ಮಮತಾ ಬ್ಯಾನರ್ಜಿ ಈಗ ಆಂಟಿ ಆಗಿದ್ದಾರೆ, ಅವರನ್ನು ದೀದಿ ಎನ್ನಬೇಡಿ: ಸುವೇಂದು ಅಧಿಕಾರಿ

Mamata adhikari
Published on

ಕಲ್ಕತ್ತಾ: ಇನ್ನು ಮುಂದೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ದೀದಿ ಎಂದು ಕರೆಯುವುದನ್ನು ನಿಲ್ಲಿಸಿ. ಅವರು ಈಗ ಆಂಟಿ ಆಗಿದ್ದು, ಆಕೆ ಓರ್ವ ಕ್ರೂರ ಮಹಿಳೆ ಎಂದು ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.

ಕಾರ್ಯಕ್ರಮ ಒಂದನ್ನು ಉದ್ದೇಶಿಸಿ ಮಾತನಾಡಿದ ಸುವೇಂದು, 2021ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನಾನು ಅವರನ್ನು ಸೋಲಿಸಿದ್ದೇನೆ. ಆಕೆ ಕ್ರೂರ ಮಹಿಳೆಯಾಘಿದ್ದು, ನನ್ನ ವಿರುದ್ಧ ಇವರೆಗೂ 42 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಸಂದೇಶ್‌ಖಾಲಿಯಲ್ಲಿ ಟಿಎಂಸಿ ಮುಖಂಡ ಶಹಜಹಾನ್‌ ಶೇಖ್‌ ಮತ್ತು ಅವರ ಬೆಂಬಲಿಗರು ಭೂ ಕಬಳಿಕೆ ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ ನಂತರ ರಾಜಕೀಯ ಗದ್ದಲ ಭುಗಿಲೆದ್ದಿದೆ. ಪೊಲೀಸರು ಶಹಜಹಾನ್‌ ಶೇಖ್‌ ಅವರನ್ನು ಬಂಧಿಸುವುದಿಲ್ಲ. ಏಕೆಂದರೆ, ಆತ ಅಲ್ಲಿನ ಮತಗಳನ್ನು ನಿಯಂತ್ರಿಸುತ್ತಾರೆ. ಅವರನ್ನು ಬಂಧಿಸಿದರೆ ಟಿಎಂಸಿ ಬಸಿರ್‌ಹತ್ ಸ್ಥಾನವನ್ನು ಕಳೆದುಕೊಳ್ಳುತ್ತದೆ.

ಮಾರ್ಚ್ 6ರಂದು ಸಿಜೆಐ ಅವರ ಪೀಠದಲ್ಲಿ ಪ್ರಕರಣ ಸಂಬಂಧ ವಿಚಾರಣೆ ಇದೆ. ಪ್ರಕರಣವು ಸಿಬಿಐಗೆ ಹೋಗುತ್ತದೆ ಮತ್ತು ಅದಾದ, 24 ಗಂಟೆಗಳ ಒಳಗೆ ಶಹಜಹಾನ್ ಜೈಲಿನಲ್ಲಿರುತ್ತಾನೆ.  ಸರ್ಕಾರ ಸೂಕ್ತ ಕ್ರಮ ಜರುಗಿಸುವುದನ್ನು ನೋಡಲು ಸಂದೇಶ್‌ಖಾಲಿ ಮತ್ತು ಪಶ್ಚಿಮ ಬಂಗಾಳದ ಜನ ಕಾಯುತ್ತಿದ್ದಾರೆ. ಅಲ್ಲಿ 144 ಸೆಕ್ಷನ್ ಜಾರಿ ಮಾಡಿರುವುದು ಬಿಜೆಪಿಯ ಸಂಸದರು, ಶಾಸಕರನ್ನು ತಡೆಯಲು ಮಾತ್ರ. ಇದು ರಾಜಕೀಯ ದುರುದ್ದೇಶದ ನಡೆ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net