ಈ ರಾಶಿಯವರಿಗಿಂದು ಆರ್ಥಿಕ ಕೊರತೆ ಕಡಿಮೆ, ವ್ಯವಹಾರದಲ್ಲಿ ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆರ್ಥಿಕ ಕೊರತೆ ಕಡಿಮೆಯಾಗುತ್ತದೆ. ಹೋಟೆಲ್ ಮಾಲೀಕರಿಗೆ ಹಣಕಾಸಿನಲ್ಲಿ ಹಿಡಿತವಿರಲಿ. ಭೂ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 5

ವೃಷಭ: ಪ್ರಯಾಣದಿಂದ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಶತ್ರುಗಳಿಂದ ಕಿರಿಕಿರಿ. ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆಯಾಗುವುದು. ಶುಭಸಂಖ್ಯೆ: 9

ಮಿಥುನ: ಆರೋಗ್ಯದಲ್ಲಿ ಏರುಪೇರು. ವೈದ್ಯಕೀಯ ವೃತ್ತಿಯವರಿಗೆ ಮಾನಸಿಕವಾಗಿ ಬಳಲಿಕೆ. ಪತ್ನಿಯ ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 1

ಕಟಕ: ಸಂತಾನಾಕಾಂಕ್ಷಿಗಳಿಗೆ ಅಶುಭದಾಯಕ ದಿನ. ಪಾಲುದಾರಿಕೆಯಲ್ಲಿ ಆದಾಯ. ಹಿರಿಯ ಅಧಿಕಾರಿಗಳಿಗೆ ಸಮಸ್ಯೆಯಾಗುವುದು. ಶುಭಸಂಖ್ಯೆ: 3

ಸಿಂಹ: ಬೇಕರಿ ವ್ಯಾಪಾರದಲ್ಲಿ ಲಾಭ. ಸಾರಿಗೆ ಕಾರ್ವಿುಕರಿಗೆ ಅನಿರೀಕ್ಷಿತ ಧನ ಲಾಭ. ಆರ್ಥಿಕ ವಿಚಾರಕ್ಕೆ ಕುಟುಂಬದಲ್ಲಿ ಮನಸ್ತಾಪ. ಶುಭಸಂಖ್ಯೆ: 7

ಕನ್ಯಾ: ಸಂತಾನಾಕಾಂಕ್ಷಿಗಳಿಗೆ ಸಕಾರಾತ್ಮಕ ಫಲಿತಾಂಶ ಸಿಗಲಿದೆ. ವಾಹನ ಲಾಭ. ಬೇಸಾಯದಲ್ಲಿ ಉತ್ತಮ ಆದಾಯ ದೊರೆಯಲಿದೆ. ಶುಭಸಂಖ್ಯೆ: 7

ತುಲಾ: ವಿವಾಹಾಕಾಂಕ್ಷಿಗಳಿಗೆ ಸೂಕ್ತ ಸಂಗಾತಿ ಸಿಗುವರು. ಕಟ್ಟಡ ಸಾಮಗ್ರಿಗಳ ವ್ಯಾಪಾರದಲ್ಲಿ ಲಾಭ. ಕುಟುಂಬದೊಂದಿಗೆ ಪ್ರವಾಸ. ಶುಭಸಂಖ್ಯೆ: 8

ವೃಶ್ಚಿಕ: ಇಲಾಖೆ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವಿರಿ. ಚಿನ್ನ ಬೆಳ್ಳಿ ವ್ಯಾಪಾರದಲ್ಲಿ ಆದಾಯ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 3

ಧನಸ್ಸು: ಔತಣಕೂಟಕ್ಕೆ ಅಧಿಕ ಖರ್ಚು ಆಗುವುದು. ರಾಜಕೀಯ ಪ್ರವೇಶಿಸಲು ಇದು ಸಕಾಲ. ಆತ್ಮವಿಶ್ವಾಸದ ಕೊರತೆ ಕಾಡಬಹುದು. ಶುಭಸಂಖ್ಯೆ: 6

ಮಕರ: ಅನಿರೀಕ್ಷಿತ ಧನಲಾಭವಾಗಿ ಸಂತಸ. ಬರಹಗಾರರಿಗೆ ಉತ್ತಮ ದಿನ. ಕಮಿಷನ್ ವ್ಯವಹಾರದಲ್ಲಿ ಅನಿರೀಕ್ಷಿತ ಆದಾಯ. ಶುಭಸಂಖ್ಯೆ: 2

ಕುಂಭ: ಕೆಲಸ ಕಾರ್ಯಗಳಲ್ಲಿ ಹಿನ್ನಡೆಯಾಗಿ ಬೇಸರ. ಹೆಚ್ಚಿನ ಪ್ರಯತ್ನದ ಅವಶ್ಯಕತೆ ಇದೆ, ನೆನಪಿನಲ್ಲಿಡಿ. ಹೈನುಗಾರಿಕೆಯಲ್ಲಿ ಶುಭ. ಶುಭಸಂಖ್ಯೆ: 8

ಮೀನ: ಸಣ್ಣ ವ್ಯವಹಾರದಲ್ಲಿ ಅಧಿಕ ಲಾಭವಾಗುವುದು. ಮಹಿಳಾ ರಾಜಕಾರಣಿಗಳಿಗೆ ಅಶುಭ, ಹೃದಯ ಸಂಬಂಧಿ ತೊಂದರೆ ಕಾಡಲಿದೆ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net