

ಮೇಷ: ಆಕಸ್ಮಿಕ ಲಾಭ. ಉದ್ಯೋಗ ಸ್ಥಳದಲ್ಲಿ ಅಡೆತಡೆ. ಸಹೋದರ-ಸಹೋದರಿಯರಿಂದ ಸಮಸ್ಯೆ ಪರಿಹಾರ. ಲಾಭದಲ್ಲಿ ಕುಸಿತ. ಶುಭಸಂಖ್ಯೆ: 5
ವೃಷಭ: ವಿದೇಶ ಪ್ರಯಾಣ ಯೋಗ. ಬಂಧುಗಳಿಂದ ನೋವು. ಅಪಮಾನವಾದೀತು. ಪ್ರಯಾಣದಲ್ಲಿ ಆಲಸ್ಯ. ನಿಧಾನ ಬೆಳವಣಿಗೆ. ಶುಭಸಂಖ್ಯೆ: 1
ಮಿಥುನ: ನಟರಿಗೆ ಅನುಕೂಲಕರ ದಿನ. ಸಾಲ ಮಾಡುವ ಪರಿಸ್ಥಿತಿ ಬಂದೀತು. ಕುಟುಂಬಸ್ಥರೊಂದಿಗೆ ವಾಗ್ವಾದ. ಅನಾರೋಗ್ಯ ಸಮಸ್ಯೆ. ಶುಭಸಂಖ್ಯೆ:4
ಕಟಕ: ಸ್ವಯಂಕೃತ ಅಪರಾಧದಿಂದ ಬೇಸರ. ಮಾನಕ್ಕೆ ಧಕ್ಕೆ ಸಾಧ್ಯತೆ. ವಿಕೃತ ಮನೋಭಿಲಾಷೆ ನಿಯಂತ್ರಿಸಿ. ದಾಂಪತ್ಯದಲ್ಲಿ ಕಲಹ. ಶುಭಸಂಖ್ಯೆ: 9
ಸಿಂಹ: ಸ್ಥಿರಾಸ್ತಿ ಮತ್ತು ವಾಹನ ನಷ್ಟ ಉಂಟಾಗುವುದು. ತಾಯಿಯಿಂದ ದೂರವಾಗುವ ಸನ್ನಿವೇಶ. ನೀರು, ಆಹಾರದಿಂದ ಅನಾರೋಗ್ಯ. ಶುಭಸಂಖ್ಯೆ: 2
ಕನ್ಯಾ: ಮಕ್ಕಳಿಂದ ಲಾಭವಾಗುವುದು. ಕೋರ್ಟ್ ಕೇಸುಗಳಲ್ಲಿ ಜಯ ನಿಮ್ಮ ಪರವಾಗಿದೆ. ಮಿತ್ರರು ಶತ್ರುವಾಗಿ ಪರಿವರ್ತನೆಯಾಗುವರು. ಶುಭಸಂಖ್ಯೆ: 3
ತುಲಾ: ಸಂಗಾತಿಯೊಂದಿಗೆ ವಾಗ್ವಾದ. ಸಂಯಮದಿಂದ ಇರಿ. ಅನಿರೀಕ್ಷಿತವಾಗಿ ಧನಾಗಮನ. ವೃತ್ತಿಪರರಿಗೆ ಅನುಕೂಲ ಒದಗಿಬರಲಿದೆ. ಶುಭಸಂಖ್ಯೆ: 7
ವೃಶ್ಚಿಕ: ಪ್ರಯಾಣದಲ್ಲಿ ಅಡೆತಡೆ. ಆರೋಗ್ಯದಲ್ಲಿ ಏರುಪೇರು. ಮಾನಸಿಕವಾಗಿ ನೋವು. ಒತ್ತಡದ ಜೀವನ. ಆಸ್ತಿ ವಿಚಾರವಾಗಿ ಸಮಸ್ಯೆ. ಶುಭಸಂಖ್ಯೆ: 9
ಧನುಸ್ಸು: ಆಕಸ್ಮಿಕವಾಗಿ ಧನ ನಷ್ಟವಾಗುವುದು. ನಂಬಿಕಸ್ಥ ವ್ಯಕ್ತಿಗಳಿಂದ ತೊಂದರೆ ಸಾಧ್ಯತೆ. ಉಸಿರಾಟ ಸಮಸ್ಯೆ ಆತಂಕ ಸೃಷ್ಟಿಸುವುದು. ಶುಭಸಂಖ್ಯೆ: 1
ಮಕರ: ಪಾಲುದಾರಿಕೆಯಲ್ಲಿ ನಿರೀಕ್ಷಿತ ಲಾಭ. ಸ್ನೇಹಿತರಿಂದ ಸಕಾಲಕ್ಕೆ ಸಹಾಯ. ಬಹುದಿನಗಳ ಆಸೆ-ಆಕಾಂಕ್ಷೆಗಳು ಈಡೇರುವವು. ಶುಭಸಂಖ್ಯೆ: 2
ಕುಂಭ: ಶತ್ರು ಕಾಟ ವಿಪರೀತವಾಯಿತು ಅನ್ನಿಸುವುದು. ಲಾಭ-ನಷ್ಟ ಸಮ ಪ್ರಮಾಣದಲ್ಲಿರಲಿದೆ. ಅನಾರೋಗ್ಯ. ಅಧಿಕಾರಿಗಳಿಂದ ನಷ್ಟ. ಶುಭಸಂಖ್ಯೆ: 9
ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಅನಿರೀಕ್ಷಿತ ದೂರ ಪ್ರಯಾಣ. ತಂದೆಯಿಂದ ಅದೃಷ್ಟ. ದೇವತಾದರ್ಶನ. ಧರ್ಮ ಕಾರ್ಯ. ಶುಭಸಂಖ್ಯೆ: 5