More

    ದೇಶದ ಅತಿ ಉದ್ದದ ಕೇಬಲ್​ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ

    ಅಹಮದಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಫೆಬ್ರವರಿ 25) ದೇಶದ ಅತಿ ಉದ್ದದ ಸುದರ್ಶನ ಕೇಬಲ್ ಸೇತುವೆಯನ್ನು ಉದ್ಘಾಟಿಸಿದ್ದಾರೆ. ಈ ಸೇತುವೆಯು ಗುಜರಾತ್‌ನ ಓಖಾದಿಂದ ಬೇಟ್ ದ್ವಾರಕಾಧೀಶ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುತ್ತದೆ.

    ಈ 2.5 ಕಿ.ಮೀ ಉದ್ದದ ಸೇತುವೆಯು ಭಾರತದ ಅತಿ ಉದ್ದದ ಕೇಬಲ್ ಸೇತುವೆಯಾಗಿದೆ. ಸುದರ್ಶನ ಸೇತು ಸೇತುವೆಯನ್ನು ಸುಮಾರು 980 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದನ್ನು ಓಖಾ-ಬೆಟ್ ದ್ವಾರಕಾ ಸಿಗ್ನೇಚರ್ ಸೇತುವೆ ಎಂದೂ ಕರೆಯಲಾಗುತ್ತದೆ.

    ಇದನ್ನೂ ಓದಿ: ಗಂಡನಾಗಿ ನನ್ನಲ್ಲಿ ನಿನಗೆ ಏನು ಕೊರತೆ ಕಾಣಿಸಿದೆ ಎಂದು ಪ್ರಶ್ನಿಸಿದ ಆಮೀರ್; ಮಾಜಿ ಪತ್ನಿ ಕೊಟ್ಟ ಉತ್ತರ ವೈರಲ್

    ಎರಡು ದಿನಗಳ ಗುಜರಾತ್​ ಪ್ರವಾಸದಲ್ಲಿರುವ ಪ್ರಧಾನಿ ಮೋದಿ 52 ಸಾವಿರ ಕೋಟಿಗೂ ಹೆಚ್ಚು ಹೊಸ ಯೋಜನೆಗಳಿಗೆ ಹೆಚ್ಚು ಚಾಲನೆ ನೀಡಲಿದ್ದಾರೆ.  ಸೇತುವೆ ಉದ್ಘಾಟನೆ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿರುವ ಮೋದಿ ಜಾಮ್‌ನಗರ, ದೇವಭೂಮಿ ದ್ವಾರಕಾ ಮತ್ತು ಪೋರಬಂದರ್‌ ಜಿಲ್ಲೆಗಳಲ್ಲಿಯೂ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

    ರಾಜ್‌ಕೋಟ್‌ನಲ್ಲಿ ಗುಜರಾತ್‌ನ ಮೊದಲ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS), ರಾಜ್‌ಕೋಟ್ ನಗರದ ಹೊರವಲಯದಲ್ಲಿರುವ ಪಾರಾ ಪಿಪಾಲಿಯಾ ಗ್ರಾಮದ ಬಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಒಳರೋಗಿಗಳ ವಿಭಾಗವನ್ನೂ (IPD) ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts