ಈ ಚಿತ್ರದಲ್ಲಿ ಅಡಿಗಿರುವ ಜಿಂಕೆಯನ್ನು 30 ಸೆಕೆಂಡ್‌ಗಳಲ್ಲಿ ಪತ್ತೆ ಮಾಡಿ; ನಿಮ್ಮ ಸಮಯ ಈಗ ಶುರು…

deer optical illusion perfect vision challenge (1)
Published on

ಬೆಂಗಳೂರು: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಈ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್​ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಇಂತಹ ಸವಾಲುಗಳನ್ನು ಸ್ವೀಕರಿಸುವುದರಿಂದ ನಿಮ್ಮ ಕಣ್ಣಿನ ದೃಷ್ಟಿ ಹಾಗೂ ಬುದ್ಧಿಶಕ್ತಿ ಹೆಚ್ಚಾಗುತ್ತದೆ. ಹಾಗಿದ್ದರೆ ಬನ್ನಿ ನಾವು ಇಂದು ನೀಡುವ ಸವಾಲನ್ನು ಸ್ವೀಕರಿಸಿ.

ದೃಷ್ಟಿ ಭ್ರಮೆ ಎಂದರೇನು?: ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

ಸದ್ಯ ವೈರಲ್​​​ ಆಗಿರುವ ಫೋಟೋದಲ್ಲಿ ಈ ಬೆಟ್ಟದ ಮೇಲೆ ಕಲ್ಲು ಬಂಡೆಗಳನ್ನು ನೋಡಬಹುದಾಗಿದೆ. ಈ ಬಂಡೆಗಳ ನಡುವೆ ಒಂದು ಜಿಂಕೆ ಅಡಿಗಿದೆ. ಅದು ಎಲ್ಲಿದೆ ಎಂಬುದನ್ನು ಪತ್ತೆಹಚ್ಚಬೇಕು.  ನಾವು ನಿಮಗೆ ನೀಡುತ್ತಿರುವ ಸಮಯ ಕೇವಲ 30 ಸೆಕೆಂಡುಗಳು ಮಾತ್ರ.

ಸೂಕ್ಷ್ಮವಾಗಿ ಗಮನಿಸಿದರೆ ಜಿಂಕೆ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಬಹುದು. ನಿಮಗೆ 30 ಸೆಕೆಂಡ್​ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಫೋಟೋದಲ್ಲಿರುವ ಜಿಂಕೆಯನ್ನು ಪತ್ತೆ ಹಚ್ಚಬೇಕು. ನಿಮ್ಮ ಸಮಯ ಈಗ ಶುರು. ಟಿಕ್​....ಟಿಕ್​​... ಟಿಕ್​​... ಟಿಕ್​​

ನೀವು ಈ ಸವಾಲನ್ನು ಸ್ವೀಕರಿಸಿ ಜೀಂಕೆಯನ್ನು ಹುಡುಕಿದ್ದರೆ ನಿಮಗೆ ಶುಭಾಶಯಗಳು. ನಿಮಗೆ ಮುದ್ದಾದ ಜಿಂಕೆ ಹುಡುಕಲು ಸಾಧ್ಯವಾಗದೇ ಇದ್ದರೆ ನಾವು ಉತ್ತರವನ್ನು ನೀಡುತ್ತೇವೆ. ನಿಮ್ಮ ಸಮಯ ಮುಗಿದಿದೆ. ಕೇಳಗೆ ಕೊಟ್ಟಿರುವ ಫೋಟೋದಲ್ಲಿ ಉತ್ತರವನ್ನು ಗುರುತು ಮಾಡಲಾಗಿದೆ ಗಮನಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net