More

    ಕೇದಾರನಾಥ-ಶಬರಿಮಲೆ ಪಾದಯಾತ್ರೆ! ಅಯ್ಯಪ್ಪ ಮಾಲಾಧಾರಿಗಳ ಭಕ್ತಿಸಾಹಸ 67 ದಿನ ನಿರಂತರ ಕಾಲ್ನಡಿಗೆ..

    ಬಸವರಾಜ ತಾರದಾಳೆ ಕಾಗವಾಡ (ಬೆಳಗಾವಿ)

    ಬೆಳಗಾವಿ: ಭಕ್ತಿ ಎನ್ನುವುದು ದೇವರೆಡೆಗೆ ಮನುಷ್ಯ ಹೊಂದಿರುವ ಪವಿತ್ರ ಆರಾಧನಾ ಭಾವ. ಆ ಭಾವ ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಪ್ರಕಟಗೊಳ್ಳುತ್ತದೆ. ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಅಂಥ ಭಕ್ತಿ ಸಾಹಸ ಮೆರದಿದ್ದು, ಸಾವಿರಾರು ಕಿ.ಮೀ ಕಾಲ್ನಡಿಗೆ ಮೂಲಕ ಅಯ್ಯಪ್ಪನ ಸನ್ನಿಧಾನ ತಲುಪಲು ಹೊರಟಿದ್ದಾರೆ.

    ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ

    ಕಾಗವಾಡ ತಾಲೂಕಿನ ಉಗಾರ ಬುದ್ರಕ್ ಗ್ರಾಮದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಾದ ಸೋಮನಾಥ ಹೂಗಾರ ಮತ್ತು ಉಡುಪಿಯ ರಮೇಶ ಮಂಡನ ನವೆಂಬರ್ 5ರಂದು ಉತ್ತರಾಖಂಡದ ಕೇದಾರನಾಥದಿಂದ ಕೇರಳದ ಅಯ್ಯಪ್ಪಸ್ವಾಮಿ ಸನ್ನಿಧಿ ಇರುವ ಶಬಿರಿಮಲೈಗೆ ಪಾದಯಾತ್ರೆ ಕೈಗೊಂಡಿದ್ದಾರೆ. 67 ದಿನಗಳ ನಿರಂತರ ಪಾದಯಾತ್ರೆ ಮೂಲಕ ಸುಮಾರು 3,200 ಕಿ.ಮೀ ದೂರವನ್ನು ಕಾಲ್ನಡಿಗೆ ಮೂಲಕ ಸವೆಸುವ ಸಂಕಲ್ಪ ತೊಟ್ಟಿದ್ದಾರೆ.

    ನವೆಂಬರ್ 5 ರಂದು ಕೇದಾರನಾಥದಿಂದ ಪ್ರಾರಂಭಗೊಂಡ ಅವರ ಪಾದಯಾತ್ರೆ ಈಗಾಗಲೇ ಕರ್ನಾಟಕ ರಾಜ್ಯ ಪ್ರವೇಶ ಮಾಡಿದ್ದು, ಉತ್ತರ ಕನ್ನಡ ಜಿಲ್ಲೆ ಮೂಲಕ ಪಾದಯಾತ್ರೆ ಮುಂದುವರಿದಿದೆ. ಇಬ್ಬರೂ ಮಾಲಾಧಾರಿಗಳು ಕಳೆದ 5 ವರ್ಷಗಳಿಂದ ಉಗಾರ ಬುದ್ರುಕ್‌ನಿಂದ ಶಬರಿಮಲೈಗೆ ಪಾದಯಾತ್ರೆಯ ಮುಖಾಂತರವೇ ತೆರಳುತ್ತಾರೆ. ಪ್ರಸಕ್ತ ವರ್ಷ ಪ್ರಥಮಬಾರಿಗೆ ಕೇದಾರನಾಥದಿಂದ ಶಬರಿಮಲೈಗೆ ಪಾದಯಾತ್ರೆ ಕೈಗೊಂಡಿದ್ದಾರೆ.

    ಇದನ್ನೂ ಓದಿ: ಯುವನಿಧಿ ಗ್ಯಾರಂಟಿ ಪೋಸ್ಟರ್ ಬಿಡುಗಡೆ

    ಕೇದಾರನಾಥದಿಂದ ಹರಿದ್ವಾರ, ಆಗ್ರಾ, ಮಿರ್ಜಾಪುರ, ಅಲಿಘಡ ಮಾರ್ಗದಿಂದ ಮಧ್ಯಪ್ರದೇಶ, ಮಹಾರಾಷ್ಟ್ರದ ಶಿರಡಿ, ಪಂಢರಪುರ ಮುಖಾಂತರ ಮದಬಾವಿಯಿಂದ ಕರ್ನಾಟಕಕ್ಕೆ ಪ್ರವೇಶ ಮಾಡಿ, ಖಿಳೇಗಾಂವ, ಉಗಾರ ಬಿಕೆ, ಶಿರಗುಪ್ಪಿ, ಚಿಕ್ಕೋಡಿ, ಬೆಳಗಾವಿ, ಖಾನಾಪುರ, ಹಳಿಯಾಳ, ಯಲ್ಲಾಪುರ, ಕುಮಟಾ, ಭಟ್ಕಳ, ಕುಂದಾಪುರ, ಉಡುಪಿ, ಮಂಗಳೂರು, ಕಾಸರಗೋಡ, ಕನ್ನೂರ, ಕ್ಯಾಲಿಕತ್, ಗುರುವಾಯುರು, ಅಂಗಮಲೈ, ಕಾಲಾಡಿ, ಪನ್ನುಕೊನಂ, ಎರುಮಲೈದಿಂದ ಬೆಟ್ಟ ಹತ್ತಿ ಪಂಪಾ ಮುಖಾಂತರ ಜ.12 ರಂದು ಶಬರಿಮಲೈಗೆ ತಲುಪಿ ಜ.13 ರಂದು ಅಯ್ಯಪ್ಪಸ್ವಾಮಿ ದರ್ಶನ ಪಡೆದುಕೊಳ್ಳಲಿದ್ದಾರೆ. ಜತೆಗೆ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಪ್ರಕಾಶ ಸೈಸಾಳೆ ಅವರನ್ನೂ ಯಡೂರಿನಲ್ಲಿ ಸೇರಿಕೊಂಡು ಪಾದಯಾತ್ರೆ ಪ್ರಾರಂಭಿಸಿದ್ದಾರೆ.

    ಇದನ್ನೂ ಓದಿ: ವಿಧಾನಪರಿಷತ್ ಮಾಜಿ ಸದಸ್ಯ ಮಾರುತಿರಾವ್ ಡಿ. ಮಾಲೆ ಇನ್ನಿಲ್ಲ

    ಒಟ್ಟು ಮೂರು ಮಾಲಾಧಾರಿಗಳು ಅಯ್ಯಪ್ಪನ ದರ್ಶನಕ್ಕೆ ಸಾಗಿದ್ದಾರೆ. ದಾರಿಯುದ್ದಕ್ಕೂ ನಾವು ಎಲ್ಲಿಯೂ ಯಾವುದೇ ತೊಂದರೆ ಅನುಭವಿಸಿಲ್ಲ. ಅನೇಕ ಭಕ್ತರು ನಮಗೆ ಸಹಾಯ-ಸಹಕಾರ ನೀಡಿದ್ದಾರೆ. ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ ಎಂದು ಮೂವರೂ ಮಾಲಾಧಾರಿಗಳು ತಿಳಿಸಿದ್ದಾರೆ. ಉತ್ತರ ಭಾರತದಲ್ಲಿ ಮೊದಲ ಬಾರಿಗೆ ಪಾದಯಾತ್ರೆ ಕೈಗೊಂಡಾಗ ಆರಂಭದಲ್ಲಿ ಸ್ವಲ್ಪ ಭಯಕ್ಕೆ ಕಾರಣವಾಗಿತ್ತು. ಆದರೆ, ಅಲ್ಲಿಯ ಜನರ ಸಹಕಾರದಿಂದ ಅದು ಸುಗಮವಾಯಿತು ಎಂದು ಸೋಮನಾಥ ಹೂಗಾರ ತಿಳಿಸಿದ್ದಾರೆ.

    ಪಾದಯಾತ್ರೆ ಉದ್ದೇಶ: ರಾಜ್ಯದಲ್ಲಿ ಬರ ಪರಿಸ್ಥಿತಿ ದೂರವಾಗಿ, ಮಳೆ-ಬೆಳೆ ಚೆನ್ನಾಗಿ ಆಗಲಿ. ರಾಜ್ಯದ ಜನರು ಸುಖ-ಶಾಂತಿಯಿಂದ, ನೆಮ್ಮದಿಯಿಂದ ಇರಲಿ ಎಂಬುದು ನಮ್ಮ ಪಾದಯಾತ್ರೆಯ ಉದ್ದೇಶ ಎಂದು ಮಾಲಾಧಾರಿಗಳು ತಿಳಿಸಿದ್ದಾರೆ. ಬರಿಗಾಲಿನಲ್ಲಿ ಸುಮಾರು 3,200 ಕಿಮೀ ಕ್ರಮಿಸಿ ತಲೆ ಮೇಲೆ ಇರಮುಡಿ ಹೊತ್ತು ಮಳೆ, ಗಾಳಿ, ಚಳಿ, ಬಿಸಿಲು ಪಾದಯಾತ್ರೆ ನಡೆಸಿರುವುದು ಅವರ ಭಕ್ತಿಗೆ ಸಾಕ್ಷಿ. ರಸ್ತೆಯುದ್ದಕ್ಕೂ ದಿನವೂ ಎರಡು ಬಾರಿ ಪೂಜಾ ವಿಧಿ-ವಿಧಾನ ಪೂರೈಸುವ ಮಾಲಾಧಾರಿಗಳ ಸಾಹಸಕ್ಕೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಮಳೆಯಾಶ್ರಿತ ರೈತರಿಗಾಗಿ ಕೃಷಿ ಭಾಗ್ಯ ಯೋಜನೆ ಮರು ಜಾರಿ

    ಉಗಾರ ಬುದ್ರಕ್ ಗ್ರಾಮದ ಪ್ರಕಾಶ ಹೂಗಾರ ಕೃಷಿ ಕೂಲಿ ಕಾರ್ಮಿಕನಾಗಿದ್ದು, ಉಡುಪಿಯ ಕಾಡಿಪಾಡಿಯಲ್ಲಿ ಮೀನುಗಾರರಾಗಿ ರಮೇಶ ಮಂಡನ ಜೀವನ ಸಾಗಿಸುತ್ತಾರೆ. ಇನ್ನೂ ಯಡೂರಿನ ಪ್ರಕಾಶ ಸೈಸಾಳೆ ಗೌಂಡಿ ವೃತ್ತಿ ಮಾಡುತ್ತಾರೆ.

    ರಾಮಮಂದಿರ ಉದ್ಘಾಟನೆ: ಇದು ಐತಿಹಾಸಿಕ ಕ್ಷಣ ಎಂದ ಜರ್ಮನ್ ಸನ್ಯಾಸಿ! ಹೇಳಿದ ಮಾತುಗಳಿವು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts