More

    ಕೊಹ್ಲಿ ಇಸ್​ ಕಿಂಗ್​ ಎಂಬುದು ಮತ್ತೊಮ್ಮೆ ಸಾಬೀತು! ವಿಕಿಪೀಡಿಯಾ ಪುಟದಲ್ಲೂ ವಿರಾಟ ರೂಪ

    ನವದೆಹಲಿ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮ ತೋರಿದ ಅಮೋಘ ಪ್ರದರ್ಶನ ಅವರಿಬ್ಬರ ಖ್ಯಾತಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ. ಅಕ್ಟೋಬರ್​ ಮತ್ತು ನವೆಂಬರ್​ ತಿಂಗಳಲ್ಲಿ ಅತಿಹೆಚ್ಚು ಮಂದಿ ಸ್ಟಾರ್​ ಕ್ರಿಕೆಟಿಗರನ್ನು ಹುಡುಕಿಕೊಂಡು ವಿಕಿಪೀಡಿಯಾ ಪೇಜ್​ಗೆ ಸುನಾಮಿಯಂತೆ ನುಗ್ಗಿದ್ದಾರೆ.

    ವಿಶ್ವಕಪ್​ನಲ್ಲಿ ಕೊಹ್ಲಿ ಮತ್ತು ರೋಹಿತ್​ ಪ್ರಮುಖ ಪಾತ್ರ ವಹಿಸಿದರು. ಈ ಮೂಲಕ ಹೆಚ್ಚು ಖ್ಯಾತಿ ಗಳಿಸಿದ ಸ್ಟಾರ್​ ಕ್ರಿಕೆಟಿಗರು ಪುಟ್​ಬಾಲ್​ ತಾರೆಗಳಾದ ಕ್ರಿಶ್ಚಿಯಾನೋ ರೊನಾಲ್ಡೋ ಮತ್ತು ಲಿಯೋನೆಲ್​ ಮೆಸ್ಸಿ ಅವರನ್ನು ವಿಕಿಪೀಡಿಯಾದಲ್ಲಿ ಹಿಂದಿಕ್ಕಿದ್ದಾರೆ.

    ಕೊಹ್ಲಿ ವಿಕಿಪೀಡಿಯಾ ಪೇಜ್​ಗೆ 5 ಮಿಲಿಯನ್​ಗೂ ಅಧಿಕ ಮಂದಿ ಭೇಟಿ ನೀಡಿದರೆ, ರೋಹಿತ್​ ಪೇಜ್​ಗೆ 4.7 ಮಿಲಿಯನ್​ ಅಧಿಕ ಮಂದಿ ಬಂದು ಹೋಗಿದ್ದಾರೆ. ಉಳಿದಂತೆ ರೊನಾಲ್ಡೋ (4.4 ಮಿಲಿಯನ್​+) ಮತ್ತು ಮೆಸ್ಸಿ (4.3 ಮಿಲಿಯನ್​+) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.

    ವಿರಾಟ್​ ಕೊಹ್ಲಿ ಅವರು ವೈಯಕ್ತಿಕ 765 ರನ್‌ಗಳೊಂದಿಗೆ ಪ್ಲೇಯರ್​ ಆಫ್​ ವರ್ಲ್ಡ್​ಕಪ್​ ಎಂಬ ಗೌರವಕ್ಕೆ ಭಾಜನರಾದರು. 597 ರನ್‌ಗಳೊಂದಿಗೆ ವಿಶ್ವಕಪ್​ನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಎರಡನೇ ಆಟಗಾರ ಎಂಬ ಕೀರ್ತಿಯನ್ನು ರೋಹಿತ್ ಗಳಿಸಿದರು. ಹೆಚ್ಚು ರನ್​ ಗಳಿಸಿದ ಪಟ್ಟಿಯಲ್ಲಿ ಮೊದಲು ಮತ್ತು ಎರಡನೇ ಸ್ಥಾನದಲ್ಲಿ ಭಾರತದ ಆಟಗಾರರೇ ಇದ್ದರೂ ಫೈನಲ್‌ ಪಂದ್ಯದಲ್ಲಿ ಭಾರತವು, ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‌ಗಳಿಂದ ಸೋಲನ್ನು ಅನುಭವಿಸಿತು. ಇದು ಅಸಂಖ್ಯಾತ ಭಾರತೀಯ ಕ್ರೀಡಾಪಟುಗಳನ್ನು ದುಃಖ ಸಾಗರಕ್ಕೆ ನೂಕಿದ್ದನ್ನು ಮರೆಯುವಂತಿಲ್ಲ.

    ದಾಖಲೆ ವೀಕ್ಷಣೆ
    ಬರೋಬ್ಬರಿ 518 ಮಿಲಿಯನ್ ಅಭಿಮಾನಿಗಳು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್​ ಮೂಲಕ ವಿಶ್ವಕಪ್​ ಪಂದ್ಯಗಳನ್ನು ವೀಕ್ಷಿಸಿದ್ದಾರೆ ಮತ್ತು 295 ಮಿಲಿಯನ್ ಜನರು ಒಟಿಟಿ ಪ್ಲಾಟ್‌ಫಾರ್ಮ್ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಿದ್ದಾರೆ. ಟೂರ್ನಮೆಂಟ್​ ಸಮಯದಲ್ಲಿ ಉಭಯ ಮಿಡಿಯಾ ವೇದಿಕೆಗಳು ಹೆಚ್ಚು ವೀಕ್ಷಕರ ನೋಂದಣಿಯನ್ನು ಹೊಂದಿವೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್​ ಪಂದ್ಯದದಲ್ಲಿ ಆತಿಥೇಯ ಭಾರತದ ಸೋಲಿನ ಹೊರತಾಗಿಯೂ, ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಸುಮಾರು 5.9 ಕೋಟಿ ವೀಕ್ಷಣೆ ಕಂಡಿದೆ. ಇದು ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯದಲ್ಲಿ ದಾಖಲಾದ 5.3 ಕೋಟಿ ವೀಕ್ಷಕರ ದಾಖಲೆಯನ್ನು ಮುರಿದಿದೆ.

    ವಿಶ್ವಕಪ್‌ ಟೂರ್ನಿಯಲ್ಲಿ ಕಳೆದ ತಿಂಗಳು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಲೀಗ್ ಪಂದ್ಯವು 3.5 ಕೋಟಿಯ ಗರಿಷ್ಠ ಕಾನ್​ಕರೆನ್ಸಿ ವೀಕ್ಷಕರನ್ನು ದಾಖಲಿಸಿತ್ತು. (ಏಜೆನ್ಸೀಸ್​)

    ಮತ್ತೆ ಶುರುವಾಗುವುದೇ ಎಲ್​ಟಿಟಿಇ ಯುದ್ಧ?; ಸೋಷಿಯಲ್​ ಮೀಡಿಯಾದಲ್ಲಿ ಕಾಣಿಸಿದವಳು ಪ್ರಭಾಕರನ್​ ಮಗಳೇ?

    ಚಿನ್ನ ಬೇಡ ಪ್ಲಾಟಿನಂ ಬೇಕು! ಯುವಕರಿಂದ ಸೃಷ್ಟಿಯಾಯ್ತು ಹೊಸ ಟ್ರೆಂಡ್, ಹೆಣ್ಣು ಹೆತ್ತವರ ನಿಟ್ಟುಸಿರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts