More

    ಯುವನಿಧಿ ಗ್ಯಾರಂಟಿ ಪೋಸ್ಟರ್ ಬಿಡುಗಡೆ

    ಚಿತ್ರದುರ್ಗ: ಡಿಸಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಜಿ.ಆರ್.ಜೆ ದಿವ್ಯಾಪ್ರಭು ಅವರು, ಯುವನಿಧಿ ಯೋಜನೆ ಭಿತ್ತಿಪತ್ರ ಬಿಡುಗಡೆ ಮೂಲಕ ಯೋಜನೆ ನೋಂದಣಿಗೆ ಚಾಲನೆ ನೀಡಿ ಮಾತನಾಡಿದರು. ಗ್ಯಾರೆಂಟಿಗಳಲ್ಲಿ ಒಂದಾದ ಯುವನಿಧಿ ಯೋಜನೆ ಬರುವ 2024 ಜನವರಿಯಿಂದ ಜಾರಿಯಾಗಲಿದೆ.
    ಶೈಕ್ಷಣಿಕ ಸಾಲು 2022-23ರಲ್ಲಿ ವ್ಯಾಸಂಗ ಮಾಡಿ, 2023ರಲ್ಲಿ ಮತ್ತು ಫಲಿತಾಂಶ ಪ್ರಕಟಗೊಂಡ 180 ದಿನ ಅಥವಾ 6 ತಿಂಗಳ ಒಳ ಗಡೆ ಕೆಲಸ ದೊರೆಯದ ನಿರುದ್ಯೋಗಿ ಅರ್ಹ ಪದವೀಧರರಿಗೆ 3 ಸಾವಿರ ರೂ. ಹಾಗೂ ಡಿಪ್ಲೊಮಾದಲ್ಲಿ ತೇರ್ಗಡೆಯಾದವರಿಗೆ 1500 ರೂ.ಮಾಸಿಕ ನಿರುದ್ಯೋಗ ಭತ್ಯೆಯನ್ನು ಆಧಾರ್ ಜೋಡಣೆಯಾದ ಅಭ್ಯರ್ಥಿಗಳ ಬ್ಯಾಂಕ್ ಖಾತೆಗೆ ನೇರ ಜಾಮ ಮಾಡಲಾಗುವುದು ಎಂದರು.
    ಕರ್ನಾಟಕದಲ್ಲಿ ವಾಸವಿದ್ದು ಕನಿಷ್ಠ 6 ವರ್ಷಗಳವರೆಗೆ ಪದವಿ ಹಾಗೂ ಡಿಪ್ಲೊಮಾ ಅಧ್ಯಯನ ಮಾಡಿದವರು. ಉನ್ನತ ವ್ಯಾಸಂಗ ಮು ಂದುವರಿಸದೇ ಇರುವವರು. ಖಾಸಗಿ ಅಥವಾ ಸ್ವಯಂ ಉದ್ಯೋಗ ಇಲ್ಲದವರು ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದರು.
    ಅರ್ಜಿ ಆಹ್ವಾನ
    ಯೋಜನೆ ನೋಂದಣಿಗೆ ಸೇವಾಸಿಂಧು ಪೋರ್ಟಲ್ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿ ನಿರುದ್ಯೋಗಿ ಎಂದು ದೃಢೀಕರಿಸ ಬೇಕು. ನೋಂದಾಯಿತರ ವಿವರಗಳನ್ನು ಪರಿಶೀಲಿಸಲಾಗುವುದು. ಪದವಿ,ಡಿಪ್ಲೊಮಾ ಪ್ರಮಾಣ ಪತ್ರಗಳನ್ನು ಆಯಾ ವಿವಿಗಳಿ ಗೆ ಕಳಿಸಲಾಗುವುದೆಂದು ತಿಳಿಸಿದರು.
    ತಪ್ಪು ಮಾಹಿತಿಗೆ ದಂಡ ವಿಧಿಸಲಾಗುತ್ತದೆ ಹಾಗೂ ಪಾವತಿ ಮೊತ್ತವನ್ನು ವಸೂಲಿ ಮಾಡಲಾಗುತ್ತದೆ. ನೋಂದಾಯಿತ ಅಭ್ಯರ್ಥಿಗಳ ದತ್ತಾಂಶವನ್ನು ಪರಿಶೀಲನೆಗಾಗಿ ಕೌಶಲ ಸಂಪರ್ಕ ಪೋರ್ಟ್‌ಲ್‌ಗೆ ವರ್ಗಾಯಿಸಲಾಗುವುದು. ಅಭ್ಯರ್ಥಿಯು ನಿರುದ್ಯೋಗಿಯಾಗಿರು ವುದನ್ನು ನಿಗದಿತ ನಮೂನೆಯಲ್ಲಿ ಪ್ರತಿ ತಿಂಗಳ 25ರಂದು ಅದಕ್ಕೂ ಆಧಾರ್ ಆಧಾರಿತ ಒಟಿಪಿ ಮೂಲಕ ಘೋಷಣೆ ಮಾಡತಕ್ಕದ್ದು. ಉ ದ್ಯೋಗ ದೊರಕಿದ ನಂತರ ಅಭ್ಯರ್ಥಿ ತಕ್ಷಣ ಮುಚ್ಚಳಿಕೆ ಪತ್ರ ನೀಡಬೇಕೆಂದು ಯೋಜನೆ ಕುರಿತಂತೆ ವಿವರಿಸಿದ ಡಿಸಿ, ಅರ್ಹರ ಇದರ ಲಾಭ ಪಡೆಯುವಂತೆ ಕೋರಿದರು.
    ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಉದ್ಯೋಗಾಧಿಕಾರಿ ಕಿಶೋರ್‌ಕುಮಾರ್,ಉದ್ಯೋಗ ಇಲಾಖೆ ಕೌನ್ಸೆಲರ್ ಟ್ರೈನ ರ್ ಎಸ್.ಪಾಂಡುರಂಗಪ್ಪ ಮತ್ತಿತರರು ಇದ್ದರು. ಹೆಚ್ಚಿನ ಮಾಹಿತಿಗೆ ಜಿಲ್ಲಾ ವಿನಿಮಯ ಕಚೇರಿ ದೂರವಾಣಿ ಸಂಖ್ಯೆ 99455 87060, 9743636369 ಅಥವಾ ಸಹಾಯವಾಣಿ ಸಂಖ್ಯೆ 18005999918ಗೆ ಕರೆ ಮಾಡಬಹುದು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts