More

    ಮಳೆಯಾಶ್ರಿತ ರೈತರಿಗಾಗಿ ಕೃಷಿ ಭಾಗ್ಯ ಯೋಜನೆ ಮರು ಜಾರಿ



     ಬೆಳಗಾವಿ: ಕೃಷಿ ಇಲಾಖೆಯು ಮಳೆಯಾಶ್ರಿತ ರೈತರಿಗಾಗಿ ೨೦೨೩-೨೪ನೇ ಸಾಲಿನಿಂದ ಕೃಷಿ ಭಾಗ್ಯ ಯೋಜನೆ ಮರು ಜಾರಿಗೊಳಿಸಲಾಗುತ್ತಿದ್ದು, ಈ ಯೋಜನೆಯನ್ನು ಜಿಲ್ಲೆಯ ಒಣ ಹವಾಮಾನ ವಲಯ ವ್ಯಾಪ್ತಿಯಲ್ಲಿ ಒಳಪಡುವ ಅಥಣಿ, ಕಾಗವಾಡ, ಗೋಕಾಕ, ಮೂಡಲಗಿ, ರಾಯಬಾಗ, ರಾಮದುರ್ಗ, ಸವದತ್ತಿ ಮತ್ತುಯರಗಟ್ಟಿ ತಾಲೂಕುಗಳಲ್ಲಿ ಆಸಕ್ತ ರೈತರು ಅರ್ಜಿ ಸಲ್ಲಿಸಬಹುದು.
    ರೈತರಿಗೆ ಸಹಾಯಧನ ಒದಗಿಸಲಾಗುತ್ತಿದ್ದು,ಮಳೆ ನೀರು ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆಗಾಗಿ ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡ, ನೀರು ಇಂಗದAತೆ ತಡೆಯಲು ಪಾಲಿಥೀನ್ ಹೊದಿಕೆ, ಹೊಂಡದ ಸುತ್ತಲುತಂತಿ ಬೇಲಿ, ಹೊಂಡದಿAದ ನೀರುಎತ್ತಲು ಪಂಪ್‌ಸೆಟ್, ನೀರನ್ನು ಬೆಳೆಗೆ ಹಾಯಿಸಲು ತುಂತುರು ನೀರಾವರಿ ಘಟಕಗಳ ಪ್ಯಾಕೇಜ್‌ನ್ನು ರೂಪಿಸಿ, ಪ್ಯಾಕೇಜ್ ಅಳವಡಿಸಿಕೊಳ್ಳುವ ರೈತರಿಗೆ ಸಹಾಯಧನ ನೀಡಲು ಯೋಜನೆಯನ್ನು ರೂಪಿಸಲಾಗಿದೆ. ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಳಗಾವಿ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts