More

    ಹಲವು ವರ್ಷದಿಂದ ಮತ ಹಾಕುತ್ತಿದ್ದವರಿಗೆ ಈ ಬಾರಿ ಶಾಕ್ ಕೊಟ್ಟ ವೋಟರ್ ಲಿಸ್ಟ್: ಮಂಡ್ಯ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ 45ಕ್ಕೂ ಹೆಚ್ಚು ಮತದಾರರು…!

    ಮಳವಳ್ಳಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ದಾಸನದೊಡ್ಡಿ ಗ್ರಾಮದಲ್ಲಿ ಮತದಾರ ಪಟ್ಟಿಯಿಂದ ದೊಡ್ಡ ಎಡವಟ್ಟು ನಡೆದಿದೆ. ಹಲವು ವರ್ಷದಿಂದ ಮತದಾನ ಮಾಡಿಕೊಂಡು ಬಂದಿರುವ 45ಕ್ಕೂ ಹೆಚ್ಚು ಮತದಾರರ ಹೆಸರನ್ನು ಈ ಬಾರಿ ಲಿಸ್ಟ್‌ನಿಂದ ಕೈ ಬಿಟ್ಟಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
    ಮತದಾನ ಮಾಡಲೆಂದು ಮತಗಟ್ಟೆಗೆ ಆಗಮಿಸಿದಾಗ ಈ ಅವಾಂತರ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ದಾಸನದೊಡ್ಡಿ ಗ್ರಾಮಸ್ಥರು ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಕೊಟ್ಟರೂ ಸ್ಥಳಕ್ಕೆ ಬಾರದ ಚುನಾವಣಾಧಿಕಾರಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts