More

    ಟಿ-20 ವಿಶ್ವಕಪ್​; ಭಾರತ-ಪಾಕ್​ ಹೈವೋಲ್ಟೇಜ್​ ಕದನಕ್ಕೆ ಹೆಚ್ಚಾಯ್ತು ಡಿಮ್ಯಾಂಡ್, ಕಾರಣ ಹೀಗಿದೆ

    ನವದೆಹಲಿ: ಜೂನ್​ 1ರಿಂದ ಯುಎಸ್​ಎ ಹಾಗೂ ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿದ್ದು, ಟೀಂ ಇಂಡಿಯಾ ತನ್ನ ಆಭಿಯಾನವನ್ನು ಜೂನ್​ 05ರಂದು ಐರ್ಲೆಂಡ್​ ವಿರುದ್ಧ ಆಡುವ ಮೂಲಕ ಆರಂಭಿಸಲಿದೆ. ಬಳಿಕ ಜೂನ್​ 09ರಂದು ಬದ್ಧವೈರಿ ಪಾಕಿಸ್ತಾನದ ವಿರುದ್ಧ ಆಡಲಿದೆ.

    ಟಿ20 ವಿಶ್ವಕಪ್​ನ ಹೈವೊಲ್ಟೆಜ್ ಫೈಟ್ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯವು ಜೂನ್ 9 ರಂದು ನಡೆಯಲಿದೆ. ಭಾನುವಾರ ನಡೆಯಲಿರುವ ಈ ಪಂದ್ಯಕ್ಕೆ ನ್ಯೂಯಾರ್ಕ್​ನ ಹೊಸ ಸ್ಟೇಡಿಯಂ ಆತಿಥ್ಯವಹಿಸಲಿದೆ. ಅದರಂತೆ ಈ ಪಂದ್ಯವು ಯುಎಸ್​ಎ ಕಾಲಮಾನ ಬೆಳಿಗ್ಗೆ 9.30 ರಿಂದ ಶುರುವಾಗಲಿದ್ದು, ಭಾರತದಲ್ಲಿ ರಾತ್ರಿ 8 ಗಂಟೆಯಿಂದ ನೇರ ಪ್ರಸಾರವಾಗಲಿದೆ.

    ಇದನ್ನೂ ಓದಿ: ಪಂದ್ಯದ ವೇಳೆ ದುರ್ವತನೆ; ಆರ್​ಸಿಬಿ ಮಾಜಿ ಆಟಗಾರನಿಗೆ ನಿಷೇಧ ಹೇರಿದ ಐಸಿಸಿ

    ಇನ್ನೂ ಭಾರತ ಹಾಗೂ ಪಾಕ್​ ನಡುವಿನ ಹೈವೋಲ್ಟೇಜ್​ ಕದನದ ಟಿಕೆಟ್​​ಗೆ ಭಾರೀ ಬೇಡಿಕೆ ಬಂದಿದ್ದು, ಟಿಕೆಟ್​ ಬುಕ್ಕಿಂಗ್​ಗಾಗಿ ಅಭಿಮಾನಿಗಳು ಈಗಿನಿಂದಲೇ ವಿಚಾರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ನಿರ್ಮಾಣ ಹಂತದಲ್ಲಿರುವ ಈ ಕ್ರೀಡಾಂಗಣದಲ್ಲಿ 34 ಸಾವಿರ ಆಸನ ಸಾಮರ್ಥ್ಯ ಹೊಂದಿದ್ದು, ಆಸನ ಸಾಮರ್ಥ್ಯಕ್ಕಿಂತ 200 ಪಟ್ಟು ಅಧಿಕ ಬೇಡಿಕೆ ಬಂದಿರುವುದಾಗಿ ವರದಿಯಾಗಿದೆ. ಇನ್ನೂ ಟಿಕೆಟ್​ ಬೆಲೆ ವಿಚಾರಕ್ಕೆ ಬರುವುದಾದರೆ 33,000 ರೂ. (ಪ್ರೀಮಿಯಂ), 25,000 ರೂ. (ಮಧ್ಯಮ), 14,500 ರೂ. (ಆರಂಭಿಕ) ದರ ನಿಗದಿ ಮಾಡಲಾಗಿದೆ ಎಂದು ವರದಿಯಾಗಿದೆ.

    ಟೀಂ ಇಂಡಿಯಾದ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8 ಘಂಟೆ ಸುಮಾರಿಗೆ ಶುರು ಆಗಲಿದೆ. ಅಂದರೆ ಭಾರತದ ಪಂದ್ಯಗಳು ಯುಎಸ್​ಎನಲ್ಲಿ ಬೆಳಿಗ್ಗೆ 9.30 ಗಂಟೆಯಿಂದ ಆರಂಭವಾಗಲಿದ್ದು, ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ನೇರ ಪ್ರಸಾರವಾಗಲಿದೆ. ಇಲ್ಲಿ ಭಾರತ ಮತ್ತು ಯುಎಸ್​ಎ ನಡುವೆ 10.30 ಗಂಟೆಗಳ ಸಮಯ ವ್ಯತ್ಯಾಸವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts