ಈ ರಾಶಿಯವರಿಗಿಂದು ಅಧಿಕ ಧನ ನಷ್ಟ: ನಿತ್ಯಭವಿಷ್ಯ

Nithya Bhavishya
Published on

ಮೇಷ: ತಮ್ಮನ ಆರೋಗ್ಯದಲ್ಲಿ ವ್ಯತ್ಯಾಸ. ಸ್ವಂತ ವ್ಯಾಪಾರದಲ್ಲಿ ಹಿನ್ನಡೆ ಆಗಬಹುದು. ಮಕ್ಕಳಿಗಾಗಿ ಅಧಿಕ ಖರ್ಚು ಮಾಡುವಿರಿ. ಶುಭಸಂಖ್ಯೆ: 5

ವೃಷಭ: ಆರ್ಥಿಕ ವ್ಯವಹಾರಗಳಲ್ಲಿ ಯಶಸ್ಸು ದೊರೆಯುವುದು. ಸಾಲದ ಚಿಂತೆ ಕಾಡಲಿದೆ. ಪಾಲುದಾರಿಕೆಯಲ್ಲಿ ನಷ್ಟ ಉಂಟಾಗುವ ಸಾಧ್ಯತೆ. ಶುಭಸಂಖ್ಯೆ: 9

ಮಿಥುನ: ಅಧಿಕ ಧನ ನಷ್ಟ ಆಗಬಹುದು. ಪ್ರೀತಿ ಪ್ರೇಮದ ವಿಷಯಗಳಿಂದ ಸಮಸ್ಯೆ. ಮಕ್ಕಳ ನಡವಳಿಕೆಯಿಂದ ಬೇಸರವಾದೀತು. ಶುಭಸಂಖ್ಯೆ: 3

ಕಟಕ: ನಷ್ಟ. ಆತ್ಮಗೌರವಕ್ಕೆ ಧಕ್ಕೆ. ಆಸೆ-ಆಕಾಂಕ್ಷೆಗಳಿಗೆ ಕುಟುಂಬಸ್ಥರಿಂದ ವಿರೋಧ. ಸ್ಪರ್ಧಾತ್ಮಕ ವಿಷಯಗಳಿಗೆ ಸ್ವಲ್ಪ ಅಡೆತಡೆ. ಶುಭಸಂಖ್ಯೆ: 9

ಸಿಂಹ: ಭೂ ವ್ಯವಹಾರದಲ್ಲಿ ಸ್ಪರ್ಧೆ ಏರ್ಪಡುವುದು. ಬಂಧು-ಬಾಂಧವರು ದೂರ. ದೈಹಿಕ ಅಸಮರ್ಥತೆ. ಆತ್ಮವಿಶ್ವಾಸದಿಂದ ಜಯ. ಶುಭಸಂಖ್ಯೆ: 1

ಕನ್ಯಾ: ನೀವಾಡುವ ಮಾತಿನಿಂದ ಸಮಸ್ಯೆ ಉಂಟಾಗುವುದು. ಪ್ರಯಾಣದಲ್ಲಿ ಅನಾರೋಗ್ಯ ಬಾಧಿಸಲಿದೆ. ಭವಿಷ್ಯದ ಚಿಂತೆಗಳು. ಶುಭಸಂಖ್ಯೆ: 7

ತುಲಾ: ವ್ಯವಹಾರದಲ್ಲಿ ಹಿನ್ನಡೆ. ರಾಜಕೀಯ ರಂಗದಲ್ಲಿ ಇರುವವರಿಗೆ ಅಪಕೀರ್ತಿ. ಖಾಸಗಿ ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಭರವಸೆ. ಶುಭಸಂಖ್ಯೆ: 3

ವೃಶ್ಚಿಕ: ವಿದೇಶದಿಂದ ಮಕ್ಕಳ ಆಗಮನ. ಗೆಲುವು ಸಾಧಿಸುವ ಛಲ. ಸಂಗಾತಿಯಿಂದ ಸೂಕ್ತ ಸಲಹೆ. ಉದ್ಯೋಗದಲ್ಲಿ ಅನುಕೂಲಕರ ದಿನ. ಶುಭಸಂಖ್ಯೆ: 7

ಧನುಸ್ಸು: ಹೃದಯ ಸಂಬಂಧಿ ಸಮಸ್ಯೆ. ಪ್ರಯಾಣದಲ್ಲಿ ಅನುಕೂಲ. ಕೃಷಿಯಲ್ಲಿ ಬದಲಾವಣೆಗೆ ನಿರ್ಧಾರ. ಆಹಾರ ಕ್ರಮದಲ್ಲಿ ಕಾಳಜಿವಹಿಸಿ. ಶುಭಸಂಖ್ಯೆ: 8

ಮಕರ: ಪೀಠೋಪಕರಣ, ಸೌಂದರ್ಯ ವರ್ಧಕಗಳ ವ್ಯಾಪಾರದಲ್ಲಿ ನಷ್ಟ. ಅನಿರೀಕ್ಷಿತ ಆಪತ್ತು, ಉದ್ಯೋಗ ನಷ್ಟ. ದುಶ್ಚಟಗಳಿಂದ ಸಮಸ್ಯೆ. ಶುಭಸಂಖ್ಯೆ: 6

ಕುಂಭ: ಸ್ಥಿರಾಸ್ತಿಯಿಂದ ನಷ್ಟ. ಮಾನಸಿಕ ದೌರ್ಬಲ್ಯ ಕಾಡಲಿದೆ. ಕೃಷಿಕರಿಗೆ ಅನನುಕೂಲ. ಆಮದು ರಫ್ತು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 9

ಮೀನ: ಪಿತ್ರಾರ್ಜಿತ ಆಸ್ತಿ ಸಮಸ್ಯೆ. ದಾಂಪತ್ಯದಲ್ಲಿ ವಾದ ವಿವಾದ. ದುರ್ವಾರ್ತೆ ಕೇಳುವಿರಿ. ಕೆಲಸ ಕಾರ್ಯಗಳಲ್ಲಿ ಸೋಲು. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net