ಈ ರಾಶಿಯವರಿಗಿಂದು ಸರ್ಕಾರದಿಂದ ಧನಾದಾಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಹೊಸ ಉದ್ಯಮದ ಯೋಚನೆ ಮಾಡುವಿರಿ. ಸ್ನಾಯು ಸಂಬಂಧಿ ರೋಗಗಳ ಉಲ್ಬಣ. ಆರಕ್ಷಕ ವೃತ್ತಿಯವರಿಗೆ ಒತ್ತಡ. ಶುಭಸಂಖ್ಯೆ: 5

ವೃಷಭ: ಹೂವು - ಹಣ್ಣು ತರಕಾರಿ ವ್ಯಾಪಾರಸ್ಥರಿಗೆ ಲಾಭ. ಸರ್ಕಾರಿ ಕೆಲಸದಲ್ಲಿ ಮಂದಗತಿ. ಬಂಧುಗಳ ಜತೆ ವಾದವಿವಾದ ಬೇಡ. ಶುಭಸಂಖ್ಯೆ: 3

ಮಿಥುನ: ವಿದ್ಯಾರ್ಥಿಗಳು ಹೆಚ್ಚಿನ ಗಮನಹರಿಸಿ. ಮಹಿಳೆಯರಿಗೆ ಸರ್ಕಾರದಿಂದ ಧನಾದಾಯ. ವಿದೇಶಿ ವ್ಯಾಪಾರಸ್ಥರಿಗೆ ಶುಭದಿನ. ಶುಭಸಂಖ್ಯೆ: 8

ಕಟಕ: ಸಾಲ ತೀರಿಸಲು ಆರ್ಥಿಕ ಸೌಲಭ್ಯ ಲಭ್ಯ. ಆಸ್ತಿ ಕೆಲಸಗಳಿಗೆ ಆತ್ಮಸ್ಥೈರ್ಯ ಬೇಕು. ಪುರಾತನ ವಸ್ತು ಸಂಗ್ರಹಣೆಯಲ್ಲಿ ಆಸಕ್ತಿ. ಶುಭಸಂಖ್ಯೆ: 7

ಸಿಂಹ: ಗಣ್ಯರ ಭೇಟಿ. ಅಪರಿಚಿತರ ಬಗ್ಗೆ ಎಚ್ಚರವಿರಲಿ. ಅನಗತ್ಯ ವಿವಾದಗಳಿಂದ ದೂರವಿರುವುದು ಕ್ಷೇಮ. ಪಾಲುದಾರದಿಂದ ಮೋಸ. ಶುಭಸಂಖ್ಯೆ: 2

ಕನ್ಯಾ: ವೈದ್ಯಕೀಯ ವಾಣಿಜ್ಯ ವಿದ್ಯಾರ್ಥಿಗಳಿಗೆ ಯಶಸ್ಸು. ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಲಾಭ. ಹೃದಯ ತೊಂದರೆ ಕುರಿತು ಎಚ್ಚರವಹಿಸಿ. ಶುಭಸಂಖ್ಯೆ: 9

ತುಲಾ: ಯಂತ್ರೋಪಕರಣ ವ್ಯಾಪಾರಸ್ಥರಿಗೆ ಶುಭ. ಲೆಕ್ಕ ಪರೀಕ್ಷಕರಿಗೆ ಅನಿರೀಕ್ಷಿತ ಲಾಭವಾಗುವುದು. ವಿದ್ಯಾಭ್ಯಾಸದ ಕಡೆ ಗಮನವಿರಲಿ. ಶುಭಸಂಖ್ಯೆ: 3

ವೃಶ್ಚಿಕ: ಗೃಹಬಳಕೆ ವಸ್ತು ಮಾರಾಟಸ್ಥರಿಗೆ ಲಾಭ. ಪಿತ್ರಾರ್ಜಿತ ಆಸ್ತಿ ಲಭ್ಯ. ಆಭರಣಗಳ ಕುಸುರಿ ಕಲೆಗಾರರಿಗೆ ಬೇಡಿಕೆ. ಕೃಷಿಕರಿಗೆ ಅಶಾಂತಿ. ಶುಭಸಂಖ್ಯೆ: 3

ಧನುಸ್ಸು: ಆಹಾರ ಪದಾರ್ಥಗಳ ವ್ಯಾಪಾರಿಗಳಿಗೆ ವೃದ್ಧಿ. ವಿದ್ಯುತ್ ಸಂಬಂಧಿ ಕೆಲಸಗಾರರು ಎಚ್ಚರದಿಂದಿರಿ. ಗೃಹ ನಿರ್ವಣಕ್ಕೆ ತೊಂದರೆ. ಶುಭಸಂಖ್ಯೆ: 4

ಮಕರ: ಮಹಿಳೆಯರಿಗೆ ಆಭರಣ, ವಸ್ತ್ರ ಲಾಭ. ಮಕ್ಕಳ ಭವಿಷ್ಯದ ವಿಚಾರವಾಗಿ ಚಿಂತೆ, ವಿವಾಹಕ್ಕೆ ಅಡಚಣೆ. ಸಾಲ ಮಾಡುವ ಸಾಧ್ಯತೆ. ಶುಭಸಂಖ್ಯೆ: 1

ಕುಂಭ: ಕುಟುಂಬ ಸಮೇತ ದೂರದೂರಿಗೆ ಪ್ರಯಾಣ. ದೂರದೂರಿನಿಂದ ಆತ್ಮೀಯ ಮಿತ್ರನ ಆಗಮನ. ಕೆಲಸ ಬದಲಾವಣೆಗೆ ನಿರ್ಧಾರ. ಶುಭಸಂಖ್ಯೆ: 3

ಮೀನ: ಮಾದಕ ಉತ್ಪನ್ನಗಳ ವ್ಯಾಪಾರದಲ್ಲಿದ್ದವರಿಗೆ ನಷ್ಟ. ಭಯ. ವಿದ್ಯಾರ್ಥಿಗಳಲ್ಲಿ ಆತಂಕ. ವಿದ್ಯಾರ್ಥಿ ಜೀವನದಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net