ವಿಶಾಖಪಟ್ಟಣಂ: ಶಿವರಾತ್ರಿ ಮುಗಿಯುತ್ತಿದ್ದಂತೆ ಚಳಿಗಾಲ ಅಂತ್ಯಗೊಂಡು ಬೇಸಿಗೆ ಆರಂಭವಾಗಿದ್ದು, ಜನರು ಹೆಚ್ಚಾಗಿ ಎಸಿ, ಕೂಲರ್ ಹಾಗೂ ಫ್ಯಾನ್ಗಳ ಮೊರೆ ಹೋಗುತ್ತಿದ್ದಾರೆ. ಚಳಿಗಾಲದಲ್ಲಿ ಹೆಚ್ಚಿನ ಜನರು ಎಸಿಯನ್ನು (AC) ಬಳಸದೇ ಹಾಗೆಯೇ ಬಿಟ್ಟಿರುತ್ತಾರೆ. ಬೇಸಿಗೆ ಸಮಯದಲ್ಲಿ ಮಾತ್ರ ಆನ್ ಮಾಡುತ್ತಾರೆ. ಹೀಗೆ ಬಹಳ ಸಮಯದ ನಂತರ ಎಸಿಯನ್ನು ಆನ್ ಮಾಡಿದರೆ ಏನೆಲ್ಲಾ ಆಗಬಹುದು ಎಂಬುದಕ್ಕೆ ಈ ಘಟನೆ ಜೀವಂತ ಸಾಕ್ಷಿಯಾಗಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಪೆಂಡುರ್ತಿಯಲ್ಲಿ ಈ ಘಟನೆ ನಡೆದಿದ್ದು, ಬಹಳ ದಿನಗಳಿಂದ ಎಸಿಯನ್ನು (AC) ಆನ್ ಮಾಡಿದಾಗ ಅದರೊಳಗೆ ಹಾವು ಹಾಗೂ ಅದರ ಮರಿಗಳು ಕಂಡು ಬಂದಿರುವ ಆಘಾತಕಾರಿ ಘಟನೆ ನಡೆದಿದ್ದು, ಸತ್ಯನಾರಾಯಣ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ.
చాలా రోజుల తర్వాత ఏసీ వేస్తున్నారా.. అయితే మీ ఏసీలో కూడా ఇలానే పాములు ఉండొచ్చు
విశాఖ జిల్లా పెందుర్తిలో సత్యనారాయణ అనే వ్యక్తి ఇంట్లోని ఏసీలో పిల్లలు పెట్టిన పాము
సమాచారం అందుకొని ఏసీలో ఉన్న పాము, పిల్లలను బయటికి తీసిన స్నేక్ క్యాచర్
దీంతో అన్ని పాము పిల్లలను చూసి భయందోళనకు… pic.twitter.com/8fa7V9DKvC
— Telugu Scribe (@TeluguScribe) March 12, 2025
ಸತ್ಯನಾರಾಯಣ ಎಮಬುವವರು ಬಹಳ ಸಮಯದಿಂದ ಎಸಿಯನ್ನು (AC) ಬಳಸದೆ ಹಾಗೆಯೇ ಇಟ್ಟಿದ್ದರು, ಬೇಸಿಗೆ ಶುರುವಾಗುತ್ತಿದ್ದಂತೆ ಅವರು ಮನೆಯಲ್ಲಿದ್ದ ಎಸಿಯನ್ನು ಆನ್ ಮಾಡಿದ್ದು, ಆನ್ ಮಾಡುತ್ತಿದ್ದಂತೆ ಅದರೊಳಗಿಂದ ಹಾವು ಅದರ ಮರಿಗಳು ಹೊರಬರಲು ಆರಂಭಿಸಿವೆ. ಕೂಡಲೇ ಅವರು ಉರಗತಜ್ಞರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಉರಗತಜ್ಞ ಹಾವುಗಳನ್ನು ರಕ್ಷಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಎಸಿ ಒಳಗಿನಿಂದ ಉರಗತಜ್ಞರೊಬ್ಬರು ಹಾವು ಹಾಗೂ ಅದರ ಮರಿಗಳನ್ನು ಹೊರತೆಗೆಯುತ್ತಿದ್ದು, ಬಳಿಕ ಅವುಗಳನ್ನು ಬ್ಯಾಗ್ ಒಂದನ್ನು ಹಾಕಿಕೊಂಡು ತೆರಳುವುದನ್ನು ನೋಡಬಹುದಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, 1 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದ್ದು, ಜನರಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ.
ರೋಹಿತ್ ಹೀಗೆಯೇ ಮುಂದುವರೆದರೆ… ಹಿಟ್ಮ್ಯಾನ್ ನಿವೃತ್ತಿಯ ಕುರಿತು ಎಬಿಡಿ ಹೇಳಿಕೆ ವೈರಲ್
ಸರ್ಕಾರಿ ಕೆಲಸ ಸಿಗುತ್ತದೆಂದು ಪತಿಯನ್ನೇ ಕೊಂದ ಪತ್ನಿ; ತನಿಖೆಯಲ್ಲಿ ಬಯಲಾಯ್ತು ಮತ್ತಷ್ಟು ಆಘಾತಕಾರಿ ಅಂಶ