More

    ಈ ಜ್ಯೂಸ್ ಕುಡಿದರೆ ದೇಹವು ಶುದ್ಧಿಯಾಗುತ್ತೆ, ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತೆ..!

    ಬೆಂಗಳೂರು: ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಸ್ವಲ್ಪಮಟ್ಟಿಗೆ ದುರ್ಬಲಗೊಳ್ಳುತ್ತದೆ. ಇದರಿಂದ ನೆಗಡಿ, ಜ್ವರ, ಸೋಂಕುಗಳು ಹೆಚ್ಚು ದಾಳಿ ಮಾಡುತ್ತವೆ. ಇವುಗಳಿಂದ ರಕ್ಷಿಸಲು ಮೊಸಂಬಿ ಒಂದು ಉತ್ತಮ ರಾಮಬಾಣವಾಗಿದ್ದು, ಇದರ ಜ್ಯೂಸ್ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

    ಇದನ್ನೂ ಓದಿ: VIDEO: 10 ರೂ.ಗೆ ಏಳು ಪಾನಿಪೂರಿ ನೀಡದಿದ್ದಕ್ಕೆ ಗಲಾಟೆ, ನಡುರಸ್ತೆಯಲ್ಲಿ ಹೊಡೆದಾಟ..

    ಈ ಹಣ್ಣಿನಲ್ಲಿ ವಿಟಮಿನ್ ಸಿ, ಎ, ರಂಜಕ, ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್ ಮತ್ತು ಫೋಲೇಟ್ ನಂತಹ ಪೋಷಕಾಂಶಗಳು ಸಮೃದ್ಧವಾಗಿದ್ದು, ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಬ್ಯಾಕ್ಟೀರಿಯಾ, ಆ್ಯಂಟಿ ಫಂಗಲ್, ಆ್ಯಂಟಿ ಅಲ್ಸರ್ ಗುಣಗಳಿವೆ. ಈ ಜ್ಯೂಸ್ ಕುಡಿಯಲು ಅನೇಕರು ಆಸಕ್ತಿ ಹೊಂದಿದ್ದು, ಈ ಜ್ಯೂಸ್​ನ ಆರೋಗ್ಯ ಪ್ರಯೋಜನಗಳನ್ನು ಇಂತಿವೆ.

    ಮೊಸಂಬಿಯ ರಸವು ದೇಹದಿಂದ ತ್ಯಾಜ್ಯ ಮತ್ತು ವಿಷವನ್ನು ತೆಗೆದುಹಾಕುವುದರ ಜತೆಗೆ ಇದು ಶಕ್ತಿಯುತ ಡಿಟಾಕ್ಸ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಪಿತ್ತರಸದ ಸ್ರವಿಸುವಿಕೆಯನ್ನು ಹೆಚ್ಚಿಸುವುದರೆ ಜತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅಜೀರ್ಣ, ಕರುಳಿನ ಚಲನಶೀಲತೆ ಮತ್ತು ಇತರ ಜಠರಗರುಳಿನ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಜ್ಯೂಸ್ ಕುಡಿಯುವುದರಿಂದ ಪ್ರಯೋಜನ ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ.

    ಇದನ್ನೂ ಓದಿ: ರಾಖಿ ಕಟ್ಟಲು ಬಿಸಿಲನ್ನು ಲೆಕ್ಕಿಸದೇ ಬರಿಗಾಲಲ್ಲೇ 8 ಕಿ.ಮೀ ನಡೆದು ಬಂದ ವೃದ್ಧೆ..!

    ಸ್ಕರ್ವಿ ಎಂಬುದು ವಿಟಮಿನ್ ಸಿ ಕೊರತೆಯಿಂದ ಉಂಟಾಗುವ ಕಾಯಿಲೆಯಾಗಿದೆ. ರಕ್ತಸ್ರಾವ, ಒಸಡುಗಳು ಊದಿಕೊಳ್ಳುವುದು, ಆಗಾಗ್ಗೆ ಜ್ವರ, ನೆಗಡಿ, ಬಾಯಿ ಮತ್ತು ನಾಲಿಗೆ ಹುಣ್ಣುಗಳು, ತುಟಿಗಳ ಮೂಲೆಗಳಲ್ಲಿ ಬಿರುಕುಗಳು ಈ ರೋಗದ ಲಕ್ಷಣಗಳಾಗಿವೆ. ಇದರಲ್ಲಿ ಲಿಮೋನಾಯ್ಡ್ಸ್ ಎಂಬ ಸಂಯುಕ್ತಗಳಿದ್ದು, ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಹೃದಯವನ್ನು ಆರೋಗ್ಯವಾಗಿರಿಸಿ ರಕ್ತ ಪರಿಚಲನೆ ಸುಧಾರಿಸುವುದರ ಜತೆಗೆ ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಈ ವಿಷಯವು ಸಾಮಾನ್ಯ ಮಾಹಿತಿ ಮತ್ತು ಸಲಹೆಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ಸ್ವಂತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts