ರಿಲೀಸ್​ಗೂ ಮುನ್ನವೇ ಈ ಒಟಿಟಿ ಪಾಲಾಯ್ತು ಜೂ.ಎನ್​ಟಿಆರ್​ ಬಹುನಿರೀಕ್ಷಿತ ಸಿನಿಮಾ!

ವಿಜಯವಾಣಿ - 2023-12-26T203623.926
Published on

ಆಂಧ್ರಪ್ರದೇಶ: ತಮಿಳು ಚಿತ್ರರಂಗದ ಸ್ಟಾರ್​ ನಟ ಜೂ. ಎನ್​ಟಿಆರ್​ ಅಭಿನಯದ ಬಹುನಿರೀಕ್ಷಿತ 'ದೇವರ' ಸಿನಿಮಾ ಕುರಿತಂತೆ ಸದ್ಯ ಸೋಷಿಯಲ್ ಮೀಡಿಯಾ ಸೇರಿದಂತೆ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಚಿತ್ರದ ಬಿಡುಗಡೆಗಾಗಿ ಎನ್​ಟಿಆರ್​ ಅಭಿಮಾನಿಗಳು ಹಾಗೂ ಚಿತ್ರಪ್ರೇಮಿಗಳು ಕಾತರದಿಂದ ಕಾಯತೊಡಗಿದ್ದಾರೆ. ಈ ಮಧ್ಯೆ ಇದೀಗ ಹೊಸ ಮಾಹಿತಿಯೊಂದು ಲಭಿಸಿದ್ದು, ರಿಲೀಸ್​ಗೂ ಮುನ್ನವೇ ಚಿತ್ರ ಭಾರೀ ಮೊತ್ತಕ್ಕೆ ಈ ಒಟಿಟಿ ಪ್ಲಾಟ್​ಫಾರ್ಮ್​​ ಪಾಲಾಗಿದೆ.

ಮುಂದಿನ ವರ್ಷ ಏಪ್ರಿಲ್ 24 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಳ್ಳಲು ಸಜ್ಜಾಗಿರುವ ಜೂ. ಎನ್​ಟಿಆರ್ ಸಿನಿಮಾ ಸದ್ಯ 2024ರಲ್ಲಿ ರಿಲೀಸ್​ ಆಗಲು ಎದುರು ನೋಡುತ್ತಿರುವ ಬಹುನಿರೀಕ್ಷಿತ ತೆಲುಗು ಚಿತ್ರಗಳಲ್ಲಿ ಒಂದಾಗಿದೆ. 'ಆರ್‌ಆರ್‌ಆರ್‌'ನಲ್ಲಿ ಮಿಂಚಿದ ಎನ್‌ಟಿಆರ್ ತದನಂತರ 'ದೇವರ' ಚಿತ್ರೀಕರಣದಲ್ಲಿ ಸಂಪೂರ್ಣವಾಗಿ ಬ್ಯುಸಿಯಾಗಿದ್ದು, ಈ ಚಿತ್ರದ ಮೂಲಕ ತಮ್ಮ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಲು ಮುಂದಾಗಿದ್ದಾರೆ.

ಕೊರಟಾಲ ಶಿವ ನಿರ್ದೇಶನದ ದೇವರ ಚಿತ್ರದಲ್ಲಿ ಜೂ.ಎನ್​ಟಿಆರ್​ಗೆ ನಾಯಕಿಯಾಗಿ ಬಾಲಿವುಡ್​ ಬೆಡಗಿ ಜಾನ್ವಿ ಕಪೂರ್​ ಮುಖ್ಯಭೂಮಿಕೆಯಲ್ಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಚಿತ್ರದ ನಿರ್ಮಾಪಕ ಮತ್ತು ಎನ್‌ಟಿಆರ್ ಸಹೋದರ, ನಂದಮೂರಿ ಕಲ್ಯಾಣ್ ರಾಮ್, ದೇವರ ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಉತ್ತಮ ಮೊತ್ತಕ್ಕೆ ನೆಟ್‌ಫ್ಲಿಕ್ಸ್‌ಗೆ ಮಾರಾಟ ಮಾಡಲಾಗಿದೆ ಎಂದು ಅಧಿಕೃತವಾಗಿ ದೃಢಪಡಿಸಿದ್ದಾರೆ.

ಸಿನಿಮಾದಲ್ಲಿ ಜೂ. ಎನ್‌ಟಿಆರ್, ಜಾನ್ವಿ ಕಪೂರ್, ಪ್ರಕಾಶ್ ರಾಜ್, ಶೈನ್ ಟಾಮ್ ಚಾಕೊ, ಶ್ರೀಕಾಂತ್, ಮುರಳಿ ಶರ್ಮಾ, ಕಲೈಯರಸನ್ ಮುಂತಾದವರ ತಾರಾಗಣವಿದೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸಂಯೋಜನೆಯಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net