಕ ಮಂದಿಗೆ ವೀಸಾ ನೀಡಲಾಗಿದೆ ಎಂದು ರಾಯಭಾರಿ ಕಚೇರಿ ಮಾಹಿತಿ ನೀಡಿದೆ.

    ಬ್ರಿಟನ್​ ಸ್ಟೂಡೆಂಟ್​ ವೀಸಾಕ್ಕೆ ಹೊಸ ನಿಯಮ

    ಉನ್ನತ ಶಿಣಕ್ಕಾಗಿ ನೀಡಲಾಗುವ ಸ್ಟೂಡೆಂಟ್​ ವೀಸಾದ ದುರ್ಬಳಕೆ ತಡೆಯುವುದಕ್ಕಾಗಿ ಭಾರತದಲ್ಲಿರುವ ಬ್ರಿಟನ್​ ರಾಯಭಾರಿ ಕಚೇರಿ ಮುಂದಾಗಿದ್ದು, ಈ ಕುರಿತು ಹೊಸ ನಿಯಮಗಳನ್ನು ಒಳಗೊಂಡ ಪರಿಷತ ಮಾರ್ಗಸೂಚಿಗಳನ್ನು ಇತ್ತಿಚೇಗೆ ಜಾರಿಗೊಳಿಸಿದೆ. ಹೊಸ ನಿಮಯಗಳ ಪ್ರಕಾರ ವೀಸಾ ದೊರೆಯಬೇಕಾದರೆ ಅಭ್ಯರ್ಥಿಯು ಕಡ್ಡಾಯವಾಗಿ ತನ್ನ ಮೂಲ ಪಾಸ್​ಪೋರ್ಟ್​ ಅನ್ನು ಪರಿಶೀಲನೆ ವೇಳೆ ಸಲ್ಲಿಸಬೇಕು ಎಂದು ಸೂಚಿಸಿದೆ. ನಕಲಿ ಪಾಸ್​ಪೋರ್ಟ್​ ಮೂಲಕ ಪಡೆದ ವೀಸಾ ರದ್ದಾಗಲಿದ್ದು, ಜತೆಗೆ ವೀಸಾಗೆ ಪಾವತಿಸಿದ ಶುಲ್ಕವು ನಷ್ಟವಾಗಲಿದೆ. ಇಂತಹ ಅಭ್ಯರ್ಥಿಗಳು ಹೊಸದಾಗಿ ಪಾಸ್​ಪೋರ್ಟ್​ ರಚಿಸಬೇಕಿದ್ದು, ಬಳಿಕ ವೀಸಾಗೆ ಅರ್ಜಿ ಸಲ್ಲಿಸಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

    2047ರ ಒಳಗೆ 5 ಲಕ್ಷ ವಿದೇಶಿಗರಿಗೆ ಭಾರತೀಯ ಶಿಕ್ಷಣ

    2047ನೇ ಇಸವಿಯೊಳಗೆ ಜಾಗತಿಕ ಮಟ್ಟದಲ್ಲಿ ಭಾರತೀಯ ಶಿಣಗುಣಮಟ್ಟ ಹೆಚ್ಚಿಸುವ ಗುರಿಯನ್ನು ಕೇಂದ್ರ ಶಿಣ ಇಲಾಖೆ ಹೊಂದಿದ್ದು, ಈ ನಿಟ್ಟಿನಲ್ಲಿ ಕನಿಷ್ಠ ಐದು ಲಕ್ಷ ವಿದೇಶಿ ವಿದ್ಯಾರ್ಥಿಗಳನ್ನು ಸೆಳೆಯಲು ಯೋಜನೆ ರೂಪಿಸಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿವಿಆರ್​ ಸುಬ್ರಹ್ಮಣ್ಯಂ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts