ನವದೆಹಲಿಯಲ್ಲಿ ಲಾಕ್​ಡೌನ್​ ಸಡಿಲಿಕೆ; ಸರಿ-ಬೆಸ ನಿಯಮ ಜಾರಿ

aravind
Published on

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಲಾರಂಭಿಸಿದೆ. ಆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್​ಡೌನ್​ ನಿಯಮವನ್ನೂ ಸರ್ಕಾರ ಸಡಿಲಗೊಳಿಸಿ ಆದೇಶಿಸಿದೆ. ಸರಿ-ಬೆಸ ನಿಯಮದಲ್ಲಿ ಕೆಲ ಕೆಲಸ ಕಾಮಗಾರಿಗಳು ಹಾಗೂ ಅಂಗಡಿಗಳನ್ನು ಪುನರಾರಂಭಿಸಲು ಅನುಮತಿ ನೀಡಲಾಗಿದೆ.

ಖಾಸಗಿ ಕಚೇರಿಗಳಲ್ಲಿ ಶೇ. 50 ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿ ಇದೆ. ಎಲ್ಲ ರೀತಿಯ ಮಾರುಕಟ್ಟೆಗಳು ಹಾಗೂ ಅಂಗಡಿಗಳು ಸರಿ ಬೆಸ ನಿಯಮದಲ್ಲಿ ಬಾಗಿಲು ತೆರೆಯಬಹುದು. ಇ ಕಾಮರ್ಸ್​ ಮೂಲಕ ಹೋ ಡೆಲಿವರಿ ಮಾಡಬಹುದು. ಎಲ್ಲ ಅಂಗಡಿಗಳು ಬೆಳಗ್ಗೆ 10ರಿಂದ ರಾತ್ರಿ 8ರವರೆಗೂ ತೆರೆದಿಡಬಹುದು. ಮಾಲ್​ಗಳಿಗೂ ಇದೇ ನಿಯಮವಿರಲಿದೆ ಎಂದು ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ. ಈ ಹಿಂದೆ ರಾಜ್ಯದಲ್ಲಿ ವಾಯುಮಾಲಿನ್ಯ ಹೆಚ್ಚಾದಾಗಲೂ ಇದೇ ರೀತಿ ಸರಿ ಬೆಸ ನಿಯಮ ಅನುಸರಿಸಲಾಗಿತ್ತು.

ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ಸಾರಿಗೆ ವ್ಯವಸ್ಥೆಗೂ ಸಡಿಲಿಕೆಯನ್ನು ನೀಡಲಾಗಿದೆ. ಮೆಟ್ರೋ ರೈಲುಗಳಲ್ಲಿ ಶೇ. 50 ಆಸನ ಭರ್ತಿ ಮಾಡಬಹುದು ಎಂದು ತಿಳಿಸಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಎ ವರ್ಗದ ನೌಕರರು ಎಲ್ಲ ದಿನ ಕೆಲಸ ಮಾಡಬಹುದು. ಅವರ ಕೆಳ ದರ್ಜೆಯವರು ಶೇ. 50 ಸಿಬ್ಬಂದಿಯಾಗಿ ಕೆಲಸ ಮಾಡಬೇಕು ಎಂದು ತಿಳಿಸಲಾಗಿದೆ. ಜಿಮ್​ಗಳು, ಸ್ವಿಮ್ಮಿಂಗ್​ ಪೂಲ್​ಗಳು, ವಾಟರ್​ ಪಾರ್ಕ್​, ಸೆಲಾನ್​, ಶೈಕ್ಷಣಿಕ ಸಂಸ್ಥೆ, ಸಿನಿಮಾ ಹಾಲ್​, ಥಿಯೇಟರ್​ಗಳನ್ನು ಸದ್ಯಕ್ಕೆ ತೆರಯುವಂತಿಲ್ಲ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ತಿಳಿಸಿದ್ದಾರೆ. ಸೋಂಕು ಕಡಿಮೆಯಾದಂತೆ ಹಂತ ಹಂತವಾಗಿ ಲಾಕ್​ಡೌನ್​ ಸಡಿಲಿಕೆ ಮಾಡುವುದಾಗಿ ಅವರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net