ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ

Organ transpland - Tarun
Published on

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಪುರದಮಾತ ಗ್ರಾಮದ 19 ವರ್ಷದ ಯುವಕ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾನೆ.

ಕೆಂಗೇರಿ ಬಳಿಯ ನಿರ್ಮಾಣ ಹಂತದಲ್ಲಿರುವ ಕಟ್ಟಡದ 2ನೇ ಮಹಡಿಯಿಂದ ಡಿ.19ರಂದು ಆಯತಪ್ಪಿ ಬಿದ್ದಿದ್ದ ತರುಣ್ ಬಾಲಚಂದ್ರನ್ ಗಂಭೀರವಾಗಿ ಗಾಯಗೊಂಡಿದ್ದ. ಚಿಕಿತ್ಸೆಗಾಗಿ ಹತ್ತಿರದ ಗ್ಲೆನಿಗಲ್ ಅಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ತಿಳಿಸಿದ್ದರು. ಗಾರೆ ಕೆಲಸದ ಸಹಾಯಕರಾಗಿ ಕೆಲಸ ಮಾಡುವ ಬಾಲಚಂದ್ರ ಹಾಗೂ ಲತಾ ದಂಪತಿ ತಮ್ಮ ಮಗನ ಅಂಗಾಂಗ ದಾನಕ್ಕೆ ಸಮ್ಮತಿ ಸೂಚಿಸಿದರು.

ದಾನಿಯ ಹೃದಯ, ಎರಡು ಮೂತ್ರಪಿಂಡ ಮತ್ತು ಯಕೃತ್ ದಾನ ಪಡೆದು ಅಗತ್ಯ ಇರುವವರಿಗೆ ಕಸಿ ಶಸಚಿಕಿತ್ಸೆ ನಡೆಸಲಾಗಿದೆ ಎಂದು ಆಸ್ಪತ್ರೆಯ ಮುಖ್ಯ ಆಪ್ತ ಸಮಾಲೋಚಕಿ ಮತ್ತು ಕಸಿ ವಿಭಾಗದ ಹಿರಿಯ ಸಮನ್ವಯಾಧಿಕಾರಿ ಸರಳಾ ಅನಂತರಾಜ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net