ಬೆಂಗಳೂರು: 2025ರಲ್ಲಿ ನಡೆಯಲಿರುವ 18ನೇ ಆವೃತ್ತಿಯ ಐಪಿಎಲ್ಗೆ (IPL) ಸಂಬಂಧಿಸಿದ ಕೆಲಸಗಳು ಈಗಾಗಲೇ ಬಿರುಸಿನಿಂದ ನಡೆಯುತ್ತಿದ್ದು, ವರ್ಷಾಂತ್ಯದಲ್ಲಿ ನಡೆಯಲಿರುವ ಮೆಗಾ ಹರಾಜು (Mega Auction) ಪ್ರಕ್ರಿಯೆ ಮೇಲೆ ಭಾರೀ ನಿರೀಕ್ಷೆ ಉಂಟಾಗಿದೆ. ಇನ್ನೂ ರಿಟೇನ್ (Retain) ವಿಚಾರಕ್ಕೆ ಬರುವುದಾದರೆ ಮೂರು ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಆರ್ಸಿಬಿ (RCB) ಫ್ರಾಂಚೈಸಿಯು ಮೆಗಾ ಹರಾಜಿನಲ್ಲಿ ದೊಡ್ಡ ಆಟಗಾರರನ್ನೇ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಸಜ್ಜಾಗಿದ್ದು, ಈ ಬಗ್ಗೆ ಮಾಜಿ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ (ABD) ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.
ರಿಟೇನ್ ಪಟ್ಟಿ ಹಾಗೂ ಮೆಗಾ ಹರಾಜಿಗೆ ಸಂಬಂಧಿಸಿದಂತೆ ಮಾಜಿ ಆಟಗಾರರು ತಮ್ಮ ಅಭಿಪ್ರಾಯವನ್ನು ಹೊರಹಾಕುತ್ತಿದ್ದು, ಅದೇ ರೀತಿ ಎಬಿ ಡಿವಿಲಿಯರ್ಸ್ (ABD) ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿರುವ ಈ ಒಬ್ಬ ಆಟಗಾರ ಆರ್ಸಿಬಿ (RCB) ಪಾಲಿಗೆ ಹೆಚ್ಚಿನ ಹೊರೆಯಾಗಬಹುದು ಎಂದು ಹೇಳಿದ್ದು, ಅನೇಕರು ಎಬಿಡಿ (ABD) ಮಾತನ್ನು ಬೆಂಬಲಿಸಿದ್ದಾರೆ.
ನನ್ನ ಪ್ರಕಾರ ಮೆಗಾ ಹರಾಜಿನಲ್ಲಿ ರಿಷಭ್ ಪಂತ್ (Rishabh Pant) ದುಬಾರಿಯಾಗುತ್ತಾನೆ ಎಂದು ಭಾವಿಸುತ್ತೇನೆ. ಏಕೆಂದರೆ ಆತನ ಮೇಲೆ ಎಲ್ಲಾ ಫ್ರಾಂಚೈಸಿಗಳು ಕಣ್ಣಿಟ್ಟಿದ್ದು, ನಿರೀಕ್ಷೆಗೂ ಮೀರಿದ ಮೊತ್ತಕ್ಕೆ ಆತ ಬಿಕರಿಯಾಗುತ್ತಾನೆ. ಆತ ಆರ್ಸಿಬಿ (RCB) ಪರ ಕಾಣಿಸಿಕೊಳ್ಳಬೇಕೆಂದು ನಾನು ಇಷ್ಪಪಡುತ್ತೇನೆ. ಆದರೆ, ಆತ ಹಾಗೂ ರಿಕಿ ಪಾಂಟಿಂಗ್ ಜೊತೆ ಪಂಜಾಬ್ ಕಿಂಗ್ಸ್ ಸೇರಬಹುದೆಂದು ಭಾವಿಸಿದ್ದೇನೆ. ಆತ ಆರ್ಸಿಬಿ (RCB) ಪರ ಕಾಣಿಸಿಕೊಳ್ಳುವುದು ಅನೇಕರಿಗೆ ಇಷ್ಟವಿದೆ. ಆದರೆ, ಆತ ತಂಡಕ್ಕೆ ದುಬಾರಿಯಾಗಬಹುದು.
ಪಂತ್ ಜೊತೆಗೆ ರಾಹುಲ್ (KL Rahul) ಕೂಡ ಹರಾಜಿನಲ್ಲಿ ಉತ್ತಮ ಬಿಡ್ ಪಡೆಯಲಿದ್ದಾರೆ. ಆತ ಫಾರ್ಮ್ಗೆ ಮರಳುತ್ತಾನೆ ಎಂಬ ನಂಬಿಕೆ ನನಗಿದೆ. ಹರಾಜಿನಲ್ಲಿ ಆತನನ್ನು ಆರ್ಸಿಬಿ ತಂಡ ಖರೀದಿಸಬೇಕೆಂದು ನಾನು ಬಯಸುತ್ತೇನೆ. ಅದಲ್ಲದೆ ಈ ಬಾರಿಯ ಮೆಗಾ ಹರಾಜಿನಲ್ಲಿ ಆರ್ಸಿಬಿ (RCB) ಬೌಲಿಂಗ್ ವಿಭಾಗದ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ. ವಿಶ್ವದರ್ಜೆಯ ಹಾಗೂ ಸ್ಥಳೀಯ ಆಟಗಾರರ ಮೇಲೆ ನಮ್ಮವರು ಹೆಚ್ಚು ಫೋಕಸ್ ಮಾಡಬೇಕು ಎಂದು ಮಾಹಿ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ (ABD) ಅಭಿಪ್ರಾಯಪಟ್ಟಿದ್ದಾರೆ.
Champions Trophy ವಿಚಾರವಾಗಿ ಪಟ್ಟು ಸಡಿಲಿಸದ ಭಾರತ; BCCI ವಿರುದ್ಧ Court ಮೆಟ್ಟಿಲೇರಲು ಸಜ್ಜಾದ ಪಾಕಿಸ್ತಾನ