More

    ಚಿನ್ನ ಬೇಡ ಪ್ಲಾಟಿನಂ ಬೇಕು! ಯುವಕರಿಂದ ಸೃಷ್ಟಿಯಾಯ್ತು ಹೊಸ ಟ್ರೆಂಡ್, ಹೆಣ್ಣು ಹೆತ್ತವರ ನಿಟ್ಟುಸಿರು

    ನವದೆಹಲಿ: ನಗರದ ಪ್ರದೇಶದ ಹೆಚ್ಚಿನ ಯುವಕರು ತಮ್ಮ ಮದುವೆ ಸಂದರ್ಭದಲ್ಲಿ ಚಿನ್ನದ ಬದಲಾಗಿ ಪ್ಲಾಟಿನಂ​ಗೆ ಹೆಚ್ಚು ಆದ್ಯತೆ ನೀಡುತ್ತಿರುವುದರಿಂದ ವಧುವಿನ ಕುಟುಂಬಗಳಿಗೆ ಕೊಂಚ ಮಟ್ಟದ ನಿರಾಳತೆಯನ್ನು ತಂದಿದೆ ಎಂದು ಹೇಳಬಹುದು. ಏಕೆಂದರೆ, ನಿಮಗೆಲ್ಲರಿಗೂ ಗೊತ್ತಿರುವಂತೆ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿದೆ. ಇದೀಗ 10 ಗ್ರಾಂ ಚಿನ್ನದ ಬೆಲೆ 61 ಸಾವಿರ ರೂ. ದಾಟಿದೆ. ಅದೇ ರೀತಿ ಪ್ಲಾಟಿನಂ​ 10 ಗ್ರಾಂಗೆ 25 ಸಾವಿರ ರೂ. ಇದೆ.

    ಇತ್ತೀಚಿನ ವರದಿಗಳ ಪ್ರಕಾರ ಯುವಕರಲ್ಲಿ ಚಿನ್ನಕ್ಕಿಂತ ಪ್ಲಾಟಿನಂ​ ನೆಚ್ಚಿನ ಆಯ್ಕೆಯಾಗಿದ್ದು, ಸ್ಟೈಲಿಶ್​ ಡಿಸೈನ್​ಗಳೊಂದಿಗೆ ತೆಳುವಾದ ಪ್ಲಾಟಿನಂ ಸರಗಳನ್ನು ಹೆಚ್ಚು ಬಯಸುತ್ತಿದ್ದಾರೆ. ಭಾರತದ ವಿವಾಹ ಸಂಪ್ರದಾಯದ ಭಾಗವಾಗಿ ವಧುವಿನ ಕುಟುಂಬವು ವರನಿಗೆ ಆಭರಣಗಳನ್ನು ಉಡುಗೊರೆಯಾಗಿ ನೀಡುವುದು ವಾಡಿಕೆ. ಆದರೆ, ಇದೀಗ ಚಿನ್ನದ ಬದಲು ಪ್ಲಾಟಿನಂ​ ಕೊಡುವ ಟ್ರೆಂಡ್​ ದೇಶಾದ್ಯಂತ ಖ್ಯಾತಿ ಪಡೆದುಕೊಳ್ಳುತ್ತಿದೆ. ಈ ಹಬ್ಬದ ಸೀಸನ್​ನಲ್ಲಿ ಪುರುಷರ ಪ್ಲಾಟಿನಂ​ ಆಭರಣಗಳ ಕೆಟಗರಿಯಲ್ಲಿ 25 ರಿಂದ 30 ರಷ್ಟು ಮಾರಾಟ ಬೆಳವಣಿಗೆಯಾಗಿದೆ ಎಂದು ಜೋಯ್​ ಅಲುಕ್ಕಾಸ್​ ಆಭರಣ ಕಂಪನಿ ಚೇರ್ಮನ್​ ಜೋಯ್​ ಅಲುಕ್ಕಾಸ್​ ತಿಳಿಸಿದ್ದಾರೆ.

    ಭಾರತದ ವರರು ಪ್ಲಾಟಿನಂ​ ಆಭರಣಗಳನ್ನು ಖರೀದಿಸಲು ಹೆಚ್ಚು ಆಸಕ್ತಿಯನ್ನು ತೋರಿಸುತ್ತಿರುವುದರಿಂದ ಮದುವೆಯ ಸೀಸನ್​ವರೆಗೂ ಇದೇ ಟ್ರೆಂಡ್ ಮುಂದುವರಿಯುವ ನಿರೀಕ್ಷೆ ಇದೆ. ಅಲ್ಲದೆ, ಇದೇ ಟ್ರೆಂಡ್ ಅನ್ನು ಮತ್ತಷ್ಟು ಉತ್ತೇಜಿಸಲು, ಕ್ರಿಕೆಟಿಗ ಸೂರ್ಯ ಕುಮಾರ್ ಯಾದವ್ ಅವರನ್ನು ಪ್ಲಾಟಿನಂ​ ಗಿಲ್ಡ್ ಇಂಟರ್ನ್ಯಾಷನಲ್, ಪುರುಷರ ಪ್ಲಾಟಿನಂ ಆಭರಣಗಳ ಪ್ರಮುಖ ಮುಖವಾಗಿ ನೇಮಿಸಿದ್ದು, ಇದು ಈ ವರ್ಷದ ಹಬ್ಬದ ಸೀಸನ್​ನಲ್ಲಿ ಪಾಲುದಾರ ಚಿಲ್ಲರೆ ವ್ಯಾಪಾರಿಗಳ ಯಶಸ್ಸಿಗೆ ಕೊಡುಗೆ ನೀಡಿದೆ ಎಂದು ಪ್ಲಾಟಿನಂ ಆಭರಣಗಳನ್ನು ಉತ್ತೇಜಿಸುವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಬ್ಯಾನರ್ಜಿ ಹೇಳಿದ್ದಾರೆ.

    ಕುತೂಹಲಕಾರಿ ಸಂಗತಿ ಏನೆಂದರೆ, ಭಾರತದ ಪ್ರಮುಖ ನಗರಗಳ ಹೊರಗಡೆ ವಾಸಿಸುವ ಪುರುಷರು ಸಹ ಪ್ಲಾಟಿನಂ ಆಭರಣಗಳತ್ತ ಆಸಕ್ತಿ ತೋರಿಸುತ್ತಿದ್ದಾರೆ. ವಿಶೇಷವಾಗಿ 2 ಲಕ್ಷಕ್ಕಿಂತ ಕಡಿಮೆ ಬೆಲೆಯ ಬ್ರೇಸ್ಲೆಟ್ ಮತ್ತು ಚೈನ್‌ಗಳ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಈ ಬೆಲೆಯ ಶ್ರೇಣಿಯು ಖರೀದಿದಾರರಿಗೆ ಪ್ಯಾನ್​ ಕಾರ್ಡ್​ ಒದಗಿಸುವ ಅಗತ್ಯವನ್ನು ತಪ್ಪಿಸಲು ಅನುಮತಿಸುತ್ತದೆ. ಆದರೆ, 2 ಲಕ್ಷ ರೂ.ಗಿಂತ ಹೆಚ್ಚಿನ ಖರೀದಿಗಳಿಗೆ ಪ್ಯಾನ್​ ನಂಬರ್​ ಕಡ್ಡಾಯವಾಗಿದೆ.

    ಮಹಾರಾಷ್ಟ್ರ ಮತ್ತು ಗೋವಾದಲ್ಲಿ 42 ಶಾಖೆಗಳನ್ನು ನಿರ್ವಹಿಸುತ್ತಿರುವ PNG ಜ್ಯುವೆಲರ್ಸ್‌ನ ಅಧ್ಯಕ್ಷ ಸೌರಭ್ ಗಾಡ್ಗಿಲ್, ಯುವ ಪೀಳಿಗೆಯ ಪ್ಲಾಟಿನಂ ವಿನ್ಯಾಸಗಳ ಆಕರ್ಷಣೆ ಮತ್ತು ಚಿನ್ನಕ್ಕಿಂತ ಪ್ಲಾಟಿನಂ ಮೇಲಿನ ಆದ್ಯತೆಯ ಮಾತನಾಡಿದರು. ಈ ಹಬ್ಬದ ಸೀಸನ್​ನಲ್ಲಿ PNG ಜ್ಯುವೆಲರ್ಸ್‌ನಲ್ಲಿ ಪ್ಲಾಟಿನಂ ಆಭರಣಗಳ ಮಾರಾಟವು 25% ಬೆಳವಣಿಗೆಯನ್ನು ಕಂಡಿದೆ ಎಂದು ತಿಳಿಸಿದ್ದಾರೆ.

    ಸೌರಭ್ ಗಾಡ್ಗಿಲ್ ಅವರ ಪ್ರಕಾರ, ಬಾಳಿಕೆ ಬರುವ ಸ್ವಭಾವದಿಂದಾಗಿ, ಚಿನ್ನದ ಮೃದುತ್ವಕ್ಕೆ ಹೋಲಿಸಿದರೆ ಪ್ಲಾಟಿನಂ ಹೆಚ್ಚಿನ ತಾಪಮಾನದ ಕರಗುವಿಕೆಯನ್ನು ಬಯಸುತ್ತದೆ. ಇದರ ಪರಿಣಾಮವಾಗಿ ಪ್ಲಾಟಿನಂ ಆಭರಣಗಳ ತಯಾರಿಕೆಯು ಹೆಚ್ಚಿನ ವೆಚ್ಚವನ್ನು ಒಳಗೊಂಡಿರುತ್ತದೆ. ಇದರ ಹೊರತಾಗಿಯೂ, ಪ್ಲಾಟಿನಂ ಆಭರಣದ ಬೆಲೆ ಚಿನ್ನಕ್ಕಿಂತ ತುಲನಾತ್ಮಕವಾಗಿ ಕಡಿಮೆಯಾಗಿದೆ ಎಂದು ಹೇಳಿದರು. (ಏಜೆನ್ಸೀಸ್​)

    ರೈತರನ್ನು ಮದುವೆಯಾಗುವ ಹೆಣ್ಣಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕೊಡಿ

    ಕಾಸ್ಟಿಂಗ್​ ಕೌಚ್​: ಮಂಚಕ್ಕೆ ಕರೆದ ಸ್ಟಾರ್​ ನಟನ ತಂದೆಯ ಹೆಸರನ್ನು ಬಹಿರಂಗಪಡಿಸಿದ ನಟಿ ಶಕೀಲಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts