ಈ ರಾಶಿಯವರಿಗಿಂದು ಯತ್ನ ಕೆಲಸದಲ್ಲಿ ವಿಘ್ನ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಂಬಂಧಿಗಳಿಂದ ಪಿತೂರಿ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಮಾನಸಿಕ ವೇದನೆ. ಮಾತಿನ ಮೇಲೆ ನಿಗಾ ಇರಲಿ. ಶುಭಸಂಖ್ಯೆ: 9

ವೃಷಭ: ಆರೋಗ್ಯದಲ್ಲಿ ಏರುಪೇರು. ಮಾತೃವಿನೊಂದಿಗೆ ಕಲಹ, ಸಮಾಧಾನ ಮುಖ್ಯ. ಹಿರಿಯರ ಉಪದೇಶದಿಂದ ಮನಶಾಂತಿ. ಶುಭಸಂಖ್ಯೆ: 1

ಮಿಥುನ: ಕುಟುಂಬದಲ್ಲಿ ಅನರ್ಥವಾಗುವ ಸಾಧ್ಯತೆ. ವೃತ್ತಿ ಕ್ಷೇತ್ರದಲ್ಲಿ ಶತ್ರು ಬಾಧೆ. ವಾಹನ ಚಾಲಕರು ಜಾಗರೂಕತೆಯಿಂದ ಇರಿ. ಶುಭಸಂಖ್ಯೆ: 2

ಕಟಕ: ತೀರ್ಥಕ್ಷೇತ್ರಕ್ಕೆ ಯಾತ್ರೆ ಸಾಧ್ಯತೆ. ಹೃದಯ ಸಂಬಂಧೀ ರೋಗ ಕಾಣಿಸಬಹುದು. ಚಂಚಲ ಮನಸ್ಸು ನಿಯಂತ್ರಿಸಿ. ಪರಸ್ಥಳ ವಾಸ. ಶುಭಸಂಖ್ಯೆ: 6

ಸಿಂಹ: ಆಲಸಿ ಮನೋಭಾವದಿಂದ ಹೊರಬನ್ನಿ. ಸಹೋದ್ಯೋಗಿಗಳಿಂದ ಕಲಹ. ದಾಂಪತ್ಯದಲ್ಲಿ ವಿರಸ ಸಾಧ್ಯತೆ. ಅಧಿಕ ಖರ್ಚು. ಶುಭಸಂಖ್ಯೆ: 3

ಕನ್ಯಾ: ಮಹಿಳಾ ಉದ್ಯಮಿಗಳಿಗೆ ಅನಿರೀಕ್ಷಿತ ತಿರುವು. ನೀಚ ಜನರಿಂದ ತೊಂದರೆ. ಕೃಷಿಯಲ್ಲಿ ಲಾಭ. ಸ್ತ್ರೀಯರಿಗೆ ಇಷ್ಟಾರ್ಥಸಿದ್ಧಿ. ಶುಭಸಂಖ್ಯೆ: 3

ತುಲಾ: ಮಾನಸಿಕ ವೇದನೆ ಕಾಡಬಹುದು. ಹಿತಶತ್ರುಗಳಿಂದ ತೊಂದರೆ. ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ. ಮಕ್ಕಳಿಂದ ಬೋಧನೆ. ಶುಭಸಂಖ್ಯೆ: 2

ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಯತ್ನ ಕೆಲಸದಲ್ಲಿ ವಿಘ್ನ. ಶತ್ರುಗಳ ಜಾಲಕ್ಕೆ ಬೀಳುವಿರಿ. ಎಚ್ಚರದಿಂದಿರಿ. ಶುಭಸಂಖ್ಯೆ: 6

ಧನುಸ್ಸು: ಉದ್ಯೋಗದಲ್ಲಿ ಅಭಿವೃದ್ಧಿಯಾಗಲಿದೆ. ವಾದ-ವಿವಾದಗಳಲ್ಲಿ ಭಾಗಿ. ದೂರ ಪ್ರಯಾಣ ಸಾಧ್ಯತೆ. ಹಿತಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 1

ಮಕರ: ತಾಳ್ಮೆಯನ್ನು ಕಾಪಾಡಿಕೊಳ್ಳುವುದು ಅಗತ್ಯ. ಅನ್ಯ ಜನರಲ್ಲಿ ದ್ವೇಷ. ರೋಗಬಾಧೆ. ಅಕಾಲ ಭೋಜನ. ಹೊಸ ಸಮಸ್ಯೆಗಳು. ಶುಭಸಂಖ್ಯೆ: 6

ಕುಂಭ: ಕೃಷಿ ಉತ್ಪನ್ನ ವ್ಯಾಪಾರದಲ್ಲಿ ಅಧಿಕ ಲಾಭ. ಅಧಿಕ ಖರ್ಚು ಕೂಡ ಇದೆ. ಎಲ್ಲಿ ಹೋದರೂ ಅಶಾಂತಿ. ಕಾರ್ಯಗಳಲ್ಲಿ ಕಲಹ. ಶುಭಸಂಖ್ಯೆ: 4

ಮೀನ: ನಿವೇಶನ ಖರೀದಿ. ಕಾರ್ಖಾನೆ ಕೆಲಸಗಾರರಿಗೆ ಆಕಸ್ಮಿಕ ಧನಲಾಭ. ಅಪರಿಚಿತರಿಂದ ಸಹಾಯ. ಸಾರ್ವಜನಿಕ ರಂಗದಲ್ಲಿ ಮನ್ನಣೆ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net