ಈ ರಾಶಿಯವರಿಗಿಂದು ಕೆಲಸ ಕಾರ್ಯಗಳಲ್ಲಿ ಮುನ್ನಡೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ದ್ರವ್ಯಲಾಭವಾಗಲಿದೆ. ಪರರಿಗೆ ಸಹಾಯ ಮಾಡುವಿರಿ. ಶತ್ರು ಬಾಧೆ. ಯತ್ನ ಕಾರ್ಯಗಳಲ್ಲಿ ಜಯ. ಕುಲದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 5

ವೃಷಭ: ಯಾರನ್ನೂ ಹೆಚ್ಚಾಗಿ ನಂಬಬೇಡಿ. ಮಾತಾಪಿತ ರೊಂದಿಗೆ ಪ್ರೀತಿಯಿಂದ ವರ್ತಿಸಿ. ಆದಾಯಕ್ಕಿಂತ ಖರ್ಚು ಜಾಸ್ತಿ ಆಗಲಿದೆ. ಶುಭಸಂಖ್ಯೆ: 9

ಮಿಥುನ: ಕಾರ್ಯಕ್ಷೇತ್ರದಲ್ಲಿ ಉತ್ತಮ ಬಾಂಧವ್ಯ. ಪರಸ್ತ್ರೀಯಿಂದ ತೊಂದರೆ ಆಗಬಹುದು. ವಿದೇಶಿ ವಿನಿಮಯದಿಂದ ಲಾಭ. ಶುಭಸಂಖ್ಯೆ: 1

ಕಟಕ: ಪಾಲುದಾರಿಕೆ ವ್ಯಾಪಾರದಲ್ಲಿ ವಂಚನೆ. ಮಕ್ಕಳ ವಿಚಾರದಲ್ಲಿ ಅಧಿಕ ಚಿಂತೆ ಕಾಡುವುದು. ಲೇವಾದೇವಿ ವ್ಯವಹಾರಗಳಲ್ಲಿ ಮೋಸ. ಶುಭಸಂಖ್ಯೆ: 6

ಸಿಂಹ: ಅಮೂಲ್ಯ ವಸ್ತುವನ್ನು ಕಳೆದುಕೊಳ್ಳುವಿರಿ. ಮಿತ್ರರ ಆಗಮನದಿಂದ ಸಂತಸ. ರಿಯಾಯಿತಿ ವಸ್ತುಗಳಿಗೆ ಬೇಡಿಕೆ ಬರಲಿದೆ. ಶುಭಸಂಖ್ಯೆ: 8

ಕನ್ಯಾ: ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ. ಬದುಕಿನಲ್ಲಿ ತಿರುವು. ಸರ್ಕಾರಿ ಕ್ಷೇತ್ರದಲ್ಲಿ ಕಾರ್ಯದಲ್ಲಿ ಗೊಂದಲ. ಸ್ತ್ರೀಯರಿಗೆ ಶುಭ ಸಮಯ. ಶುಭಸಂಖ್ಯೆ: 2

ತುಲಾ: ಕಚೇರಿಯಲ್ಲಿ ವಿಪರೀತ ಕೆಲಸ. ವಾಹನದಿಂದ ತೊಂದರೆ ಆಗಬಹುದು. ಶತ್ರು ಬಾಧೆ. ಕೆಲಸ ಕಾರ್ಯಗಳಲ್ಲಿ ಮುನ್ನಡೆ. ಶುಭಸಂಖ್ಯೆ: 9

ವೃಶ್ಚಿಕ: ದಾಯಾದಿಗಳಿಂದ ತೊಂದರೆ ಸಾಧ್ಯತೆ. ಶತ್ರು ಪರಾಜಯವಾಗಿ ಸಂತಸ. ಗಣ್ಯ ವ್ಯಕ್ತಿಗಳ ಭೇಟಿ. ಅನ್ಯ ಜನರಲ್ಲಿ ವೈಮನಸ್ಯ. ಶುಭಸಂಖ್ಯೆ: 4

ಧನುಸ್ಸು: ಪರಿಶ್ರಮಕ್ಕೆ ತಕ್ಕಷ್ಟು ವರಮಾನ ಬರಲಿದೆ. ಹಿತಶತ್ರುಗಳ ಬಾಧೆಯಿಂದ ಬೇಸರ. ಕುಟುಂಬದ ಆಂತರಿಕ ಕಲಹ ನಿವಾರಣೆ. ಶುಭಸಂಖ್ಯೆ: 6

ಮಕರ: ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ. ವಿನಾಕಾರಣ ಕಲಹ ಬೇಡ. ಮಾನಸಿಕ ಒತ್ತಡದಿಂದ ಮುಕ್ತರಾಗಲು ಧ್ಯಾನದ ಮೊರೆಹೋಗಿ. ಶುಭಸಂಖ್ಯೆ: 3

ಕುಂಭ: ಹೋಟೆಲ್ ಉದ್ಯಮದಲ್ಲಿ ನಿರೀಕ್ಷಿತ ಯಶಸ್ಸು. ಗುರು ಹಿರಿಯರ ಸಲಹೆ ಪಡೆಯಿರಿ. ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಲಭ್ಯ. ಶುಭಸಂಖ್ಯೆ: 7

ಮೀನ: ಸರ್ಕಾರಿ ಕೆಲಸದವರಿಗೆ ಒಳ್ಳೆಯ ಯೋಗ. ಧಾರ್ವಿುಕ ಕೆಲಸಕಾರ್ಯಗಳಲ್ಲಿ ಭಾಗಿ. ಸ್ತ್ರೀಯರಿಗೆ ಶುಭ. ಕಾರ್ಯದಲ್ಲಿ ಒತ್ತಡ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net