More

    ಕಾಸ್ಟಿಂಗ್​ ಕೌಚ್​: ಮಂಚಕ್ಕೆ ಕರೆದ ಸ್ಟಾರ್​ ನಟನ ತಂದೆಯ ಹೆಸರನ್ನು ಬಹಿರಂಗಪಡಿಸಿದ ನಟಿ ಶಕೀಲಾ!

    ಹೈದರಾಬಾದ್​: ನಟಿ ಶಕೀಲಾ ಬಗ್ಗೆ ಹೆಚ್ಚು ಪರಿಚಯಿಸುವ ಅಗತ್ಯವಿಲ್ಲ. 1990ರ ದಶಕದ ಬಹುತೇಕರಿಗೆ ಶಕೀಲಾ ಪರಿಚಯ ಇದ್ದೇ ಇರುತ್ತದೆ. ಒಂದು ಕಾಲದಲ್ಲಿ ತಮಿಳು ಮತ್ತು ಮಲಯಾಳಂನ ಸಾಫ್ಟ್​ಕೋರ್​ ನೀಲಿ ಚಿತ್ರಗಳಲ್ಲಿ ನಟಿಸುವ ಮೂಲಕ ಶಕೀಲಾ ಅವರು ದೊಡ್ಡ ದೊಡ್ಡ ನಟರಿಗೆ ಪೈಪೋಟಿ ನೀಡಿದ್ದರು. ಶಕೀಲಾ ಅವರ ಚಿತ್ರ ಬಿಡುಗಡೆಯಾಗುವಾಗ ಸ್ಟಾರ್​ ನಟರ ಚಿತ್ರಗಳೇ ಬದಿಗೆ ಸರಿಯುತ್ತಿದ್ದವು. ಆದರೆ ದಿನ ಕಳೆದಂತೆ ಶಕೀಲಾ ಅವರ ಖ್ಯಾತಿ ಕೂಡ ಕ್ಷೀಣಿಸುತ್ತಾ ಬಂದಿತು. ಅಲ್ಲದೆ, ಶಕೀಲಾ ನಿರಂತರವಾಗಿ ಸಾಫ್ಟ್​ ಸಾಫ್ಟ್​ಕೋರ್​ ನೀಲಿ ಚಿತ್ರಗಳಲ್ಲಿ ನಟಿಸಿದ್ದರಿಂದ ಕೇರಳ ಸಿನಿಮಾ ಕ್ಷೇತ್ರದಿಂದಲೇ ಅವರನ್ನು ಬ್ಯಾನ್​ ಮಾಡಲಾಯಿತು. ಬಳಿಕ ಮಲಯಾಳಂ ಸಿನಿಮಾ ಇಂಡಸ್ಟ್ರಿ ಬಿಟ್ಟು ತಮಿಳುನಾಡಿಗೆ ಬಂದು ನೆಲೆಸಿದರು.

    ತಮಿಳುನಾಡಿಗೆ ಬಂದು ನೆಲೆಸಿದ ಬಳಿಕ ನೀಲಿ ಸಿನಿಮಾಗಳ ನಟನೆಯಿಂದ ದೂರ ಉಳಿದ ಶಕೀಲಾ ತಮಗೆ ಸಿಕ್ಕ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡುತ್ತಾ ಬಂದರು. ಜಯಂ, ಅಳಗಿಯ ತಮಿಳ್​ ಮಗನ್ ಸೇರಿದಂತೆ ಕೆಲವು ತಮಿಳು ಸಿನಿಮಾಗಳಲ್ಲಿಯೂ ಶಕೀಲಾ ನಟಿಸಿದ್ದಾರೆ. ಅಲ್ಲದೆ, ಟಿವಿ ರಿಯಾಲಿಟಿ ಶೋಗಳಲ್ಲಿಯೂ ಭಾಗಿಯಾಗಿದ್ದಾರೆ.

    ಇತ್ತೀಚೆಗಷ್ಟೇ ಶಕೀಲಾ ಅವರು ತೆಲುಗಿನ ಬಿಗ್​ಬಾಸ್​ ಸೀಸನ್​ 7ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಆದರೆ, ಎರಡೇ ವಾರಕ್ಕೆ ಎಲಿಮಿನೇಟ್​ ಆದರು. ಇದೇ ಸಂದರ್ಭದಲ್ಲಿ ಕಾಸ್ಟಿಂಗ್​ ಕೌಚ್​ ಬಗ್ಗೆ ಚರ್ಚಿಸುವಾಗ ಶಕೀಲಾ ಪ್ರತಿಕ್ರಿಯೆ ನೀಡಿದ್ದು, ಟಾಲಿವುಡ್​ನಲ್ಲಿ ಭಾರೀ ಸಂಚಲನ ಸೃಷ್ಟಿ ಮಾಡಿದೆ. ಅನೇಕ ಅಶ್ಲೀಲ ಸಿನಿಮಾಗಳನ್ನು ಮಾಡಿರುವ ಶಕೀಲಾ, ಸಾಕಷ್ಟು ಕಿರುಕುಳಕ್ಕೂ ಒಳಗಾಗಿದ್ದಾರೆ. ಸ್ಟಾರ್​ ನಟರೊಬ್ಬರು ರಾತ್ರಿಯ ವೇಳೆ ನನ್ನನ್ನು ರೂಮಿಗೆ ಕರೆದು ಕಿರುಕುಳ ನೀಡಿದ್ದರು ಎಂದು ಇತ್ತೀಚೆಗಷ್ಟೇ ನಟಿ ವಿಚಿತ್ರ, ಆರೋಪ ಮಾಡಿದ್ದರು. ಇದೀಗ ಶಕೀಲಾ ಕೂಡ ಸ್ಟಾರ್ ನಿರ್ದೇಶಕರೊಬ್ಬರು ತನಗೆ ಕಿರುಕುಳ ನೀಡಿದ್ದನ್ನು ತಿಳಿಸಿದ್ದಾರೆ. ಅಲ್ಲದೆ, ಧೈರ್ಯದಿಂದಳೇ ಕಿರುಕುಳ ನೀಡಿದವರ ಹೆಸರನ್ನೂ ಬಹಿರಂಗಪಡಿಸಿದ್ದಾರೆ. ​

    ಶಕೀಲಾ ಹೇಳಿದ ನಿರ್ದೇಶಕ ಯಾರೆಂದರೆ, ಇವಿವಿ ಸತ್ಯನಾರಾಯಣ. ಅಂದಹಾಗೆ ಸತ್ಯನಾರಾಯಣ ಅವರು ಕ್ರೇಜಿ ಹೀರೋ ಅಲ್ಲಾರಿ ನರೇಶ್​ ಅವರ ತಂದೆ.

    ನಿರ್ದೇಶಕ ಇವಿವಿ ಸತ್ಯನಾರಾಯಣ ಅವರು ನಿರ್ದೇಶಿಸಿ ಸಿನಿಮಾದಲ್ಲಿ ನಟಿಸಿದೆ. ಆ ಸಮಯದಲ್ಲಿ ಇವಿವಿ ಅವರು ಹೊಂದಾಣಿಕೆ ಮಾಡಿಕೊಳ್ಳುವಂತೆ ನನ್ನ ಬಳಿ ಕೇಳಿದರು. ನನ್ನ ರೂಮಿಗೆ ಬಾ ಎಂದು ಕರೆದರು. ರೂಮಿಗೆ ಬಂದರೆ, ನನ್ನ ಮುಂದಿನ ಸಿನಿಮಾದಲ್ಲೂ ನಿನಗೆ ಅವಕಾಶ ಸಿಗಲಿದೆ ಎಂದರು. ಆದರೆ, ನನಗೆ ನಿಮ್ಮ ಮುಂದಿನ ಸಿನಿಮಾದಲ್ಲಿ ಅವಕಾಶ ಬೇಡ, ಅದರ ಅವಶ್ಯಕತೆಯೂ ನನಗಿಲ್ಲ ಎಂದು ಹೇಳಿಬಂದೆ ಎಂದು ಶಕೀಲಾ ಹೇಳಿದ್ದಾರೆ. (ಏಜೆನ್ಸೀಸ್​)

    ಪ್ರತಿದಿನ 4 ಲಕ್ಷ ರೂ. ಸಂಪಾದನೆ: ವಿಕಿಪೀಡಿಯಾವೂ ತಪ್ಪು ಹೇಳ್ತಿದೆ ಎಂದು ಕಷ್ಟದ ದಿನಗಳನ್ನು ನೆನೆದ ಶಕೀಲಾ

    ಗೆಳೆಯ ರಿಚರ್ಡ್​ ಜತೆ ಮೊದಲು… ಯೂಟ್ಯೂಬ್​ ಸಂದರ್ಶನದಲ್ಲಿ ಲೈಂಗಿಕತೆ ಬಗ್ಗೆ ಶಕೀಲಾ ಮುಕ್ತ ಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts