

Devil Movie Teaser : ಫೆಬ್ರವರಿ 16ರಂದು ನಟ ದರ್ಶನ್ ಜನ್ಮದಿನ. ಈ ವರ್ಷ ಅವರು ಬರ್ತ್ಡೇನ ಆಚರಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿ ವಿಡಿಯೋ ಮಾಡಿ ನಿನ್ನೆ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಇದೀಗ ‘ಡೆವಿಲ್’ ಸಿನಿಮಾದ ಟೀಸರ್ ಜನ್ಮದಿನವೇ ಬಿಡುಗಡೆ ಆಗಲಿದೆ. ಈ ಬಗ್ಗೆ ಸ್ವತಃ ದರ್ಶನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಈ ವರ್ಷ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಗಿಫ್ಟ್ ರೂಪದಲ್ಲಿ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಟೀಸರ್ ಬಿಡುಗಡೆ ನಂತರ ಸಿನಿಮಾ ಮೇಲಿನ ಕ್ರೇಜ್ ಇನ್ನಷ್ಟು ಜಾಸ್ತಿ ಆಗುವುದು ಖಚಿತ.
ನಮ್ಮ ಹೊಸ ಪ್ರಯತ್ನದ ಹಾರಿವು ಶೀಘ್ರದಲ್ಲೇ ನಿಮ್ಮ ಮುಂದೆ! ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡು ಡೆವಿಲ್ ಸಿನಿಮಾದ ಪೋಸ್ಟರ್ವೊಂದನ್ನು ಹಂಚಿಕೊಂಡು ಶಿಘ್ರದಲ್ಲಿ ಬಿಡುಗಡೆಯಾಗಲಿದೆ ಎಂದು ಹಂಚಿಕೊಂಡಿದ್ದಾರೆ.
ದರ್ಶನ್ ಅವರು ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗುವುದಕ್ಕೂ ಮುನ್ನ ‘ಡೆವಿಲ್’ ಸಿನಿಮಾದ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದರು. ಒಂದು ಟೀಸರ್ ಕೂಡ ಬಿಡುಗಡೆ ಮಾಡಲಾಗಿತ್ತು. ದರ್ಶನ್ ಜಾಮೀಮಿನ ಮೇಲೆ ಹೊರಗೆ ಬಂದ ಬಳಿಕ ಚಿತ್ರದ ಕೆಲಸಗಳಿಗೆ ಚಾಲನೆ ಈ ಸಿಕ್ಕಿದೆ.
ವೈಯಕ್ತಿಕ ಬದುಕಿನ ಏಳು-ಬೀಳಿನಲ್ಲಿ ದರ್ಶನ್ ಅವರಿಗೆ ಅಭಿಮಾನಿಗಳಿಂದ ಮತ್ತು ಸ್ನೇಹಿತರಿಂದ ತುಂಬ ಬೆಂಬಲ ಸಿಕ್ಕಿದೆ. ಅವರು ಜೈಲಿಗೆ ಹೋದಾಗ ಫ್ಯಾನ್ಸ್ ಸಂಕಟಪಟ್ಟಿದ್ದರು. ಅಂಥ ಅಭಿಮಾನಿಗಳಿಗೆ ಹಾಗೂ ಆಪ್ತರಿಗೆ ದರ್ಶನ್ ಅವರು ಧನ್ಯವಾದ ತಿಳಿಸಿದ್ದಾರೆ.