ರಾಮಮಂದಿರ ಉದ್ಘಾಟನೆ: ಇದು ಐತಿಹಾಸಿಕ ಕ್ಷಣ ಎಂದ ಜರ್ಮನ್ ಸನ್ಯಾಸಿ! ಹೇಳಿದ ಮಾತುಗಳಿವು…

ವಿಜಯವಾಣಿ - 2023-12-26T194217.505
Published on

ಉತ್ತರಪ್ರದೇಶ: 2024ರ ಜನವರಿ 22 ರಂದು ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆಯಲಿರುವ ರಾಮನ ವಿಗ್ರಹ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಜರ್ಮನಿಯ ಸನ್ಯಾಸಿ ಸನಕ್ ಸನಾತನ ದಾಸ್ ಅವರು, 'ಇದೊಂದು ಐತಿಹಾಸಕ ಕ್ಷಣ' ಎಂದು ಕರೆದಿರುವುದು ಇದೀಗ ಅನೇಕ ಭಾರತೀಯರ ಗಮನ ಸೆಳೆದಿದೆ.

ಈ ಹಿಂದೆ ರಾಲ್ಫ್ ಸ್ಟೀಫನ್ ಗೀಸೆನ್ಹೌಸ್ ಎಂದು ಕರೆಯಲ್ಪಟ್ಟ ಅವರು, "ರಾಮ ಜನ್ಮಭೂಮಿಯಲ್ಲಿ ನಡೆಯುತ್ತಿರುವ ಸಮಾರಂಭವು ಒಂದು ಐತಿಹಾಸಿಕ ಕ್ಷಣವನ್ನು ಗುರುತಿಸುತ್ತದೆ. ಏಕೆಂದರೆ ಭಗವಾನ್ ರಾಮನು ಅಂತಿಮವಾಗಿ ತನ್ನ ಜನ್ಮಸ್ಥಳದಲ್ಲಿ ದೇವಾಲಯವನ್ನು ಪಡೆಯುತ್ತಾನೆ" ಎಂದು ಹೇಳಿದ್ದಾರೆ.

ನೂತನವಾಗಿ ನಿರ್ಮಿಸಲಾಗಿರುವ ಈ ದೇವಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22 ರಂದು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಈ ಸಮಾರಂಭದಲ್ಲಿ ಸನಾತನ ದಾಸ್ ಅವರು ಆಹಾರ ವಿತರಣೆಯಲ್ಲಿ ಸ್ವಯಂಸೇವಕರಾಗಿ ಪಾಲ್ಗೊಳ್ಳಲಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net