'ಧೂಮ್' ನಿರ್ದೇಶಕ ಸಂಜಯ್ ಗಧ್ವಿ ನಿಧನ!

Untitled design - 2023-11-19T123051.776
Published on

ಮುಂಬೈ: 'ಧೂಮ್' ಸಿನಿಮಾದ ಎರಡು ಭಾಗಗಳನ್ನು ನಿರ್ದೇಶಿಸಿದ್ದ ಖ್ಯಾತ ಬಾಲಿವುಡ್ ನಿರ್ದೇಶಕ ಸಂಜಯ್ ಗಧ್ವಿ ಇಂದು ಬೆಳಗ್ಗೆ ಮುಂಬೈನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ವರದಿಗಳ ಪ್ರಕಾರ, ಮುಂಬೈನ ಅಂಧೇರಿ ವೆಸ್ಟ್‌ನಲ್ಲಿರುವ ಲೋಖಂಡವಾಲಾ ಬ್ಯಾಕ್‌ರೋಡ್‌ನಲ್ಲಿ ಬೆಳಗಿನ ವಾಕ್ ಮಾಡುವಾಗ ಅವರಿಗೆ ಹಠಾತ್​ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ, ಚಿಕಿತ್ಸೆ ಕೊಡಲು ಮುಂದಾದ ವೈದ್ಯರು ಸಂಜಯ್ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

2001 ರಲ್ಲಿ 'ತೆರೆ ಲಿಯೆ' ಚಿತ್ರದ ಮೂಲಕ ಬಾಲಿವುಡ್​ನಲ್ಲಿ ತಮ್ಮ ಪ್ರಯಾಣ ಆರಂಭಿಸಿದ ಸಂಜಯ್, 2002 ರಲ್ಲಿ ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಮೇರೆ ಯಾರ್ ಕಿ ಶಾದಿ ಹೈ ಮೂಲಕ ಅದ್ವುತ ಯಶಸ್ಸನ್ನು ಕಂಡರು. ಇದರ ನಂತರ, ಅವರು ಧೂಮ್ (2004) ಚಿತ್ರವನ್ನು ನಿರ್ದೇಶಿಸಿದರು. ಈ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್​ ಆಗುವುದರ ಜತೆಗೆ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ಸನ್ನು ಗಳಿಸಿತ್ತು.

ಹಠಾತ್ ಹೃದಯಾಘಾತದಿಂದ ಕೊನೆಯುಸಿರೆಳೆದ ಸಂಜಯ್​ ಅವರ ನಿಧನದ ಸುದ್ದಿ ಕೇಳಿದ ಬಾಲಿವುಡ್​ ನಟರು ಸೇರಿದಂತೆ ಇತರೆ ಚಿತ್ರರಂಗದ ಕಲಾವಿದರು ಕಂಬನಿ ಮಿಡಿದಿದ್ದಾರೆ. ನಿರ್ದೇಶಕರ ಅಂತಿಮ ಸಂಸ್ಕಾರ ಇಂದು ಸಂಜೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net