

ಬೆಂಗಳೂರು: ( actor Darshan video message to fans ) ಫೆಬ್ರವರಿ 16ರಂದು ನಟ ದರ್ಶನ್ ಜನ್ಮದಿನ. ಈ ವರ್ಷ ಅವರು ಬರ್ತ್ಡೇನ ಆಚರಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿ ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಅವರು ಮಾತನಾಡಿ, ಎಲ್ಲ ನನ್ನ ತ್ರೀತಿಯ ಸೆಲೆಬ್ರೆಟಿಗಳಿಗೆ ಥ್ಯಾಂಕ್ಸ್ ಹೇಳಿದ್ರು ಕಮ್ಮಿನೆ ಆಗಿದೆ. ನೀವು ತೋರಿಸಿದ ಪ್ರೀತಿ ಮತ್ತು ಅಭಿಮಾನವನ್ನು ಯಾವ ರೀತಿ ನಾನು ನಿಮಗೆ ತೋರಿಸುವುದು ಎಂದು ನನಗೆ ತಿಳಿಯುತ್ತಿಲ್ಲ. ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಕ್ಷಮೆ ಇರಲಿ. ಪ್ರತಿ ವರ್ಷ ಆಚರಣೆ ಮಾಡಿಕೊಳ್ಳುತ್ತಿದ್ದೇನು. ನೀವು ಬಂದಾಗ ನಿಂತುಕೊಂಡು ನಿಮ್ಮ ಪ್ರೀತಿಯಲ್ಲಿ ಭಾಗಿಯಾಗುತ್ತಿದ್ದೇನು. ನನಗೆ ಅನಾರೋಗ್ಯ ಇರುವುದರಿಂದ ತುಂಬಾ ಹೊತ್ತು ನಿಲ್ಲಲು ಸಾಧ್ಯವಿಲ್ಲ. ನಿಂತು ಕೊಂಡು ಎಲ್ಲರಿಗೂ ವಿಶ್ ಮಾಡಲು ನನ್ನ ಇಂದ ಸಾಧ್ಯವಾಗಲ್ಲ.. ಇದು ನಿಮಗೂ ಗೊತ್ತಿರುವ ವಿಚಾರವಾಗಿದೆ. ಇಂಜಕ್ಷನ್ ತಗೊಂಡಾಗ ಕೆಲವು ದಿನ ಆರೋಗ್ಯವಾಗಿ ಇರುತ್ತೇನೆ.. ಪವರ್ ಕಡಿಮೆ ಆದರೆ ಮತ್ತೆ ನೋವು ಶುರುವಾಗುತ್ತದೆ. ಆಪರೇಷನ್ ನಾನು ಮಾಡಲೇ ಬೇಕು ಅದು ಗೊತ್ತಿರುವ ವಿಚಾರವಾಗಿದೆ. ದಯಮಾಡಿ ನನ್ನ ಸೆಲೆಬ್ರೆಟಿಗಳು ಇದೊಂದು ಬಾರಿ ನನ್ನ ಕ್ಷಮಿಸಿ.. ನಾನು ನಿಮಗೆ ಸಿಗಲೇ ಬೇಕು ಸಿಗುತ್ತೇನೆ ಸ್ವಲ್ಪ ಆರೋಗ್ಯ ಸರಿ ಹೋಗುವವರೆಗೂ ಸಮಯ ಕೊಡಿ ಎಂ ದು ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.
ದಯಮಾಡಿ ಯಾವ ಊಹಾಪೋಹಗಳಿಗೆ ಕಿವಿಗುಡಬೇಡಿ... ನಾನು ಸಿನಿಮಾದಿಂದ ಹೊರ ಬಂದೆ ಎಂದು ಟಾಕ್ ಇತ್ತು. ಹೌದು,, ಸೂರಪ್ಪ ಬಾಬು ಅವರಿ ನಾನು ಹಣವನ್ನು ಕೊಟ್ಟಿದ್ದೇನೆ. ಅವರು ಸಿನಿಮಾ ಮಾಡಲು ಬಂದಾಗ ಕಮಿಟ್ಮೆಂಟ್ ಇತ್ತು. ಆದರೆ ಈಗ ಸಮಯ ಕಳೆದು ಹೋಯ್ತು.. ಮುಂದೆ ಒಂದು ಒಳ್ಳೆಯ ಸಿನಿಮಾ ಮಾಡುತ್ತೇವೆ.. ಪ್ರೇಮ್ ಜತೆ ನಾನು ಸಿನಿಮಾವನ್ನು ಮಾಡೇ ಮಾಡುತ್ತೇನೆ.. ಇದು ಗೆಳತಿ ರಕ್ಷಿತಾ ಆಸೆ ಕೂಡಾ ಆಗಿದೆ... ಸಿನಿಮಾ ಮಾಡುತ್ತೇವೆ. ಅವರ ಅಡ್ವಾನ್ಸ್ ಹಣ ಇಟ್ಟುಕೊಂಡರೆ ಅವರ ಕಮಿಟ್ಮೆಂಟ್ ಮತ್ತಷ್ಟು ಹೆಚ್ಚುತ್ತದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಸಬ್ಜೆಕ್ಟ್ ಸಿಕ್ಕರೆ ಸಿನಿಮಾ ಮಾಡೋಣ ಎಂದು ಹೇಳಿದ್ದೇನೆ ಎಂದಿದ್ದಾರೆ ದರ್ಶನ್.
ಅಭಿಮಾನಿಗಳೇ ನಿಮ್ಮ ಪ್ರೀತಿ, ಅಭಿಮಾನ, ಪ್ರೋತ್ಸಾಹ ನನ್ನಂತವನ ಮೇಲೆ ಇರುವುದಕ್ಕೆ ನಾನು ಯಾವತ್ತೂ ಚಿರಖುಣಿಯಾಗಿರುತ್ತೇನೆ. ನನ್ನ ಜತೆಯಾಗಿ ನಿಂತಿದ್ದೀರಿ.. ಸಿನಿಮಾ ಮಾಡದೇ ಇರುವವರ ಜೊತೆ ಮೊದಲು ಚಿತ್ರ ಮಾಡುತ್ತೇನೆ. ಪ್ರೀತಿ, ಪ್ರೋತ್ಸಾಹ ಹೀಗೆಯೇ ಇರಲಿ ಎಂದು ದರ್ಶನ್ ಹೇಳಿದ್ದಾರೆ. ಈ ಮೂಲಕ ಇವರ ಸಿನಿಮಾ ವಿಳಂಬಕ್ಕೆ ಕಾರಣ ತಿಳಿಸಿದ್ದಾರೆ.