BBKS10: 'ಇಲ್ಲಿಂದ ಹೊರಗೆ ಹೋದ್ಮೆಲೆ ನಮಗೆ ಇಡ್ತಾರೆ'; ಸುದೀಪ್ ಕೊಟ್ಟ​ ಖಡಕ್ ತಿರುಗೇಟು​ ಯಾರಿಗೆ?

Untitled design (99)
Published on

ಬೆಂಗಳೂರು: ಶನಿವಾರ ನಡೆದ 'ವಾರದ ಕಥೆ ಕಿಚ್ಚನ ಜತೆ' ಸಂಚಿಕೆಯಲ್ಲಿ ಮನೆಯ ಸಾಕಷ್ಟು ವಿಚಾರಗಳು ಪಂಚಾಯಿತಿ ಕಟ್ಟೆಯಲ್ಲಿ ತೀವ್ರ ಚರ್ಚೆಗೊಂಡಿದ್ದು, ಕೆಲವರಿಗೆ ಎಂದಿನಂತೆ ತಮ್ಮ ಖಡಕ್​ ಶೈಲಿಯಲ್ಲೇ ಸುದೀಪ್ ಅರ್ಥ ಮಾಡಿಸಿದರು. ಈ ವಾರ ನಡೆದ ಶಾಕಿಂಗ್​ ಡಬಲ್​ ಎಲಿಮಿನೇಷನ್​ನಲ್ಲಿ ಮೊದಲು ಎಲಿಮಿನೇಟ್​ ಆಗಿ ಇಶಾನಿ ಹೊರನಡೆದಿದ್ದಾರೆ. ಆದ್ರೆ, ಈ ಹಂತ ತಲುಪುವ ಮುನ್ನ ಸ್ಪರ್ಧಿಗಳೊಡನೆ ಮಾತಿಗಿಳಿದಿದ್ದ ಸುದೀಪ್​ ಒಂದು ನಿದರ್ಶನ ಕೊಡುವಾಗ ನೀಡಿದ ಹೇಳಿಕೆ ಇದೀಗ ನೋಡುಗರಲ್ಲಿ ಸಿಕ್ಕಾಪಟ್ಟೆ ಗೊಂದಲವನ್ನು ಮೂಡಿಸಿದೆ.

ಸಂಚಿಕೆಯ ಮೊದಲಾರ್ಧದಲ್ಲಿ ಭಾಗ್ಯಶ್ರೀ ವಿರುದ್ಧ ಸ್ನೇಹಿತ್​ ಮಾಡಿದ್ದ ಹೇಳಿಕೆ ಕುರಿತು ಒಂದಷ್ಟು ಮಾತುಕತೆ ಆರಂಭಗೊಂಡಿತು. ಈ ವೇಳೆ ಭಾಗ್ಯಶ್ರೀ ಮೂಗು ತೂರಿಸುತ್ತಾರೆ ಎಂದು ಹೇಳಿದ್ದ ಸ್ನೇಹಿತ್​ಗೆ ಸುದೀಪ್​ ಅದಕ್ಕೆ ಕಾರಣವೇನು ಎಂಬುದನ್ನು ಎಲ್ಲರ ಮುಂದೆ ಹೇಳುವಂತೆ ತಿಳಿಸಿದರು. ಇದಕ್ಕೆ "ಇಲ್ಲ ಸರ್​ ಅದು ಸೆನ್ಸಿಟಿವ್​ ವಿಷಯ ನಾನು ಹೇಳಲು ಬಯಸುವುದಿಲ್ಲ" ಎಂದಾಗ, ಕೇಳಿಸಿಕೊಳ್ಳಲು ಭಾಗ್ಯಶ್ರೀ ಸಿದ್ಧರಿದ್ದಾರೆ ಹೇಳಿ ಎಂದು ಸುದೀಪ್ ತಿಳಿಸಿದರು.

ಒಂದೆರೆಡು ನಿಮಿಷ ಯೋಚಿಸಿ ಸರಿ ಎಂದ ಸ್ನೇಹಿತ್​, "ನಮ್ರತಾ ಮತ್ತು ನನ್ನ ಡೇಟಿಂಗ್​ ಮಾತು ಬಂದಾಗ ತುಂಬ ಕುತೂಹಲದಿಂದ ಭಾಗ್ಯಶ್ರೀ ಅವರು ಕೇಳುತ್ತಿದ್ದರು. ಇದು ಮಜಾ ಬರುತ್ತಿದೆ, ನಾನಂತೂ ಬಹಳ ಎಂಜಾಯ್​ ಮಾಡುತ್ತಿದ್ದೇನೆ ಅಂದಿದ್ದು ಎಲ್ಲೋ ನನಗೆ ಸರಿ ಅನಿಸಲಿಲ್ಲ. ಆ ವಿಷಯಕ್ಕೆ ನಾನು ಅವರಿಗೆ ಮೂಗು ತೂರಿಸಿದ್ದು ಅಂತ ಹೇಳಿದೆ" ಎಂದು ಸ್ನೇಹಿತ್​ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್​, ಯಾವುದೇ ಹೇಳಿಕೆಗಳನ್ನು ನೀಡುವ ಮೊದಲು ಹಲವು ಬಾರಿ ಯೋಚಿಸಿ ಹೇಳಬೇಕು ಎಂದು ಎಚ್ಚರಿಕೆ ನೀಡಿದರು.

ಭಾಗ್ಯಶ್ರೀ ಹೇಳಿದ ಮಾತಿಗೆ ಸ್ಪಂದಿಸಿದ ಸುದೀಪ್​, "ಯಾರಿಗೆ ಏನು ಫೀಲ್​ ಆಗುತ್ತಿದೆ ನಾವು ಮಾತಾಡಿದಾಗ ಅಂತ ನಮ್ಮ ಇಂಟೇಟ್​ ತಪ್ಪಿದ್ದಾಗ ಮಾತ್ರ ಯೋಚಿಸಬೇಕು. ಮಿಕ್ಕಿದ ಸಮಯದಲ್ಲಿ ನಮ್ಮ ಜೀವನವನ್ನು ನಾವು ನಡೆಸಿಕೊಂಡು ಹೋಗಬೇಕು, ಅರ್ಥವಾಯಿತಾ?" ಎಂದರು.

"ಇಲ್ಲಿ ಬಿಗ್​ಬಾಸ್​ನಿಂದ ಕೆಲವು ಸ್ಪರ್ಧಿಗಳು ಬಹಳ ಚೆನ್ನಾಗಿ ಇರ್ತಾರೆ, ಇಲ್ಲಿಂದ ಹೊರಗೆ ಹೋದ ಮೇಲೆ ನಮಗೆ ಇಡುತ್ತಾರೆ. ತಲೆ ಕೆಡಿಸಿಕೊಳ್ಳಬಾರದು. ಅದಕ್ಕೆ ಭಗವಂತ ನಮ್ಮ ತಲೇಲಿ ಇನ್ನೂ ಕೂದಲು ಇಟ್ಟಿದ್ದಾನೆ, ಕೆಲವರ ತಲೇಲಿ ಏನೂ ಉಳಿದೇ ಇಲ್ಲ" ಎಂದು ಯಾವುದೋ ವ್ಯಕ್ತಿಗೆ ತಿರುಗೇಟು ಕೊಟ್ಟಂತೆ ಹೇಳಿದರು. ಸುದೀಪ್ ಕೊಟ್ಟ ಖಡಕ್​ ಹೇಳಿಕೆ ಯಾರಿಗೆ ಅನ್ವಯಿಸಿದ್ದು ಎಂಬುದು ಮಾತ್ರ ಸದ್ಯ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net