More

    ಹಲ್ಲೆ ಅಪರಾಧಿಗೆ 4 ವರ್ಷಗಳ ಕಠಿಣ ಶಿಕ್ಷೆ

    ಮೈಸೂರು: ಮಹಿಳೆಗೆ ವಂಚನೆ ಮಾಡಿದ್ದಲ್ಲದೇ ಹಲ್ಲೆ ನಡೆಸಿದ ಅಪರಾಧಿಗೆ ನಗರದ ಒಂದನೇ ಅಧಿಕ ಸಿಜೆಎಂ ನ್ಯಾಯಾಲಯ 4 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, 33 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
    ಮೈಸೂರಿನ ತಿಲಕ್‌ನಗರದ ಮಹೇಶ್ ಶಿಕ್ಷೆಗೆ ಗುರಿಯಾದವರು. ಮಂಡಿ ಮೊಹಲ್ಲಾದ ನಾಗರತ್ನ ಅವರ ಮನೆಯನ್ನು 7 ಲಕ್ಷ ರೂ.ಗೆ ಅಡವಿಟ್ಟುಕೊಟ್ಟಿದ್ದ ಮಹೇಶ್, ಜಮೀನು ಖರೀದಿಸಿ ಕೊಡುವುದಾಗಿ ನಂಬಿಸಿ ಮತ್ತೆ 5 ಲಕ್ಷ ರೂ. ಸೇರಿ ಒಟ್ಟು 12 ಲಕ್ಷ ರೂ. ಹಣ ಪಡೆದಿದ್ದ ಎನ್ನಲಾಗಿದೆ.
    ಜಮೀನು ಖರೀಸಿಕೊಡದೆ ಸತಾಯಿಸುತ್ತಿದ್ದ ಮಹೇಶ್‌ನನ್ನು 2016 ರ ಮೇ 13 ರಂದು ಮೈಸೂರು ಪಶ್ಚಿಮ ಉಪ ನೋಂದಣಾಧಿಕಾರಿಗಳ ಕಚೇರಿ ಬಳಿ ನಾಗರತ್ನ ಪ್ರಶ್ನಿಸಿದ್ದಕ್ಕೆ ಅವರನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದರು. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪ ಪಟ್ಟಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎ.ಜಿ.ಶಿಲ್ಪಾ ಅವರು, ಆರೋಪ ಸಾಬೀತಾದ ಹಿನ್ನ್ನೆಲೆಯಲ್ಲಿ 4 ವರ್ಷ ಶಿಕ್ಷೆಯೊಂದಿಗೆ 33 ಸಾವಿರ ದಂಡ ವಿಧಿಸಿದ್ದಾರೆ. ಜತೆಗೆ ಪರಿಹಾರವಾಗಿ 12 ಲಕ್ಷ ರೂ. ನೀಡುವಂತೆ ಆದೇಶಿಸಿದ್ದಾರೆ. ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಪ್ರಕಾಶ ಅವರು ದೂರುದಾರರ ಪರ ವಕಾಲತ್ತು ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts