VIDEO| ಮಹಾಶಿವರಾತ್ರಿಯಂದು ಅಪ್ಪು ನೆನೆದು ಭಾವುಕರಾದ ಸದ್ಗುರು

Appu Isha
Published on

ಕೊಯಂಬತ್ತೂರು: ನಟ, ಕರ್ನಾಟಕ ರತ್ನ, ಪವರ್​ಸ್ಟಾರ್​ ಡಾ. ಪುನೀತ್​ ರಾಜ್​ಕುಮಾರ್​ ದೈಹಿಕವಾಗಿ ಅಗಲಿದ್ದರು ಮಾನಸಿಕವಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಪುನೀತ್​ ರಾಜ್​ಕುಮಾರ್ ಅವರನ್ನು ಅವರ ಅಭಿಮಾನಿಗಳು ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಆರಾಧಿಸುತ್ತಾರೆ. ರಾಜ್ಯ, ದೇಶ, ವಿದೇಶಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಅವರನ್ನು ಜನ ಸ್ಮರಿಸಿಕೊಳ್ಳುತ್ತಾರೆ. ಇದೀಗ ಪುನೀತ್​ ರಾಜ್​ಕುಮಾರ್​ ಅವರನ್ನು ನೆನಸಿಕೊಂಡು ಸದ್ಗುರು ಜಗ್ಗಿ ವಾಸುದೇವ ಅವರು ಭಾವುಕರಾಗಿದ್ದಾರೆ.

ಮಹಾಶಿವರಾತ್ರಿ ಪ್ರಯುಕ್ತ ಇಶಾ ಫೌಂಡೇಶನ್​ ವತಿಯಿಂದ ಕೊಯಂಬತ್ತೂರಿನಲ್ಲಿ ವಿಶೇಷ ಕಾರ್ಯಕ್ರವನ್ನು ಆಯೋಜಿಸಲಾಗಿತ್ತು. ಖ್ಯಾತ ಸಿನಿ ತಾರೆಯರು, ಗಾಯಕರು ಸೇರಿದಂತೆ ಅನೇಕರು ನೆರದಿದ್ದ ಜನರನ್ನು ರಂಜಿಸಿದ್ದಾರೆ. ಈ ವೇಳೆ ಸದ್ಗುರು ಜಗ್ಗಿ ವಾಸುದೇವ ಅವರು ಪವರ್​ಸ್ಟಾರ್​ ಡಾ. ಪುನೀತ್​ ರಾಜ್​ಕುಮಾರ್​ ಅವರನ್ನು ನೆನೆದು ಹಾಡನ್ನು ಹಾಡಿದ್ದು ವೇದಿಕೆ ಮೇಲೆ ಭಾವುಕರಾಗಿದ್ದಾರೆ.

ಕಾವೇರಿ ಕಾಲಿಂಗ್​ ಅಭಿಯಾನಕ್ಕಾಗಿ ರಚಿಸಿದ್ದ ಹಾಡನ್ನು ಪುನೀತ್​ ರಾಜ್​ಕುಮಾರ್​ ಅವರು ಹಾಡಿದ್ದರು ಮತ್ತು ಅಭಿಯಾನವನ್ನು ಬೆಂಬಲಿಸುವಂತೆ ಕರೆ ನೀಡಿದ್ದರು. ಇಂದು ಅವರು ನಮ್ಮೊಂದಿಗೆ ಇಲ್ಲ ಎಂದು ಹಾಡಲು ಶುರು ಮಾಡಿದ ಸದ್ಗುರು ಹಾಗೂ ಗಾಯಕ ಶಂಕರ್​ ಮಹಾದೇವನ್ ಪುನೀತ್​ ರಾಜ್​ಕುಮಾರ್​ ಅವರನ್ನು ನೆನೆದು ವೇದಿಕೆ ಮೇಲೆ​ ಭಾವುಕರಾಗಿದ್ದಾರೆ. ಈ ವಿಡಿಯೋ ಸಾಮಾಜಿ ಜಾಲತಾಣಗಳಲ್ಲಿ ವೈರಲ್​ ಆಗಿದೆ.

Appu Isha
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net