ಈ ರಾಶಿಯವರಿಗಿಂದು ದುರ್ವಾರ್ತೆ ಕೇಳುವಿರಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಭೂ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ ಬರಲಿದೆ. ಬಂಧುಗಳಿಂದ ಆಸ್ತಿ ನೋಂದಣಿಗೆ ವಿರೋಧ. ಹಳೆಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 5

ವೃಷಭ: ಮೂಳೆಗೆ ಸಂಬಂಧಿಸಿದ ವ್ಯಾಧಿ ಕಾಡಬಹುದು. ಮಿತ್ರರೊಂದಿಗೆ ಕಲಹವಾಗುವ ಸಾದ್ಯತೆ. ಅವಿವಾಹಿತರಿಗೆ ವಿವಾಹ ಸಿದ್ಧಿ. ಶುಭಸಂಖ್ಯೆ: 9

ಮಿಥುನ: ದಾಂಪತ್ಯದಲ್ಲಿ ವಿರಸ, ಸಮಾಧಾನ ಮುಖ್ಯ. ತಂದೆ ತಾಯಿಯ ಆರೋಗ್ಯದಲ್ಲಿ ಚೇತರಿಕೆ. ವಿವಾಹ ಕಾರ್ಯದಲ್ಲಿ ಯಶಸ್ಸು. ಶುಭಸಂಖ್ಯೆ: 7

ಕಟಕ: ವಿದ್ಯುತ್ ಉಪಕರಣ ವ್ಯಾಪಾರಸ್ಥರಿಗೆ ಮೋಸ. ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ. ಕೃಷಿಕರಿಗೆ ಶ್ರಮಕ್ಕೆ ತಕ್ಕ ಫಲ. ಶುಭಸಂಖ್ಯೆ: 3

ಸಿಂಹ: ಆಸ್ತಿ ವಿಚಾರದಲ್ಲಿ ಎಚ್ಚರಿಕೆ ಇರಲಿ. ಸಾಲಬಾಧೆ ನಿವಾರಣೆಗೆ ಸಹಾಯ ಸಿಗಲಿದೆ. ನೀರಿನ ವ್ಯಾಪಾರದಲ್ಲಿ ಆದಾಯ ಬರುವುದು. ಶುಭಸಂಖ್ಯೆ: 9

ಕನ್ಯಾ: ಮಾನಸಿಕ ಭಯ ಕಾಡಬಹುದು. ಬೋರವೆಲ್ ಕೊರೆವ ವ್ಯಾಪಾರದಲ್ಲಿ ಲಾಭ. ಆಭರಣ ವ್ಯವಹಾರದಲ್ಲಿ ಉತ್ತಮ ಆದಾಯ. ಶುಭಸಂಖ್ಯೆ: 2

ತುಲಾ: ಸ್ವಂತ ವ್ಯವಹಾರಗಳಲ್ಲಿ ಹೆಚ್ಚಿನ ಲಾಭವಿದೆ. ಗಣ್ಯ ವ್ಯಕ್ತಿಗಳ ಭೇಟಿ, ಮಾಡುವಿರಿ. ಧಾರ್ವಿುಕ ಕಾರ್ಯದಲ್ಲಿ ಸಕ್ರಿಯ. ಆಸ್ತಿ ವಿವಾದ. ಶುಭಸಂಖ್ಯೆ: 3

ವೃಶ್ಚಿಕ: ಪ್ರಯಾಣದಿಂದ ಬಳಲಿಕೆ. ಸಾಕುಪ್ರಾಣಿಯಿಂದ ಹಾನಿ. ಪ್ರತಿಭೆಗೆ ಸೂಕ್ತ ಮನ್ನಣೆ ಸಿಗಲಿದೆ. ವಾಣಿಜ್ಯ ಕ್ಷೇತ್ರದಲ್ಲಿ ಆರ್ಥಿಕ ನಷ್ಟ. ಶುಭಸಂಖ್ಯೆ: 7

ಧನಸ್ಸು: ಮಾನಸಿಕವಾಗಿ ಸದೃಢರಾಗಿ ತಾಂತ್ರಿಕ ವಿದ್ಯಾಭ್ಯಾಸದಲ್ಲಿ ಯಶ ಗಳಿಸುವಿರಿ. ಜಲ ಮಂಡಳಿ ವೃತ್ತಿಯಲ್ಲಿರುವವರಿಗೆ ಲಾಭ. ಶುಭಸಂಖ್ಯೆ: 1

ಮಕರ: ಕಿರುತೆರೆ, ಚಲನಚಿತ್ರ ನಟರಿಗೆ ಯಶಸ್ಸು. ಮಾನಸಿಕ ಸಮಸ್ಯೆ ನಿವಾರಣೆಗೆ ಚಿಕಿತ್ಸೆ ಪಡೆದುಕೊಳ್ಳಿ. ಸಹವರ್ತಿಗಳಿಂದ ತೊಂದರೆ. ಶುಭಸಂಖ್ಯೆ: 6

ಕುಂಭ: ಸ್ಥಿರಾಸ್ತಿಗೋಸ್ಕರ ಕಲಹ. ಮಾನಸಿಕವಾದ ದೌರ್ಬಲ್ಯ. ದಾಂಪತ್ಯದಲ್ಲಿ ಸಮಸ್ಯೆ. ಚಿಕ್ಕ ಕೃಷಿಕರಿಗೆ ವಿಶೇಷ ಪ್ಯಾಕೇಜ್ ಸಿಗಲಿದೆ. ಶುಭಸಂಖ್ಯೆ: 2

ಮೀನ: ದುರ್ವಾರ್ತೆ ಕೇಳುವಿರಿ. ನ್ಯಾಯಾಲಯದ ಕಾರ್ಯದಲ್ಲಿ ಸೋಲಾಗುವುದು. ಚಿಕ್ಕ ಶಸ್ತ್ರ ಚಿಕಿತ್ಸೆ ಸಾಧ್ಯತೆ. ಕುಲದೇವರನ್ನು ಸ್ಮರಿಸಿ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net