ಫ್ಯಾನ್ಸ್‌ಗೆ ದರ್ಶನ್ ಕೊಟ್ಟೇ ಬಿಟ್ರು ಶಾಕಿಂಗ್ ನ್ಯೂಸ್
ನಾನು ಸಾಯೋವರೆಗಗೂಇಲ್ಲೇ ಇರ್ತೀನಿ ಎಂದ್ರು ದರ್ಶನ್
ಬೆಂಗಳೂರು: ( Darshan ) ಚಾಲೆಂಜಿಂಗ್ ಸ್ಟಾರ್ʼ ನಟ ದರ್ಶನ್ ಅವರು ಒಂದು ವಿಶೇಷ ವಿಡಿಯೋ ಹಂಚಿಕೊಂಡು ಅನೇಕ ಗಾಸಿಪ್‌ಗಳಿಗೆ ತೆರೆ ಎಳೆದಿದ್ದಾರೆ. ಕಷ್ಟದ ಸಮಯದಲ್ಲಿ ಜತೆಯಾಗಿ ನಿಂತ ಅಭಿಮಾನಿಗಳ ಪ್ರೀತಿ, ಪ್ರೋತ್ಸಾಹ ಹೀಗೆಯೇ ಇರಲಿ ಎಂದು ದರ್ಶನ್ ಅವರು ಧನ್ಯವಾದ ಹೇಳಿದ್ದಾರೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರು ತಿಂಗಳು ಜೈಲುವಾಸ ಅನುಭವಿಸಿ ಷರತ್ತುಬದ್ಧ ಜಾಮೀನು ಮೇಲೆ ಹೊರಬಂದಿರುವ ನಟ ದರ್ಶನ್ ಮೊದಲ ಬಾರಿ ಸಾರ್ವಜನಿಕವಾಗಿ ಮಾತನಾಡಿದ್ದಾರೆ.
ನನ್ನ ಅಭಿಮಾನಿಗಳಿಗೆ ಧನ್ಯವಾದ ಹೇಳಲಾ? ಥ್ಯಾಂಕ್ಸ್ ಹೇಳಲಾ? ಯಾವ ಪದ ಬಳಸಬೇಕು ಅಂತ ಗೊತ್ತಾಗ್ತಿಲ್ಲ. ನೀವು ತೋರಿಸಿದ ಪ್ರೀತಿಗೆ ಬೆಲೆ ಕಟ್ಟೋಕೆ ಆಗೋದಿಲ್ಲ. ನನ್ನ ನಂಬಿಕೊಂಡ ಎಲ್ಲರಿಗೂ ಧನ್ಯವಾದಗಳು.‘ಧನ್ವೀರ್, ರಚಿತಾ ರಾಮ್, ರಕ್ಷಿತಾಗೆ ಹಾಗೂ ನನ್ನ ಸೆಲೆಬ್ರಿಟಿಗಳಿ ಥ್ಯಾಂಕ್ಸ್. ನಾನು ಬೇರೆ ಭಾಷೆಗೆ ಹೋಗ್ತೀನಿ ಎನ್ನುವುದೆಲ್ಲ ಸುಳ್ಳು. ಇಲ್ಲಿ ಕೊಟ್ಟ ಪ್ರೀತಿ ನನಗೆ ಸಾಕು’ ಎಂದು ದರ್ಶನ್ ಹೇಳಿದ್ದಾರೆ.
View this post on Instagram
A post shared by Darshan Thoogudeepa Shrinivas (@darshanthoogudeepashrinivas)
ನಾನು ಬೇರೆ ಭಾಷೆಗೆ ಹೋಗ್ತೀನಿ ಅಂತ ಹೇಳಲಾಗಿತ್ತಂತೆ. ನನಗೆ ಇಲ್ಲೇ ಇಷ್ಟು ಪ್ರೀತಿ ಸಿಕ್ಕಿದೆ ಅಂದ್ಮೇಲೆ ನಾನ್ಯಾಕೆ ಬೇರೆ ಕಡೆ ಹೋಗಲಿ? ಸಾಯೋವರೆಗೂ ನಾನು ಇಲ್ಲೇ ಇರ್ತೀನಿ. ಕಾವೇರಿ ಕೊಡಗಿನಲ್ಲಿ ಹುಟ್ಟಿ ಬೇರೆ ಕಡೆ ಹರಿಯುತ್ತಾಳೆ. ನಾನು ಕೊಡಗಿನಲ್ಲಿ ಹುಟ್ಟಿದ್ದೇನೆ. ನಾನು ಸೀಮಿತ ಆಗಿರೋದು ಮೇಕೆದಾಟುವರೆಗೆ ಮಾತ್ರವೇ. ನನ್ನ ಸಿನಿಮಾಗಳು ಬೇರೆ ಭಾಷೆಗೆ ಡಬ್ ಆಗಬಹುದು, ಆದರೆ ನಾನು ಇಲ್ಲೇ ಇರ್ತೀನಿ. ನಾನು ಕನ್ನಡದಲ್ಲಿಯೇ ಇರ್ತೀನಿ, ಕನ್ನಡದಲ್ಲೇ ಸಿನಿಮಾ ಮಾಡ್ತೀನಿ. ನನ್ನ ಜನ್ಮದಿನಕ್ಕೆ ಶುಭಾಶಯ ತಿಳಿಸಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.
ದಯಮಾಡಿ ಇದೊಂದು ಬಾರಿ ನನ್ನ ಕ್ಷಮಿಸಿಬಿಡಿ: ನಟ ದರ್ಶನ್ ತೂಗುದೀಪ…actor Darshan video message to fans